January 2024

ಪೆರಾಜೆ ಕುಂಬಳಚೇರಿ ಶಾಲಾ ಅಮೃತಮಹೋತ್ಸವ|ಇಂದಿನ ಮಕ್ಕಳೇ ದೇಶದ ಭವಿಷ್ಯ: ಶಾಸಕ ಎ.ಎಸ್.ಪೊನ್ನಣ್ಣ

ಸಮಗ್ರ ನ್ಯೂಸ್: ಪೆರಾಜೆಯ ಕುಂಬಳಚೇರಿ ಸರಕಾರಿ ಹಿ.ಪ್ರಾ.ಶಾಲಾ ಅಮೃತಮಹೋತ್ಸವ ಸಮಿತಿ ವತಿಯಿಂದ ಜ.27 ರಂದು ನಡೆಯಿತು. ಕಾರ್ಯಕ್ರಮವನ್ನು ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣಅವರು ಉದ್ಘಾಟಿಸಿ ಸರಕಾರಿ ಶಾಲೆಗಳು ದೇಶಕ್ಕೆ ದೊಡ್ಡ ಕೊಡುಗೆ ನೀಡಿದೆ. ಸರಕಾರಿ ಶಾಲೆಗಳಲ್ಲಿ ಓದುವ ಮಕ್ಕಳು ಅತೀ ಬುದ್ಧಿವಂತರು. ಅವರನ್ನು ಸ್ವತಂತ್ರ ಆಲೋಚನಾ ಶಕ್ತಿ, ಸಾಮರ್ಥ್ಯಶಕ್ತಿಯನ್ನು ಹೆಚ್ಚಿಸಲು, ಯಶಸ್ವಿ ಕಂಡರೂ ಏಳು-ಬೀಳುಗಳನ್ನು ಕಾಣುವಂತೆ ಮಾಡಿ, ಸಮಾಜಕ್ಕೆ ಪೂರಕವಾಗಿ ಮಕ್ಕಳನ್ನು ಪೋಷಿಸುವ ಜವಾಬ್ದಾರಿ ಪೋಷಕರಿಗೆ ಇದೆ. ಜತೆಗೆ ಮಕ್ಕಳನ್ನು ತಿದ್ದಿ-ತೀಡಿ ಒಂದು ರೂಪವನ್ನು ಕೊಡುವ ಜವಾಬ್ದಾರಿ ಶಿಕ್ಷಕರಿಗೆ […]

ಪೆರಾಜೆ ಕುಂಬಳಚೇರಿ ಶಾಲಾ ಅಮೃತಮಹೋತ್ಸವ|ಇಂದಿನ ಮಕ್ಕಳೇ ದೇಶದ ಭವಿಷ್ಯ: ಶಾಸಕ ಎ.ಎಸ್.ಪೊನ್ನಣ್ಣ Read More »

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ದಿನ ಭವಿಷ್ಯ ಹೇಗಿದೆ, ವಾರ ಭವಿಷ್ಯ, ಮಾಸಿಕ ಭವಿಷ್ಯ ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಜ. 28ರಿಂದ ಫೆ.2ರವರೆಗಿನ ರಾಶಿಗಳ ಗೋಚಾರಫಲ ಹೇಗಿದೆ ನೋಡೋಣ ಬನ್ನಿ… ಮೇಷ ರಾಶಿ:ಈ ವಾರ ನೀವು ಆರೋಗ್ಯದ ಬಗ್ಗೆ ಜಾಗ್ರತೆವಹಿಸಿದರೆ ಒಳ್ಳೆಯದು. ಯೋಜನೆಗಳಲ್ಲಿ ಹೂಡಿಕೆ ಮಾಡಲು ಈ ಸಮಯವನ್ನು ತುಂಬಾ ಒಳ್ಳೆಯದು. ಈ ಅವಕಾಶಗಳು ಜಾರಿಕೊಳ್ಳಲು ಬಿಡಬೇಡಿ. ಈ ಸಮಯದಲ್ಲಿ, ನೀವು ನಿಮ್ಮ ಕುಟುಂಬದ ಸದಸ್ಯರೊಂದಿಗೆ

ದ್ವಾದಶ ರಾಶಿಗಳ ವಾರಭವಿಷ್ಯ Read More »

