ಸಮಗ್ರ ನ್ಯೂಸ್: 12 ವರ್ಷದ ಹಿಂದೆ ಕಾಲೇಜು ವಿದ್ಯಾರ್ಥಿನಿ ಕು. ಸೌಜನ್ಯ(17) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ನ್ಯಾಯಾಲಯವು ಆರೋಪಿಯಾಗಿದ್ದ ಸಂತೋಷ್ ರಾವ್ ಮೇಲಿನ ಸಾಕ್ಷಧಾರದ ಕೊರತೆಯಿಂದ ಜೂನ್ 16, 2023 ರಂದು ದೋಷಮುಕ್ತಗೊಳಿಸಿ ಆದೇಶ ನೀಡಲಾಗಿತ್ತು.
ಅದರನ್ವಯ ಕೆಳ ನ್ಯಾಯಾಲಯ ಸಂತೋಷ್ ರಾವ್ ವಿರುದ್ದ ದೋಷ-ಮುಕ್ತಗೊಳಿಸಿದ ಆದೇಶದ ವಿರುದ್ಧ ಸಿಬಿಐ ಪರ ವಕೀಲ ಪ್ರಸನ್ನ ಕುಮಾರ್ ಸಲ್ಲಿಸಿದ್ದ ಅಪೀಲು ಜ.30 ರಂದು ಬೆಂಗಳೂರು ಹೈಕೋರ್ಟ್ ನ ನ್ಯಾಯಾಧೀಶರಾದ ಶ್ರೀನಿವಾಸ ಹರೀಶ್ ಕುಮಾರ್ ಮತ್ತು ವಿಜಯ ಕುಮಾರ್ ಎ ಪಾಟೀಲ್ ಅವರಿದ್ದ ವಿಭಾಗಿಯ ಪೀಠ ಸೌಜನ್ಯ ಕೊಲೆ ಪ್ರಕರಣದ ಸಿಬಿಐ ಸಲ್ಲಿಸಿದ ಮರುತನಿಖೆಯ ಮೇಲ್ಮನವಿ ವಿಭಾಗಿಯ ಪೀಠದ ಎದುರು ತನಿಖೆಗೆ ಬಂದಿರುತ್ತದೆ. ಇದೀಗ ವಿಭಾಗಿಯ ನ್ಯಾಯಪೀಠವು ಸಂತೋಷ್ ರಾವ್ ಖುದ್ದು ನ್ಯಾಯಾಲಯಕ್ಕೆ ಹಾಜರಾಗುವಂತೆ ನೋಟಿಸ್ ನೀಡಲು ಆದೇಶ ಮಾಡಿದೆ.