January 2024

8th ಪಾಸ್ ಆಗಿದ್ರೆ ಸಾಕು, Post Office ಉದ್ಯೋಗಕ್ಕೆ ಬೇಗ ಅರ್ಜಿ ಹಾಕಿ

ಸಮಗ್ರ ಉದ್ಯೋಗ: ಭಾರತೀಯ ಅಂಚೆ ಇಲಾಖೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 1 ಮೋಟಾರ್ ವೆಹಿಕಲ್ ಮೆಕ್ಯಾನಿಕ್ ಹುದ್ದೆ ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಜನವರಿ 30, 2024 ಅಂದರೆ ನಾಳೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆಫ್​ಲೈನ್​/ ಪೋಸ್ಟ್​ ಮೂಲಕ ಅರ್ಜಿ ಹಾಕಬೇಕು. ಶೈಕ್ಷಣಿಕ ಅರ್ಹತೆ:ಭಾರತೀಯ ಅಂಚೆ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ 8ನೇ ತರಗತಿ […]

8th ಪಾಸ್ ಆಗಿದ್ರೆ ಸಾಕು, Post Office ಉದ್ಯೋಗಕ್ಕೆ ಬೇಗ ಅರ್ಜಿ ಹಾಕಿ Read More »

ಟ್ರಾಕ್ಟರ್ – ಶಾಲಾ ಬಸ್ ನಡುವೆ ಅಪಘಾತ| ನಾಲ್ವರು ಮಕ್ಕಳು ಸಾವು; ಹಲವರು ಗಂಭೀರ

ಸಮಗ್ರ ನ್ಯೂಸ್: ಟ್ಯಾಕ್ಟರ್ ಹಾಗೂ ಶಾಲಾ ಬಸ್ ನಡುವೆ ಅಪಘಾತ ಸಂಭವಿಸಿದ್ದು ಈ ವೇಳೆ ಶಾಲಾ ಬಸ್ಸಿನಲ್ಲಿದ ನಾಲ್ವರ ಮಕ್ಕಳು ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹಲಗೂರು ಗ್ರಾಮದ ಬಳಿ ಸಂಭವಿಸಿದೆ. ಸಾಗರ ಕಡಕೋಳ, ಶ್ವೇತಾ, ಗೋವಿಂದ, ಬಸವರಾಜ್ ಎನ್ನುವ ಮಕ್ಕಳ್ಳು ಸಾವನ್ನಪ್ಪಿದ್ದು ಇಬ್ಬರು ಪಿಯುಸಿ, ಇಬ್ಬರು 9ನೇ ಕ್ಲಾಸ್ ವಿದ್ಯಾರ್ಥಿನಿಯರು ಎಂದು ಹೇಳಲಾಗಿದೆ. ತಡರಾತ್ರಿ 12 ಗಂಟೆ ವೇಳೆ ಈ ಅಪಘಾತ ಸಂಭವಿಸಿದೆ ವರ್ಧಮಾನ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಸಾವನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಟ್ರಾಕ್ಟರ್ – ಶಾಲಾ ಬಸ್ ನಡುವೆ ಅಪಘಾತ| ನಾಲ್ವರು ಮಕ್ಕಳು ಸಾವು; ಹಲವರು ಗಂಭೀರ Read More »

ಬಿಗ್ ಬಾಸ್ ಸೀಸನ್ 10 ಗ್ರ್ಯಾಂಡ್ ಫಿನಾಲೆ| ಕಾರ್ತಿಕ್ ವಿನ್ನರ್, ರನ್ನರ್ ಅಪ್ ಆದ ಪ್ರತಾಪ್

ಸಮಗ್ರ ನ್ಯೂಸ್: ಬಿಗ್​ಬಾಸ್ ಕನ್ನಡ ಸೀಸನ್ 10 ಮುಗಿದಿದ್ದು, ಕಠಿಣ ಸ್ಪರ್ಧೆಯ ನಡುವೆ ಕಾರ್ತಿಕ್ ಮಹೇಶ್ ಗೆಲುವು ಸಾಧಿಸಿದ್ದಾರೆ. 112 ದಿನಗಳ ಸುದೀರ್ಘ ಪಯಣ ಇಂದು ಅಂತ್ಯವಾಗಿದೆ. ಬಿಗ್​ಬಾಸ್ ಗೆಲ್ಲಲು 16 ಮಂದಿಯಿಂದ ಪ್ರಾರಂಭವಾದ ಓಟದಲ್ಲಿ ಕೊನೆಯದಾಗಿ ಗೆಲುವು ಕಂಡಿರುವುದು ಕಾರ್ತಿಕ್ ಮಹೇಶ್. ಕೊನೆಯ ಕ್ಷಣದಲ್ಲಿ ಬಿಗ್​ಬಾಸ್​ ಮನೆಗೆ ಬರಲು ತೆಗೆದುಕೊಂಡ ನಿರ್ಣಯ ಅವರ ಕೈಹಿಡಿದಿದೆ. ಹಲವು ಏಳು-ಬೀಳುಗಳಿದ್ದ ಪಯಣದಲ್ಲಿ ಕಾರ್ತಿಕ್ ಮಹೇಶ್ ಗಮ್ಯ ತಲುಪಿದ್ದಾರೆ. ಅವರಿಗೆ ಬರೋಬ್ಬರಿ 2,97,39,904 ಮತ ಗಳಿಸಿದ್ದಾರೆ. ಹಲವು ಏಳು-ಬೀಳು, ನೋವು,