ಸರ್ಕಾರಿ ಹುದ್ದೆ ಹುಡುಕುತ್ತಾ ಇದ್ದೀರಾ? ಅರ್ಜಿ ಸಲ್ಲಿಸಲು ಇಂದೇ ಕೊನೆ ದಿನ

ಸಮಗ್ರ ಉದ್ಯೋಗ: ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 16 ಸ್ಟೇಟ್ ಕನ್ಸಲ್ಟೆಂಟ್, ಪ್ರಾಜೆಕ್ಟ್ ಅಸಿಸ್ಟೆಂಟ್​​ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಜನವರಿ 28, 2024 ಅಂದರೆ ನಾಳೆ ಅಪ್ಲೈ ಮಾಡಲು ಕೊನೆಯ ದಿನವಾಗಿದೆ. ಆಸಕ್ತರು ಆನ್​​ಲೈನ್ ಮೂಲಕ ಅಪ್ಲೈ ಮಾಡಬೇಕು. ಹುದ್ದೆಯ ಮಾಹಿತಿ:ಸ್ಟೇಟ್ ಕನ್ಸಲ್ಟೆಂಟ್-8ಪ್ರಾಜೆಕ್ಟ್ ಅಸಿಸ್ಟೆಂಟ್-7ಸೆಕ್ರೆಟರಿಯಲ್ ಅಸಿಸ್ಟೆಂಟ್- 1 ವಿದ್ಯಾರ್ಹತೆ:ಸ್ಟೇಟ್ ಕನ್ಸಲ್ಟೆಂಟ್- ಎಂಬಿಎ, ಸ್ನಾತಕೋತ್ತರ ಪದವಿಪ್ರಾಜೆಕ್ಟ್ ಅಸಿಸ್ಟೆಂಟ್- ಪದವಿ,

ಸರ್ಕಾರಿ ಹುದ್ದೆ ಹುಡುಕುತ್ತಾ ಇದ್ದೀರಾ? ಅರ್ಜಿ ಸಲ್ಲಿಸಲು ಇಂದೇ ಕೊನೆ ದಿನ Read More »

ಲೋಕಸಭಾ ಚುನಾವಣೆಗೆ ಬಿಜೆಪಿ ಅಲರ್ಟ್| ಬಿಜೆಪಿ ಜೊತೆ ಕೆಆರ್​ಪಿಪಿ ಮೈತ್ರಿ….?

ಸಮಗ್ರ ನ್ಯೂಸ್: ಬಿಜೆಪಿ ಜೊತೆ ಕೆಆರ್​ಪಿಪಿ ಮೈತ್ರಿ ಮಾಡಿಕೊಳ್ಳಲು ಸಿದ್ಧರಿದ್ದೇವೆ ಎಂದು ಕೆಆರ್​ಪಿಪಿ ಸಂಸ್ಥಾಪಕ ಜನಾರ್ದನ ರೆಡ್ಡಿ ಹೇಳಿದ್ದಾರೆ. ಮೋದಿ ಮತ್ತೆ ಪ್ರಧಾನಿಯಾಗಬೇಕು. ಮೋದಿ ಪ್ರಧಾನಿಯಾಗಲು ಹೊಂದಾಣಿಕೆಗೆ ಕೆಆರ್​ಪಿಪಿ ಸಿದ್ಧ. ನಮ್ಮ ಪಕ್ಷದಿಂದ ಗೆದ್ದ ಮೇಲೆ ಬಿಜೆಪಿಗೆ ಸಪೋರ್ಟ್ ಮಾಡುತ್ತೇನೆ. ಬಿಜೆಪಿ ನಾಯಕರು ನನ್ನ ಜೊತೆ ಚರ್ಚೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಜಗದೀಶ್ ಶೆಟ್ಟರ್ ಬಿಜೆಪಿಗೆ ಮರು ಸೇರ್ಪಡೆಯಾದ ಬಳಿಕ ಈಗ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರನ್ನು ಬಿಜೆಪಿ ಸಂಪರ್ಕ ಮಾಡುವ ಪ್ರಯತ್ನ ನಡೆದಿದೆ. ಲೋಕಸಭಾ

ಲೋಕಸಭಾ ಚುನಾವಣೆಗೆ ಬಿಜೆಪಿ ಅಲರ್ಟ್| ಬಿಜೆಪಿ ಜೊತೆ ಕೆಆರ್​ಪಿಪಿ ಮೈತ್ರಿ….? Read More »

ಜ್ಞಾನವಾಪಿ ದೇಗುಲದ ಮೇಲೆ ಕನ್ನಡದ ಅಕ್ಷರ|ಮಸೀದಿ ಅಲ್ಲ ಮಂದಿರ ಅನ್ನೋದಕ್ಕೆ ನೂರಾರು ಸಾಕ್ಷ್ಯ..!

