January 2024

ಚಿಕ್ಕಮಗಳೂರು: 2023ರಲ್ಲಿ 78.50 ಲಕ್ಷಕ್ಕೂ ಹೆಚ್ಚು ಪ್ರವಾಸಿಗರ ಭೇಟಿ

ಸಮಗ್ರ ನ್ಯೂಸ್: ಚಿಕ್ಕಮಗಳೂರು ಜಿಲ್ಲೆಯ ಪ್ರವಾಸಿ ತಾಣಗಳಿಗೆ ಈ ವರ್ಷ ಜಿಲ್ಲೆಗೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆ ಕಳೆದ ವರ್ಷಕ್ಕಿಂತ 10 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಬಂದು ಹೋಗಿದ್ದಾರೆ. ಹವಾಮಾನ ವೈಪರಿತ್ಯ ಮತ್ತು ರೋಗಬಾಧೆಯಿಂದ ಕಾಫಿ, ಏಲಕ್ಕಿ, ಕಾಳು ಮೆಣಸು, ಅಡಿಕೆ ಬೆಳೆಯ ಇಳುವರಿ ಕಡಿಮೆಯಾಗಿರುವ ಬೆನ್ನಲ್ಲೇ ಜಿಲ್ಲೆಯ ಪ್ರವಾಸೋದ್ಯಮ ಈಗ ಹಿಂದಿಗಿಂತ ಹೆಚ್ಚು ಆಕರ್ಷಣೆ ಪಡೆದುಕೊಳ್ಳುತ್ತಿದೆ. ಮುಗಿಲೆತ್ತರದ ಬೆಟ್ಟಗಳು, ಪ್ರಪಾತಗಳು, ಜಲಪಾತಗಳು, ಹುಲ್ಲುಗಾವಲುಗಳು, ಅವುಗಳ ನಡುವೆ ಇರುವ ದೇಗುಲಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ಬರುವ ಪ್ರವಾಸಿಗರಿಗೆ […]

ಚಿಕ್ಕಮಗಳೂರು: 2023ರಲ್ಲಿ 78.50 ಲಕ್ಷಕ್ಕೂ ಹೆಚ್ಚು ಪ್ರವಾಸಿಗರ ಭೇಟಿ Read More »

ಹುಣಸೂರು: ಜೀಪ್ -ಬಸ್ ನಡುವೆ ಅಪಘಾತ|ನಾಲ್ವರು ಸಾವು

ಸಮಗ್ರ ನ್ಯೂಸ್: ಹುಣಸೂರು ಶುಂಠಿ ಕೆಲಸಕ್ಕೆ ಕೂಲಿಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಜೀಪ್ -ಬಸ್ ನಡುವೆ ಅಪಘಾತ, ನಾಲ್ವರ ಸಾವು. ಹೆಚ್‌ಡಿ ಕೋಟೆ ತಾಲೂಕಿನ ಜಿಯಾರ ಗ್ರಾಮದ ಸುತ್ತಮುತ್ತಲಿನ ಹಳ್ಳಿಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ಥ.ಇನ್ಸ್ ಪೆಕ್ಟರ್ ದೇವೆಂದ್ರ ನೇತೃತ್ವದಲ್ಲಿ ಪೊಲೀಸರಿಂದ ಅಪಘಾತದಲ್ಲಿ ಸಾವನ್ನಪ್ಪಿದ ಶವವನ್ನು ಸಾರ್ವಜನಿಕ ಆಸ್ಪತ್ರೆಗೆ ಸಿಬ್ಬಂದಿಗಳು ಸಾಗಿಸಿದರು.ಹುಣಸೂರು ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ. ಸಾವನ್ನಪ್ಪಿದವರ ಗುರುತು ಪತ್ತೆಯಾಗಿಲ್ಲ. ಚಾಲಕ ಕುಮಾರ್ ಸೇರಿದಂತೆ ಐವರ ಸ್ಥಿತಿ ಗಂಭೀರವಾಗಿದೆ.

ಹುಣಸೂರು: ಜೀಪ್ -ಬಸ್ ನಡುವೆ ಅಪಘಾತ|ನಾಲ್ವರು ಸಾವು Read More »

ಪ್ರೊಫೆಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ! ಬೇಗ ಅಪ್ಲೈ ಮಾಡಿ

ಸಮಗ್ರ ಉದ್ಯೋಗ: ಇನ್‌ಸ್ಟಿಟ್ಯೂಟ್ ಫಾರ್ ಸ್ಟೆಮ್ ಸೆಲ್ ಬಯಾಲಜಿ ಮತ್ತು ರಿಜೆನೆರೇಟಿವ್ ಮೆಡಿಸಿನ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 4 ಪ್ರೊಫೆಸರ್/ ಇನ್ವೆಸ್ಟಿಗೇಟರ್ (ಸೈಂಟಿಸ್ಟ್-ಜಿ)​​ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಈಗಾಗಲೇ ಅರ್ಜಿ ಪ್ರಕ್ರಿಯೆ ಆರಂಭವಾಗಿದ್ದು, ಅಭ್ಯರ್ಥಿಗಳು ಆನ್​​ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಜನವರಿ 4, 2024 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಶೈಕ್ಷಣಿಕ ಅರ್ಹತೆ:ಇನ್‌ಸ್ಟಿಟ್ಯೂಟ್ ಫಾರ್ ಸ್ಟೆಮ್ ಸೆಲ್ ಬಯಾಲಜಿ ಮತ್ತು ರಿಜೆನೆರೇಟಿವ್ ಮೆಡಿಸಿನ್

