ತಿರುಪತಿಯ ಬೀದಿಯಲ್ಲಿ ಭಿಕ್ಷುಕನಂತೆ ತಿರುಗಿದ ಖ್ಯಾತ ನಟ

ಸಮಗ್ರ ನ್ಯೂಸ್: ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗುತ್ತಿದ್ದವರೆಲ್ಲ ಟ್ರಾಫಿಕ್ ಜಾಮ್ ನಿಂದ ಪರದಾಡಬೇಕಾಯಿತು. ಧನುಷ್ ಅವರ 51ನೇ ಸಿನಿಮಾ ನಟನೆ ತಿರುಪತಿಯಲ್ಲಿ ನಡೆಯುತ್ತಿದ್ದು, ಭಿಕ್ಷುಕನಂತೆ ಕಾಣುತ್ತಿದ್ದ ದೃಶ್ಯವನ್ನು ಬೀದಿಯಲ್ಲಿ ಸೆರೆ ಹಿಡಿಯಲಾಗಿದೆ.

Ad Widget ... ..

ಬೀದಿಯಲ್ಲಿ ಚಿತ್ರೀಕರಣ (Shooting) ಮಾಡುತ್ತಿದ್ದರಿಂದ ವಾಹನ ಸವಾರರು ಕಿರಿಕಿರಿ ಅನುಭವಿಸಿದ್ದಾರೆ. ಚಿತ್ರತಂಡಕ್ಕೆ ಹಿಡಿಶಾಪ ಹಾಕಿದ್ದಾರೆ. ಪೊಲೀಸರು ಶೂಟಿಂಗ್ ನಿಲ್ಲಿಸುವಂತೆ ಸೂಚನೆ ಕೊಟ್ಟಿದ್ದಾರೆ. ಇಷ್ಟೆಲ್ಲ ನಡೆದರೂ, ಚಿತ್ರೀಕರಣ ಯಶಸ್ವಿಯಾಗಿದೆ ಎಂದು ತಿಳಿದು ಬಂದಿದೆ.

Ad Widget

ಇದೊಂದು ಮಾಫಿಯಾ ಕಥೆಯನ್ನು ಹೊಂದಿರುವ ಸಿನಿಮಾ ಇದಾಗಿದೆ. ಕನ್ನಡದ ಕುವರಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿರುವ, ಈ ಸಿನಿಮಾದ ಮೂಲಕ ಮತ್ತೊಂದು ತಮಿಳು ಚಿತ್ರವನ್ನು ಅವರು ಒಪ್ಪಿಕೊಂಡಿದ್ದಾರೆ.

ಶೂಟಿಂಗ್ ಮುಗಿಯುತ್ತಿದ್ದಂತೆಯೇ ಚಿತ್ರತಂಡ ತಿರುಪತಿ ತಿಮ್ಮಪ್ಪನ ದರ್ಶನ ಪಡೆದುಕೊಂಡು ವಾಪಸ್ಸು ಚೆನ್ನೈಗೆ ತೆರೆಳಿದೆಯಂತೆ. ಬೀದಿಯಲ್ಲಿ ಚಿತ್ರೀಕರಿಸುತ್ತಿರುವ ವಿಡಿಯೋ ಸಖತ್ ವೈರಲ್ ಕೂಡ ಆಗಿದೆ.

Leave a Comment

Your email address will not be published. Required fields are marked *