ಸಮಗ್ರ ನ್ಯೂಸ್: ಉತ್ತರಪ್ರದೇಶದ ವಾರಣಾಸಿಯಲ್ಲಿ ಇರುವ ಜ್ಞಾನವಾಪಿ ಮಸೀದಿ ಇರುವ ಜಾಗದಲ್ಲಿ ಹಲವು ಪ್ರಾಚೀನ ಕಾಲದ ಶಾಸನಗಳು ಪತ್ತೆಯಾಗಿವೆ. ಅದರಲ್ಲಿ ಕನ್ನಡದ ಶಾಸನವೂ ಇದೆ ಎಂಬ ವಿಚಾರ ಎಎಸ್‌ಐ (ASI) ವರದಿಯಿಂದ ಬಹಿರಂಗವಾಗಿದೆ. ಕನ್ನಡ ಬರಹವಿರುವ ಪ್ರೂಫ್‌ ಕೂಡ ಎಎಸ್‌ಐ ವರದಿಯಲ್ಲಿದೆ. ಜ್ಞಾನವಾಪಿ ಮಸೀದಿ ಸಮೀಕ್ಷೆಗೆ ಸಂಬಂಧಿಸಿದಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ವರದಿ ಈಚೆಗೆ ಬಹಿರಂಗವಾಗಿದೆ. ಮಸೀದಿ ಇರುವ ಜಾಗದಲ್ಲಿ ಸಿಕ್ಕ ಪ್ರಾಚೀನ ಶಾಸನದಲ್ಲಿ ‘ದೊಡ್ಡರಸಯ್ಯನ ನರಸಂಣನಭಿಂನಹ’ (ದೊಡ್ಡರಸಯ್ಯನ ನರಸಿಂಹನ ಭಿನ್ನಹ) ಎಂದು ಕನ್ನಡದಲ್ಲಿ

ಜ್ಞಾನವಾಪಿ ದೇಗುಲದ ಮೇಲೆ ಕನ್ನಡದ ಅಕ್ಷರ|ಮಸೀದಿ ಅಲ್ಲ ಮಂದಿರ ಅನ್ನೋದಕ್ಕೆ ನೂರಾರು ಸಾಕ್ಷ್ಯ..! Read More »

ಚಿಕ್ಕಮಗಳೂರಿಗೆ ಎಂಟ್ರಿಕೊಟ್ಟ 30 ಕಾಡಾನೆಗಳ ಹಿಂಡು

ಸಮಗ್ರ ನ್ಯೂಸ್: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮತ್ತೆ ಕಾಡಾನೆಗಳ ಹಿಂಡು ಬೀಡುಬಿಟ್ಟಿದೆ. ಚಿಕ್ಕಮಗಳೂರು ತಾಲೂಕಿನ ಕೆಆರ್ ಪೇಟೆ ಗ್ರಾಮದಲ್ಲಿ ಬರೊಬ್ಬರಿ 30 ಕಾಡಾನೆಗಳ ಹಿಂಡು ಬೀಡುಬಿಟ್ಟಿದ್ದು, ಸ್ಥಳಕ್ಕೆ ಚಿಕ್ಕಮಗಳೂರು ಅರಣ್ಯ ಇಲಾಖೆಯ ಸಿಬ್ಬಂದಿಗಳು ದೌಡಾಯಿಸಿದ್ದಾರೆ. ಜನ ವಸತಿ ಪ್ರದೇಶದಿಂದ ಸ್ವಲ್ಪ ದೂರದಲ್ಲಿರುವುದರಿಂದ ಜನರು ಭಯಭೀತರಾಗಿದ್ದಾರೆ. ಇನ್ನು ಇದರ ಜೊತೆಯೇ ಹಂತಕ ಭೀಮ ಆನೆ ಸೇರಿಕೊಂಡಿದೆ. ಈಗಾಗಲೇ ಬೇಲೂರಿನಲ್ಲಿ ದಾಂಧಲೆ ಎಬ್ಬಿಸಿದ್ದ ಬೀಮ ಅಂಡ್ ಗ್ಯಾಂಗ್. ಬೇಲೂರು ಮಾರ್ಗವಾಗಿಯೇ KR ಪೇಟೆ ಗ್ರಾಮಕ್ಕೆ ಆಗಮಿಸಿದೆ.

