Ad Widget .

ದಿನಂಪ್ರತಿ ಹಸಿದ ಹೊಟ್ಟೆಯಲ್ಲಿ ಕಾಡಿನಿಂದ ತರಕಾರಿ ವಾಹನಗಳನ್ನು ಅರಸಿಕೊಂಡು ಬರುವ ಗಜ ರಾಜ

ಸಮಗ್ರ ನ್ಯೂಸ್: ತಮಿಳುನಾಡಿನ ಗೇರುಮಾಳ ರಸ್ತೆಯಲ್ಲಿ (Gerumala road) ಕಾಡಿನಿಂದ ರೋಡಿಗೆ ಬಂದಿರುವ ಒಂಟಿ ಸಲಗನಿಗೆ ತಾಜಾ ತರಕಾರಿಯೇ (fresh vegetables) ಬೇಕಾಗಿದೆ. ತರಕಾರಿ ವ್ಯಾಪಾರಸ್ಥರು ಕಾಯಿಪಲ್ಲೆಗಳ ಮೂಟೆಗಳನ್ನು ಇದೇ ರಸ್ತೆಯ ಮೂಲಕ ವಾಹನಗಳಲ್ಲಿ ಸಾಗಿಸುವುದು ಸಲಗಕ್ಕೆ ಗೊತ್ತಿದ್ದಂತಿದೆ. ಹಾಗಾಗೇ, ಬೆಳಗಿನ ಸಮಯದಲ್ಲಿ ತರಕಾರಿ ವಾಹನಗಳನ್ನು ಅರಸಿಕೊಂಡು ರಸ್ತೆಗೆ ಬಂದಿದ್ದಾನೆ.

Ad Widget . Ad Widget .

ಆನೆ ತನ್ನ ಘನಗಾಂಭೀರ್ಯ ನಡಿಗೆಯಿಂದ ಟ್ರಕ್ ಗಳ ಬಳಿಗೆ ಬಂದು ಮೂಸುವುದನ್ನು ನೋಡಬಹುದು. ಅವನಿಗೆ ಇಷ್ಟವಾಗುವ ತರಕಾರಿ ಸಿಗುತ್ತಿಲ್ಲ. ಅದಕ್ಕಾಗಿ ಎಲ್ಲ ಟ್ರಕ್ ಗಳ ಬಳಿ ಬಂದು ಪರಿಶೀಲನೆ ನಡೆಸುತ್ತಾನೆ. ಅಷ್ಟೆಲ್ಲ ಹುಡುಕಾಡಿ ತಡಕಾಡಿದರೂ ಅವನಿಗೆ ಬೇಕಾದ ಕಾಯಿಪಲ್ಲೆ ಸಿಗಲ್ಲ. ಹಾಗಂತ ಗಜರಾಜನಿಗೆ ಸಿಟ್ಟೇನೂ ಬರಲ್ಲ. ತನ್ನ ಪಾಡಿಗೆ ತಾನು ನಡೆದು ಹೋಗುತ್ತಾನೆ.

Ad Widget . Ad Widget .

ಗಮನಿಸಬೇಕಾದ ಮತ್ತೊಂದು ಅಂಶವೆಂದರೆ, ಸಲಗ ತಮ್ಮಲ್ಲಿಗೆ ಬರುವುದನ್ನು ನೋಡಿ ಟ್ರಕ್ ಗಳಲ್ಲಿದ್ದ ಜನ ಗಾಬರಿ, ಭೀತಿಗೆ ಒಳಗಾಗುವುದಿಲ್ಲ. ವಾಹನಗಳನ್ನು ರಸ್ತೆಯ ಒಂದು ಬದಿಯಲ್ಲಿ ನಿಲ್ಲಿಸಿ ಅವನಿಗೆ ದಾರಿ ಮಾಡಿಕೊಡುತ್ತಾರೆ. ಪ್ರಾಯಶಃ ಇಂಥ ಸನ್ನಿವೇಶ ಆಗಾಗ ನಡೆಯುತ್ತಿರುತ್ತದೆ.

Leave a Comment

Your email address will not be published. Required fields are marked *