ಬಿಗ್ ಬಾಸ್ ಸೀಸನ್ 10 ಗ್ರ್ಯಾಂಡ್ ಫಿನಾಲೆ| ಕಾರ್ತಿಕ್ ವಿನ್ನರ್, ರನ್ನರ್ ಅಪ್ ಆದ ಪ್ರತಾಪ್ Read More »

ಸಿಮೆಂಟ್ ಜಿಂಕೆ ಮುರಿದು 6 ವರ್ಷದ ಮಗು ಸಾವು

ಸಮಗ್ರ ನ್ಯೂಸ್: ಆಟವಾಡಲೆಂದು ಸಿಮೆಂಟ್ ಜಿಂಕೆ ಮೇಲೆ ಏರಿ ಆ ಸಿಮೆಂಟ್ ಜಿಂಕೆ ಮುರಿದು 6 ವರ್ಷದ ಮಗು ಸಾವನ್ನಪ್ಪಿರುವ ಘಟನೆ ಶಿವಮೊಗ್ಗದ ಮುದ್ದಿನಕೊಪ್ಪದಲ್ಲಿರುವ ಟ್ರೀ ಪಾರ್ಕ್ ನಲ್ಲಿ ನಡೆದಿದೆ. ಸಮೀಕ್ಷಾ ಮೃತ ದುರ್ದೈವಿಯಾಗಿದ್ದು, ಸಿಮೆಂಟ್ ಜಿಂಕೆ ಮೇಲೆ ಮಗು ಕುಳಿತ ಕೊಂಡ ವೇಳೆ ಭಾರ ತಾಳದೇ ಸಿಮೆಂಟ್ ಜಿಂಕೆ ಮುರಿದು ಬಿದ್ದಿದೆ. ಆಟವಾಡಲು ಪೋಷಕರೊಂದಿಗೆ ಮಗು ತೆರಳಿದ್ದು ಈ ವೇಳೆ ದುರ್ಘಟನೆ ನಡೆದಿದೆ. ಘಟನೆ ಸಂಬಂಧ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಸಿಮೆಂಟ್ ಜಿಂಕೆ ಮುರಿದು 6 ವರ್ಷದ ಮಗು ಸಾವು Read More »

ವರದಕ್ಷಿಣೆಗಾಗಿ ಮಡದಿಯೊಂದಿಗೆ ಸಿನಿಮಾ ಡೈರೆಕ್ಟರ್ ಕಿರಿಕ್

ಸಮಗ್ರ ನ್ಯೂಸ್: (ಜ.28), ಚಿತ್ರ ನಿರ್ದೇಶಕ ಮಂಜುನಾಥ್‌ ಎಂಬುವರು ತಮ್ಮ ಪತ್ನಿಗೆ ವರದಕ್ಷಿಣೆಗಾಗಿ ಕಿರುಕುಳ ನೀಡಿದ್ದಾರೆ ಎಂಬ ಆರೋಪವೊಂದು ಕೇಳಿ ಬಂದಿದೆ. ಸಿನಿಮಾ ಡೈರೆಕ್ಟರ್ ಮಂಜುನಾಥ್‌ ವಿರುದ್ಧ ಪತ್ನಿ ಅಖಿಲಾ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಮಂಜುನಾಥ್‌ ಮತ್ತು ಅಖಿಲಾ ದಂಪತಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. 2021ರಲ್ಲಿ ಎರಡೂ ಕುಟುಂಬದವರನ್ನು ಒಪ್ಪಿಸಿ ಮಂಜುನಾಥ್‌ ಮತ್ತು ಅಖಿಲಾ ಮದುವೆಯಾಗಿದ್ದರು. ಮದುವೆ ಸಂದರ್ಭ ಮಂಜುನಾಥ್‌ಗೆ ಸುಮಾರು 1.5kg ಬೆಳ್ಳಿ ಹಾಗು ಚಿನ್ನಾಭರಣ ನೀಡಲಾಗಿತ್ತು. ಮದುವೆಯಾದ ಹೊಸತರಲ್ಲಿ ಚೆನ್ನಾಗಿಯೇ ಇದ್ದ ದಂಪತಿಗಳ

ವರದಕ್ಷಿಣೆಗಾಗಿ ಮಡದಿಯೊಂದಿಗೆ ಸಿನಿಮಾ ಡೈರೆಕ್ಟರ್ ಕಿರಿಕ್ Read More »

ವಿಮಾನದ ತುರ್ತು ನಿರ್ಗಮನ ದ್ವಾರ ತೆಗೆದು ರೆಕ್ಕೆಯ ಮೇಲೆ ನಡೆದ ಪ್ರಯಾಣಿಕ…!