ಚಿಕ್ಕಮಗಳೂರಿಗೆ ಎಂಟ್ರಿಕೊಟ್ಟ 30 ಕಾಡಾನೆಗಳ ಹಿಂಡು Read More »

ಲೋಕಸಭಾ ಚುನಾವಣೆಗೆ ಬಿಜೆಪಿ ಭರ್ಜರಿ ತಯಾರಿ|28 ಲೋಕಸಭಾ ಕ್ಷೇತ್ರಗಳಿಗೆ ಉಸ್ತುವಾರಿಗಳ ನೇಮಕ

ಸಮಗ್ರ ನ್ಯೂಸ್: ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಚುನಾವಣಾ ಉಸ್ತುವಾರಿಗಳು ಮತ್ತು ಸಹ ಉಸ್ತುವಾರಿಗಳನ್ನು ಬಿಜೆಪಿ ನೇಮಕ ಮಾಡಿದೆ. ಸಂಸದ ರಾಧಾ ಮೋಹನ್ ದಾಸ್ ಅಗರ್ವಾಲ ಅವರನ್ನು ಕರ್ನಾಟಕದ ಉಸ್ತುವಾರಿಯನ್ನಾಗಿ ಮತ್ತು ಸುಧಾಕರ್ ರೆಡ್ಡಿ ಅವರನ್ನು ಕರ್ನಾಟಕದ ಸಹ ಉಸ್ತುವಾರಿಯನ್ನಾಗಿ ನೇಮಕ ಮಾಡಿ ಬಿಜೆಪಿ ಹೈಕಮಾಂಡ್ ಆದೇಶ ಹೊರಡಿಸಿದೆ. ಈಗ ರಾಜ್ಯ ಬಿಜೆಪಿ ಘಟಕವು ಎಲ್ಲಾ 28 ಲೋಕಸಭಾ ಸ್ಥಾನಗಳಿಗೆ ಉಸ್ತುವಾರಿಗಳನ್ನು ನೇಮಿಸಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು ನಡೆದ ರಾಜ್ಯ ಬಿಜೆಪಿ

ಲೋಕಸಭಾ ಚುನಾವಣೆಗೆ ಬಿಜೆಪಿ ಭರ್ಜರಿ ತಯಾರಿ|28 ಲೋಕಸಭಾ ಕ್ಷೇತ್ರಗಳಿಗೆ ಉಸ್ತುವಾರಿಗಳ ನೇಮಕ Read More »

ದೈವ ನರ್ತನ ಮುಗಿಸುತ್ತಿದ್ದಂತೆ ಹೃದಯಾಘಾತದಿಂದ ನರ್ತಕ ಸಾವು

ಸಮಗ್ರ ನ್ಯೂಸ್: ದೈವ ನರ್ತನ ಮುಗಿಸುತ್ತಿದ್ದಂತೆ ಖ್ಯಾತ ದೈವ ನರ್ತಕ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಮಂಗಳೂರು ತಾಲೂಕಿನ ಹಳೆಯಂಗಡಿ ಸಮೀಪ ನಡೆದಿದೆ. ಪದವಿನಂಗಡಿ ಗಂಧಕಾಡು ನಿವಾಸಿ ಅಶೋಕ್ ಬಂಗೇರ ಸಾವನ್ನಪ್ಪಿದ ದೈವ ನರ್ತಕ. ನಿನ್ನೆ ಹಳೆಯಂಗಡಿ ಸಮೀಪ ರಕ್ತೇಶ್ವರಿ ದೈವ ನೇಮ ಹಮ್ಮಿಕೊಳ್ಳಲಾಗಿತ್ತು. ದೈವ ನರ್ತನದ ವೇಳೆಯೇ ಇವರಿಗೆ ಎದೆನೋವು ಕಾಣಿಸಿಕೊಂಡಿದೆ. ಇನ್ನು ಎದೆನೋವು ತೀವ್ರವಾಗಿ ಕಾಣಿಸಿಕೊಂಡಿದ್ದರಿಂದ ದೈವ ನೇಮ ಅರ್ಧಕ್ಕೆ ನಿಲ್ಲಿಸಿದ ಅಶೋಕ ಬಂಗೇರಾ ಅವರು ದೈವ ವೇಷವನ್ನು ತೆಗೆದು ಆಸ್ಪತ್ರೆಗೆ ‌ತೆರಳಿದ್ದಾರೆ. ಆದರೆ, ಆಸ್ಪತ್ರೆಗೆ

ದೈವ ನರ್ತನ ಮುಗಿಸುತ್ತಿದ್ದಂತೆ ಹೃದಯಾಘಾತದಿಂದ ನರ್ತಕ ಸಾವು Read More »

ಸರಣಿ ರಜೆ ಹಿನ್ನಲೆ ಕುಮಾರಪರ್ವತ ಚಾರಣಕ್ಕೆ ಹರಿದುಬಂದ ಚಾರಣಿಗರ ದಂಡು !

