Ad Widget .

ಬಜೆಟ್ ನಡುವೆ ಡಿ.ಕೆ ಸುರೇಶ್ ಪ್ರತ್ಯೇಕತೆ ಕೂಗು

ಸಮಗ್ರ ನ್ಯೂಸ್: ಇಂದು ನಿರ್ಮಲಾ ಸೀತಾರಾಮನ್ ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಮಂಡಿಸಿದ್ದಾರೆ. ಈ ನಡುವೆ ಬಜೆಟ್​ ಕುರಿತಂತೆ ಟೀಕಿಸಿರುವ ಕಾಂಗ್ರೆಸ್ ಸಂಸದ ಡಿ.ಕೆ ಸುರೇಶ್​​ ಅವರು, ಪ್ರತ್ಯೇಕ ರಾಷ್ಟ್ರದ ಕೂಗು ಎತ್ತಿದ್ದಾರೆ.

Ad Widget . Ad Widget .

ಬಜೆಟ್​ ಕುರಿತಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಕೆ ಸುರೇಶ್​ ಅವರು, ಕೇಂದ್ರ ಸರ್ಕಾರದ ಇವತ್ತಿನ ಬಜೆಟ್​ನಲ್ಲಿ ಅವರ ಚುನಾವಣಾ ಪ್ರಚಾರದ ಹೇಳಿಕೆಗಳು ಮಾತ್ರ ಕೇಳಿಸುತ್ತಿವೆ. ಇವತ್ತು ಮಧ್ಯಂತರ ಬಜೆಟ್ ಅಂತ ಸಂಸತ್​ನಲ್ಲಿ ಮಂಡಿಸಿದ್ದಾರೆ. ಅದರಲ್ಲಿ ಕೇವಲ ನಾಮಫಲಕಗಳು ಮಾತ್ರ ಬದಲಾಗಿದೆ. ಸಂಸ್ಕೃತ ಮತ್ತು ದೇಶೀಯ ಹೆಸರಗಳನ್ನು ಉಪಯೋಗಿಸಿ ಜನರನ್ನು ದಾರಿ ತಪ್ಪಿಸುವ ಬಜೆಟ್​ ಕೊಟ್ಟಿದ್ದಾರೆ. ಬೆಲೆ ಹೆಚ್ಚಳ, ಆರ್ಥಿಕ ಸರ್ವೆ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಆರ್ಥಿಕ ಸರ್ವೆ ಮಾಹಿತಿ ನೀಡಿದ್ದರೆ ದೇಶದ ಅಭಿವೃದ್ಧಿ ಬಗ್ಗೆ ಮಾಹಿತಿ ಸಿಕ್ಕಿರೋದು. ಅದನ್ನು ಮುಚ್ಚಿಟ್ಟು ಮಾಡಿದ್ದಾರೆ, ತೆರಿಗೆ ವಿಚಾರದಲ್ಲಿ ಮಾತ್ರ ಅಲ್ಪ ಬದಲಾವಣೆ ಮಾಡಿ ಮೂಗಿದೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ ಅಷ್ಟೇ ಟೀಕಿಸಿದರು.

Ad Widget . Ad Widget .

ಗ್ಯಾರಂಟಿ ಹೆಸರಿನಲ್ಲಿ ಇವರೇ ಚುನಾವಣೆಗೆ ಹೊರಟಿದ್ದಾರೆ. ದಕ್ಷಿಣ ಭಾರತದ ಹಣವನ್ನು ಉತ್ತರ ಭಾರತಕ್ಕೆ ಹರಿಸ್ತಿದ್ದಾರೆ. ಇದರಿಂದ ನಮಗೆ ಆರ್ಥಿಕವಾಗಿ ತೊಂದರೆಯಾಗುತ್ತಿದೆ. ಹೀಗೇ ಮುಂದುವರೆದರೆ ದಕ್ಷಿಣ ಭಾರತ ಬೇರೆ ಆಗಬಹುದು. ಪ್ರತ್ಯೇಕ ದೇಶ ಎಂಬ ಕೂಗು ಅನಿವಾರ್ಯ ಆಗಲಿದೆ ಎಂದು ಹೇಳಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರು ವಾಗ್ದಾಳಿಯನ್ನು ನಡೆಸಿದ್ದಾರೆ.

Leave a Comment

Your email address will not be published. Required fields are marked *