ಸಮಗ್ರ ನ್ಯೂಸ್: ವಿಮಾನದಲ್ಲಿದ್ದ ಪ್ರತಿಯೊಬ್ಬರ ಯೋಗಕ್ಷೇಮವನ್ನು ಕಾಪಾಡಲು ಅಗತ್ಯವಾದ ಕ್ರಮವೆಂದು ಪ್ರಯಾಣಿಕರು ವ್ಯಕ್ತಿಯ ಕ್ರಮಗಳನ್ನು ಸಮರ್ಥಿಸಿಕೊಂಡರು. ಮೆಕ್ಸಿಕೋ ಸಿಟಿ ಗ್ವಾಟೆಮಾಲಾ ಸಿಟಿಗೆ ಹೊರಟಿದ್ದ ಏರೋಮೆಕ್ಸಿಕೋ ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ತುರ್ತು ನಿರ್ಗಮನವನ್ನು ತೆರೆದು, ವಿಮಾನದಲ್ಲಿದ್ದವರ ಆರೋಗ್ಯ ಮತ್ತು ಸುರಕ್ಷತೆಯನ್ನು ಉಲ್ಲೇಖಿಸಿ ವಿಮಾನದ ರೆಕ್ಕೆಯ ಮೇಲೂ ಕೆಲ ಕಾಲ ಹೆಜ್ಜೆ ಹಾಕಿದರು. ಮೆಕ್ಸಿಕೋ ಸಿಟಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಈ ಘಟನೆಯು ಪ್ರಯಾಣಿಕರ ಹಕ್ಕುಗಳು ಮತ್ತು ವಿಮಾನಯಾನ ಜವಾಬ್ದಾರಿಗಳ ಬಗ್ಗೆ ವ್ಯಾಪಕ ಚರ್ಚೆ ಹುಟ್ಟುಹಾಕಿದೆ. ವಿಮಾನದ ಸುದೀರ್ಘ ವಿಳಂಬದ

ವಿಮಾನದ ತುರ್ತು ನಿರ್ಗಮನ ದ್ವಾರ ತೆಗೆದು ರೆಕ್ಕೆಯ ಮೇಲೆ ನಡೆದ ಪ್ರಯಾಣಿಕ…! Read More »

ಉಜಿರೆ: ರಾಷ್ಟ್ರೀಯ ಹಿಂ.ಜಾ.ವೇ ಸ್ಥಾಪಕ ಮಹೇಶ್ ಶೆಟ್ಟಿ ತಿಮರೋಡಿಗೆ ಮಾತೃವಿಯೋಗ

ಸಮಗ್ರ ನ್ಯೂಸ್: ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಸ್ಥಾಪಕ ಉಜಿರೆಯ ಮಹೇಶ್ ಶೆಟ್ಟಿ ತಿಮರೋಡಿ ತಾಯಿ ಅಮಣಿ ಶೆಟ್ಟಿ ನಿಧನರಾಗಿದ್ದಾರೆ. 85 ವರ್ಷ ಪ್ರಾಯದ ಅಮಣಿ ಶೆಟ್ಟಿಯವರು ವಯೋಸಹಜ ಖಾಯಿಲೆಯಿಂದ ಬಳಲುತಿದ್ದರು. ಮೃತರು ಪುತ್ರ ಮಹೇಶ್ ಶೆಟ್ಟಿ ತಿಮರೋಡಿ ಸಹಿತ ಐವರು ಪುತ್ರರು ಇಬ್ಬರು ಪುತ್ರಿಯವರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ನಾಳೆ ತಿಮರೋಡಿಯಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಉಜಿರೆ: ರಾಷ್ಟ್ರೀಯ ಹಿಂ.ಜಾ.ವೇ ಸ್ಥಾಪಕ ಮಹೇಶ್ ಶೆಟ್ಟಿ ತಿಮರೋಡಿಗೆ ಮಾತೃವಿಯೋಗ Read More »