ಸಮಗ್ರ ಸಮಾಚಾರ: ಸರಣಿ ರಜೆ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯ ಸಮೀಪವಿರುವ ಕುಮಾರಪರ್ವತ ಚಾರಣಕ್ಕೆ ಶುಕ್ರವಾರ ಚಾರಣಿಗರ ದಂಡೇ ಹರಿದು ಬಂದಿದೆ. ಕುಮಾರ ಪರ್ವತ ಚಾರಣಕ್ಕೆ ವರ್ಷಂಪ್ರತಿ ಈ ಸಮಯದಲ್ಲಿ ಹೆಚ್ಚಿನ ಚಾರಣಿಗರು ಆಗಮಿಸುತ್ತಿರುತ್ತಾರೆ. ಶುಕ್ರವಾರದಿಂದ ರವಿವಾರದ ವರೆಗೆ ಸರಣಿ ರಜೆ ಇರುವುದರಿಂದ ಪ್ರಸ್ತುತ ಬಾರೀ ಸಂಖ್ಯೆಯ ಚಾರಣಿಗರು ಕುಮಾರ ಪರ್ವತ ಚಾರಣಕ್ಕೆ ಆಗಮಿಸಿದ್ದಾರೆ. ಸುಬ್ರಹ್ಮಣ್ಯದ ದೇವರಗದ್ದೆ ಬಳಿ ಪ್ರವೇಶ ಧ್ವಾರದ ಬಳಿ ಶುಕ್ರವಾರ ಬಾರೀ ದಟ್ಟನೆ ಕಂಡುಬಂತು. ಸಾಮನ್ಯ ರಜೆ ದಿನಗಳಿಂದಲೂ ಬಾರೀ ಹೆಚ್ಚಿನ ಚಾರಣಿಗರು ಆಗಮಿಸಿದ್ದರಿಂದ ದಟ್ಡಣೆ

ಸರಣಿ ರಜೆ ಹಿನ್ನಲೆ ಕುಮಾರಪರ್ವತ ಚಾರಣಕ್ಕೆ ಹರಿದುಬಂದ ಚಾರಣಿಗರ ದಂಡು ! Read More »

ಕೊಟ್ಟಿಗೆಹಾರ: ಎಣ್ಣೆ ಕುಡಿಯೋ ಆತುರದಲ್ಲಿ ಎಟಿಎಂನಲ್ಲಿ ಕಾರ್ಡ್ ಬಿಟ್ಟು ಹೋಗುತ್ತಿರುವ ಜನ…!

ಸಮಗ್ರ ನ್ಯೂಸ್: ಕೊಟ್ಟಿಗೆಹಾರ, ಮದ್ಯದ ಮತ್ತಲ್ಲಿ ಎಟಿಎಂನಲ್ಲಿ ಹಣ ತೆಗೆಯುವ ಜನರು ಕುಡಿಯೋ ಆತುರದಲ್ಲಿ ಎಟಿಎಂ ನಲ್ಲಿ ಕಾರ್ಡ್ ಬಿಟ್ಟು ಹೋಗುವ ಖಯಾಲಿ ಶುರು ಮಾಡಿಕೊಂಡಿದ್ದಾರೆ. ಕೈಗೆ ಹಣ ಬಂದ ತಕ್ಷಣ ಎಣ್ಣೆ ಕುಡಿಯೋ ಆತುರದಲ್ಲಿ ಎಟಿಎಂ ಮೆಷಿನ್ ನಲ್ಲೇ ಕಾರ್ಡ್ ಬಿಟ್ಟು ಹೋಗುತ್ತಿದ್ದಾರೆ‌. ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಬಣಕಲ್ ಹೋಬಳಿ ಕೇಂದ್ರದಲ್ಲಿ ಜ. 26ರಂದು ಒಂದೇ ದಿನ ಸುಮಾರು 14 ಕಾರ್ಡ್ ಬಿಟ್ಟು ಹೋಗಿದ್ದು, ಅದರಲ್ಲೂ ಸಂಜೆ ವೇಳೆಯೇ ಹೆಚ್ಚು ಕಾರ್ಡು ಬಿಟ್ಟು ಹೋಗಿದ್ದಾರೆ. ಬಣಕಲ್

ಕೊಟ್ಟಿಗೆಹಾರ: ಎಣ್ಣೆ ಕುಡಿಯೋ ಆತುರದಲ್ಲಿ ಎಟಿಎಂನಲ್ಲಿ ಕಾರ್ಡ್ ಬಿಟ್ಟು ಹೋಗುತ್ತಿರುವ ಜನ…! Read More »