ಸಮಗ್ರ ನ್ಯೂಸ್: ಅಕ್ರಮ ಮರಳುಗಾರಿಕೆ ನಡೆಸುತ್ತಿರುವುದನ್ನು ಪತ್ತೆ ಹಚ್ಚಿರುವ ಸುಳ್ಯ ಪೊಲೀಸರು ಮರಳು ಸಮೇತ ಟಿಪ್ಪರ್ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ. ಟಿಪ್ಪರ್ ಚಾಲಕ ಪರಾರಿಯಾಗಿದ್ದಾನೆ.
ಜ. 30ರಂದು ಸುಳ್ಯ ಎಸ್‌ಐ ಅವರು ಸಿಬ್ಬಂದಿ ಜೊತೆಗೆ ಅರಂತೋಡು ಪೇಟೆ ಬಳಿ ತೆರಳುವ ವೇಳೆ ನೂಜಿಕಲ್ಲು ಎಂಬಲ್ಲಿ ತೋಡಿನಿಂದ ಮರಳನ್ನು ಕಳ್ಳತನ ನಡೆಸುವ ಉದ್ದೇಶದಿಂದ ಅಕ್ರಮವಾಗಿ ಟಿಪ್ಪರ್ ಲಾರಿಗೆ ಲೋಡ್ ಮಾಡುತ್ತಿರುವುದು ಪತ್ತೆಯಾಗಿದೆ.
ಪೊಲೀಸರನ್ನು ಕಂಡ ಚಾಲಕ ಪರಾರಿಯಾದನು. ಪರಿಶೀಲನೆ ವೇಳೆ ಯಾವುದೇ ಪರವಾನಿಗೆ ಇಲ್ಲದೇ ಮರಳು ತೆಗೆಯುವುದು ಪತ್ತೆಯಾಗಿದ್ದು, ಪೊಲೀಸರು ಮರಳು ಸಮೇತ ಟಿಪ್ಪರ್ ಲಾರಿಯನ್ನು ವಶಕ್ಕೆ ಪಡೆದರು. ಟಿಪ್ಪರ್ ಲಾರಿ ಮೌಲ್ಯ 5 ಲಕ್ಷ ರೂ. ಹಾಗೂ ಮರಳಿನ ಮೌಲ್ಯ 5 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.