ರೈಲ್ವೆ ಇಲಾಖೆಯಲ್ಲಿ ಕೆಲಸಕ್ಕೆ ಅರ್ಜಿ ಆಹ್ವಾನ, ಬೇಗ ಅಪ್ಲೈ ಮಾಡಿ

ಸಮಗ್ರ ಉದ್ಯೋಗ: Commission of Railway Safety ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 1 ಕಮಿಷನರ್ ಆಫ್​ ರೈಲ್ವೆ ಸೇಫ್ಟಿ ಹುದ್ದೆ ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಜನವರಿ 29, 2024 ಅಂದರೆ ನಾಳೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಬೇಗ ರೆಸ್ಯೂಮ್ ಕಳುಹಿಸಿ. ರೈಲ್ವೆ ಇಲಾಖೆಯಲ್ಲಿ & ಬೆಂಗಳೂರಿನಲ್ಲಿ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ವಯೋಮಿತಿ:ಕಮಿಷನ್ ಆಫ್ ರೈಲ್ವೆ ಸೇಫ್ಟಿ ನೇಮಕಾತಿ

ರೈಲ್ವೆ ಇಲಾಖೆಯಲ್ಲಿ ಕೆಲಸಕ್ಕೆ ಅರ್ಜಿ ಆಹ್ವಾನ, ಬೇಗ ಅಪ್ಲೈ ಮಾಡಿ Read More »

ಬೆಳ್ತಂಗಡಿ; ಸುಡುಮದ್ದು ತಯಾರಿಕೆ ಘಟಕದಲ್ಲಿ ಸ್ಫೋಟ| ಇಬ್ಬರು ಮೃತ್ಯು; ಹಲವು ಮಂದಿಗೆ ಗಾಯ

ಸಮಗ್ರ ನ್ಯೂಸ್: ಬೆಳ್ತಂಗಡಿ ತಾಲೂಕಿನ ‌ಕುಕ್ಕೇಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಸುಡುಮದ್ದು ತಯಾರಿಸುವ ಘಟಕದಲ್ಲಿ ಸ್ಫೋಟಗೊಂಡು ಕನಿಷ್ಠ ಇಬ್ಬರು ಮೃತಪಟ್ಟಿರುವ ಘಟನೆ ರವಿವಾರ ನಡೆದಿದೆ. ಸ್ಫೋಟದ ತೀವ್ರತೆಗೆ ದೇಹಗಳು ಚಿದ್ರಗೊಂಡಿರುವುದಾಗಿ ತಿಳಿದು ಬಂದಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿದು ಬಂದಿದೆ. ವೇಣೂರು ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಇಬ್ಬರು ಸಾವನ್ನಪ್ಪಿರುವುದಾಗಿ ಪ್ರಾಥಮಿಕ ಮಾಹಿತಿಗಳು ಲಭ್ಯವಾಗುತ್ತಿದೆ.

ಬೆಳ್ತಂಗಡಿ; ಸುಡುಮದ್ದು ತಯಾರಿಕೆ ಘಟಕದಲ್ಲಿ ಸ್ಫೋಟ| ಇಬ್ಬರು ಮೃತ್ಯು; ಹಲವು ಮಂದಿಗೆ ಗಾಯ Read More »

ಕಸಕಡ್ಡಿಗೆ ಹಾಕಿದ ಬೆಂಕಿಗೆ ಸಿಲುಕಿ ದಂಪತಿ ಸಾವು

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ದಂಪತಿ ಸಜೀವ ದಹನವಾದ ಘಟನೆ ನಡೆದಿದೆ. ಬಂಟ್ವಾಳ ತಾಲೂಕಿನ ಅಮ್ಟಾಡಿಯಲ್ಲಿ ಕಸ ಕಡ್ಡಿಗೆ ಹಾಕಿದ ಬೆಂಕಿಗೆ ಸಿಲುಕಿ ವೃದ್ಧ ದಂಪತಿ ಸಾವಿಗೀಡಾಗಿದ್ದಾರೆ. ಗಿಲ್ಬರ್ಟ್ ಕಾರ್ಲೋ(78) ಕ್ರಿಸ್ಟಿನಾ ಕಾರ್ಲೊ (70) ಮೃತ ಪಟ್ಟವರು. ತಮ್ಮ ಮನೆಯ ಪಕ್ಕದ ಕಸಕಡ್ಡಿಗೆ ಬೆಂಕಿ ಹಾಕಿದ ದಂಪತಿ, ಇದು ಮನೆಯ ಪಕ್ಕದ ಕಾಡಿಗೂ ಈ ಬೆಂಕಿ ತಗುಲಿದೆ. ಅದನ್ನು ನಂದಿಸಲು ಮುಂದಾದ ದಂಪತಿ ಬೆಂಕಿಯ ಕೆನ್ನಾಲೆಗೆ ಸಿಲುಕಿ ಸುಟ್ಟು ಕರಕಲಾಗಿದ್ದಾರೆ.

ಕಸಕಡ್ಡಿಗೆ ಹಾಕಿದ ಬೆಂಕಿಗೆ ಸಿಲುಕಿ ದಂಪತಿ ಸಾವು Read More »