ಸಮಗ್ರ ನ್ಯೂಸ್: ಚಿಕ್ಕಬಳ್ಳಾಪುರದ ನಂದಿ ಬೆಟ್ಟ ಪ್ರವಾಸಿತಾಣವಾದರೂ ಕೆಲವರಿಗಂತು ಅದು ಸೂಸೈಡ್ ಸ್ಪಾಟ್ ಆಗೋಗಿದೆ.
ಹೌದು ನನ್ನ ಗಂಡ, ಅತ್ತೆ, ಅವರ ಸಂಬಂಧಿಕರು ಸೇರಿ ನನಗೆ ಮಾನಸಿಕ ಕಿರುಕುಳ ನೀಡಿದ್ದಾರೆ. ನನ್ನ ಸಾವಿಗೆ ನನ್ನ ಗಂಡ ನವೀನ್ ಕಾರಣ ಅಂತ ಸೆಲ್ಫಿ ವೀಡಿಯೊ ಮಾಡಿ… ಮಗನ ಕಣ್ಮುಂದೆ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿದ ಈ ಮಹಿಳೆಯ ಹೆಸರು ಕಾವ್ಯಾ, ಬೆಂಗಳೂರಿನ ಕೆ.ಆರ್. ಪುರಂ ಮೂಲದ ಗೃಹಿಣಿ.
ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರಿಧಾಮಕ್ಕೆ ತನ್ನ ಮಗನ ಜೊತೆ ಆಗಮಿಸಿ ಮೈಮೇಲಿದ್ದ ಚಿನ್ನಾಭರಣಗಳು ಮೊಬೈಲ್ ಪರ್ಸ್ ನ್ನು ಮಗನ ಕೈಯಲ್ಲಿ ಕೊಟ್ಟು ಇನ್ನೇನು ನಂದಿಗಿರಿಧಾಮದ ಟಿಪ್ಪು ಡ್ರಾಪ್ ನಿಂದ ಕೆಳಗೆ ಜಿಗಿಯಬೇಕಿತ್ತು ಅಷ್ಟರಲ್ಲಿ ಆಕೆಯ ಮಗ ಜೋರಾಗಿ ಕಿರುಚಿಕೊಂಡಿದ್ದಾನೆ. ಆಗ ಅಲ್ಲೆ ಇದ್ದ ಪ್ರವಾಸಿ ಮಿತ್ರ ಸಿಬ್ಬಂದಿ ನಳಿನಿ ಅನ್ನೊ ಮಹಿಳೆ ತಕ್ಷಣ ಸಾರ್ವಜನಿಕರ ಸಹಾಯದಿಂದ ಕಾವ್ಯಾರನ್ನು ರಕ್ಷಿಸಿ ಮನವೊಲಿಸಿದ್ದಾರೆ
ಅದೇ ನಂದಿಗಿರಿಧಾಮದ ಟಿಪ್ಪು ಡ್ರಾಪ್ ಹಾಗೂ ಅಕ್ಕಪಕ್ಕದಲ್ಲಿ ಯಾರೂ ಆತ್ಮಹತ್ಯೆ ಮಾಡಿಕೊಳ್ಳಬಾರದು, ಮೇಲಿಂದ ಜಿಗಿಯಬಾರದು ಅಂತ ರಾಜ್ಯ ಸರ್ಕಾರ 50 ಲಕ್ಷ ರೂಪಾಯಿ ವೆಚ್ಚದಲ್ಲಿ ಹತ್ತು ಅಡಿ ಎತ್ತರದ ತಡೆಗೋಡೆ ಹಾಕಿಸಿದೆ. ಆದ್ರೂ ಇತ್ತೀಚೆಗೆ ಕೆಲವರು ಆತ್ಮಹತ್ಯೆ ಮಾಡಿಕೊಳ್ಳಲು ಇಲ್ಲಿಗೆ ಆಗಮಿಸಿ, ಕೊನೆಗೆ ಪೊಲೀಸರಿಂದ ರಕ್ಷಣೆ ಪಡೆದುಕೊಂಡಿದ್ದಾರೆ.