Ad Widget .

ಡ್ರೋನ್ ಪ್ರತಾಪ್ ಗೆ ಮತ್ತೊಂದು ಆಫರ್ ನೀಡಿದ ಕಲರ್ಸ್ ಕನ್ನಡ

ಸಮಗ್ರ ನ್ಯೂಸ್: ಬಿಗ್ ಬಾಸ್ ಮೊದಲನೇ ರನ್ನರ್ ಅಪ್ ಆದ ಬೆನ್ನಲ್ಲೇ ಕಲರ್ಸ್ ಕನ್ನಡ ವಾಹಿನಿಯು ಡ್ರೋನ್ ಪ್ರತಾಪ್ ಅವರಿಗೆ ಮತ್ತೊಂದು ಬಿಗ್ ಆಫರ್ ನೀಡಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ವಾಹಿನಿಯ ಅತ್ಯಂತ ಜನಪ್ರಿಯ ಶೋ ಗಿಚ್ಚಿಗಿಲಿಗಿಲಿ ಕಾರ್ಯಕ್ರಮದಲ್ಲಿ ಡ್ರೋನ್ ಪ್ರತಾಪ್ ಕಂಟೆಸ್ಟೆಂಟ್ ಆಗಿ ಆಯ್ಕೆಯಾಗಿದ್ದಾರೆ. ಇಂದಿನಿಂದ ರಿಯಾಲಿಟಿ ಶೋದ ಚಿತ್ರೀಕರಣ ಕೂಡ ಆರಂಭವಾಗಿದ್ದು, ಡ್ರೋನ್ ಪ್ರತಾಪ್ ಮಾತ್ರವಲ್ಲದೆ, ತುಕಾಲಿ ಸಂತೋಷ್, ಮೈಕಲ್ ಮತ್ತು ಇಶಾನಿ ಕೂಡ ಈ ಬಾರಿ ಗಿಚ್ಚಿಗಿಲಿಗಿಲಿಯಲ್ಲಿ ಪ್ರೇಕ್ಷಕರನ್ನು ನಕ್ಕು ನಗಿಸಲಿದ್ದಾರೆ. ಮೂವರು ಕೂಡ ಇಂದಿನಿಂದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಶ್ರುತಿ, ಕೋಮಲ್, ಸಾಧು ಕೋಕಿಲಾ ಇದರ ನಿರ್ಣಾಕರಾಗಿದ್ದಾರೆ.

Ad Widget . Ad Widget . Ad Widget .

ಸಂಕಷ್ಟದಲ್ಲಿ ಪ್ರತಾಪ್
ಡ್ರೋನ್ ಪ್ರತಾಪ್ (Drone Pratap) ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಹಲವಾರು ರೀತಿಯಲ್ಲಿ ಅವರ ಮೇಲೆ ಆರೋಪ ಮಾಡಲಾಗಿತ್ತು. ಡಾ.ಪ್ರಯಾಗ್ ಮಾನನಷ್ಟ ದಾವೆ ಹೂಡಿದ್ದರೆ, ಸಾರಂಗ ಎನ್ನುವವರು ಹಣಕಾಸಿನ ವಿಷಯದಲ್ಲಿ ತಮಗೆ ಮೋಸವಾಗಿದೆ ಎಂದು ಆರೋಪ (Allegation) ಮಾಡಿದ್ದರು. ಈಗ ಎಲ್ಲದಕ್ಕೂ ಪ್ರತಾಪ್ ಉತ್ತರ ನೀಡಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿರುವ ಪ್ರತಾಪ್, ಕೆಲವು ವಿಷಯಗಳ ಬಗ್ಗೆ ಮಾತನಾಡಬಾರದು. ಸಕಾರಾತ್ಮಕ ವಿಷಯಗಳ ಬಗ್ಗೆ ಮಾತನಾಡೋಣ. ಸಾರಂಗ ಅವರ ಆರೋಪದ ಬಗ್ಗೆ ಶೀಘ್ರದಲ್ಲೇ ನಾವು ಭೇಟಿ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ ಎಂದಿದ್ದಾರೆ ಪ್ರತಾಪ್.

ಬಿಗ್ ಬಾಸ್ ಫಿನಾಲೆ ಹಂತಕ್ಕೆ ತಲುಪುತ್ತಿದ್ದಂತೆಯೇ ಡಾ.ಪ್ರಯಾಗ್ ಎನ್ನುವವರು ಡ್ರೋನ್ ಮೇಲೆ ಮಾನನಷ್ಟ ಮೊಕದ್ದಮೆ ಹಾಕಿದ್ದರು. ಇದಾದ ಕೆಲವು ದಿನಗಳ ನಂತರ ತಮಗೆ ಡ್ರೋನ್ ಪ್ರತಾಪ್ ಲಕ್ಷ ಲಕ್ಷ ದೋಖಾ ಮಾಡಿದ್ದಾರೆ ಎಂದು ಸಾರಂಗ ಎನ್ನುವವರು ಆರೋಪ ಮಾಡಿದ್ದರು.

ಪೂಣಾ ಮೂಲದ ಸಾರಂಗ್ ಮಾನೆ (Sarang Mane) ಎನ್ನುವವರು ಡ್ರೋಣ್ ಪ್ರತಾಪ್ ಗೆ ಬರೋಬ್ಬರಿ 83 ಲಕ್ಷ ರೂಪಾಯಿ ನೀಡಿದ್ದಾರಂತೆ. ಈ ಹಣದಲ್ಲಿ 8 ಡ್ರೋಣ್ ನೀಡುವುದಾಗಿ ಪ್ರತಾಪ್ ಹೇಳಿದ್ದರಂತೆ. ಆದರೆ, ಕೊಟ್ಟ ಮಾತಿನಂತೆ ‍ಪ್ರತಾಪ್ ನಡೆದುಕೊಂಡಿಲ್ಲ ಎನ್ನುವುದು ಮಾನೆ ಆರೋಪ.

ಪ್ರತಾಪ್ ಈಗಾಗಲೇ 2 ಡ್ರೋಣ್ ಕಳಿಸಿದ್ದಾರೆ. ಆದರೆ, ಅವು ಸರಿಯಾಗಿ ಕಾರ್ಯ ಮಾಡುತ್ತಿಲ್ಲ. ಒಂದು ವರ್ಷವಾಗಿದೆ ಹಣವನ್ನೂ ಕೊಡುತ್ತಿಲ್ಲ ಎಂದು ಸಾರಂಗ್ ಮಾನೆ. ಆರೋಪ ಮಾಡುತ್ತಿದ್ದಾರೆ. ರೈತರ ಬೆಳೆಗಳಿಗೆ ಕ್ರಿಮಿನಾಶಕ ಔಷಧ ಸಿಂಪಡಿಸುವ ಡ್ರೋಣ್ ಗಳ ಎಕ್ಸಿಬಿಷನ್ ವೇಳೆ ಸಾರಂಗ್ ಮಾನೆ ಅವರಿಗೆ ಡ್ರೋಣ್ ಪ್ರತಾಪ್ (Drone Prathap) ಪರಿಚವಾಗಿದ್ದರಂತೆ. ರೈತರಿಗೆ ಡ್ರೋಣ್ ಕಳಿಸಿಕೊಡುವ ಟೆಂಡರ್ ಪಡೆದಿದ್ದ ಸಾರಂಗ್ ಮಾನೆ ಅವರು ಪ್ರತಾಪ್ ಗೆ ಜವಾಬ್ದಾರಿ ನೀಡಿದ್ದರು.

Leave a Comment

Your email address will not be published. Required fields are marked *