ಪ್ರೊಫೆಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ! ಬೇಗ ಅಪ್ಲೈ ಮಾಡಿ Read More »

ಸ್ಕೂಲ್ ಬಸ್​ ಡ್ರೈವರ್ ಜೊತೆನೆ ಸುಸೈಡ್ ಮಾಡಿಕೊಂಡ 8ನೇ ತರಗತಿ ವಿದ್ಯಾರ್ಥಿ!

ಸಮಗ್ರ ನ್ಯೂಸ್:ಶಾಲಾ‌ ಬಸ್ ಡ್ರೈವರ್ ಪ್ರೇಮದಾಟಕ್ಕೆ 8ನೇ ತರಗತಿ ವಿದ್ಯಾರ್ಥಿನಿ ಬಲಿಯಾಗಿದ್ದಾಳೆ. ಚಿಕ್ಕಮಗಳೂರಿನ ಅಜ್ಜಂಪುರ ಸಮೀಪದ ಬಂಕನಕಟ್ಟೆ ಬಳಿ ರೈಲಿಗೆ ತಲೆಕೊಟ್ಟು 38 ವರ್ಷದ ಸಂತೋಷ್‌ ಜತೆ 14 ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅಪ್ರಾಪ್ತ ಬಾಲಕಿ ಗಿರಿಯಾಪುರ ಗ್ರಾಮದ ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಡಿ.31ರಂದು ಸ್ನೇಹಿತರ ಜೊತೆ ನ್ಯೂ ಇಯರ್‌ ಪಾರ್ಟಿಗೆ ಹೋಗ್ತೀನಿ ಎಂದು ಪೋಷಕರಿಗೆ ಹೇಳಿ ಹೋಗಿದ್ದ ಬಾಲಕಿ, ಡ್ರೈವರ್‌ ಸಂತೋಷ್‌ ಜೊತೆ ತೆರಳಿದ್ದಳು. ಅಂದು ಮಧ್ಯರಾತ್ರಿಯೇ ರೈಲಿಗೆ ಸಿಕ್ಕಿ ಇಬ್ಬರು ಸಾವನ್ನಪ್ಪಿದ್ದಾರೆ.

ಸ್ಕೂಲ್ ಬಸ್​ ಡ್ರೈವರ್ ಜೊತೆನೆ ಸುಸೈಡ್ ಮಾಡಿಕೊಂಡ 8ನೇ ತರಗತಿ ವಿದ್ಯಾರ್ಥಿ! Read More »

ವರ್ಷದ ಕೊನೆ ದಿನದಂದು ದಾಖಲೆ ಮದ್ಯ ವಹಿವಾಟು|ಎಂಎಸ್ಐಎಲ್ ಒಂದೇ ದಿನ ₹18.85 ಕೋಟಿ ಮದ್ಯ ಮಾರಾಟ

ಸಮಗ್ರ ನ್ಯೂಸ್: ರಾಜ್ಯದಲ್ಲಿರುವ 1031 ಎಂ ಎಸ್ ಐ ಎಲ್ ಮದ್ಯ ಮಾರಾಟ ಮಳಿಗೆಗಳಲ್ಲಿ 2023ರ ಕೊನೆಯ ದಿನವಾದ ಭಾನುವಾರ (ಡಿ.31) ₹18.85 ಕೋಟಿ ಮೊತ್ತದ ದಾಖಲೆಯ ಮದ್ಯ ಮಾರಾಟವಾಗಿದೆ ಎಂದು ಎಂ ಎಸ್ ಐ ಎಲ್ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಕುಮಾರ್ ತಿಳಿಸಿದ್ದಾರೆ. ಕಳೆದ ವರ್ಷದ ಇದೇ ದಿನಕ್ಕೆ ಹೋಲಿಸಿದರೆ ಇದು ಸುಮಾರು ₹ 4.34 ಕೋಟಿ ಹೆಚ್ಚಳವಾಗಿದೆ. 2022ರ ಡಿ. 31ರಂದು ₹14.51 ಕೋಟಿ ಮೊತ್ತದ ಮದ್ಯ ಮಾರಾಟವಾಗಿತ್ತು ಎಂದು ಅವರು ಹೇಳಿದ್ದಾರೆ. ರಾಯಚೂರಿನ

ವರ್ಷದ ಕೊನೆ ದಿನದಂದು ದಾಖಲೆ ಮದ್ಯ ವಹಿವಾಟು|ಎಂಎಸ್ಐಎಲ್ ಒಂದೇ ದಿನ ₹18.85 ಕೋಟಿ ಮದ್ಯ ಮಾರಾಟ Read More »

ಸುಳ್ಯ:ಶ್ರೀ ಕ್ಷೇತ್ರ ಬ್ರಹ್ಮರಗಯದಲ್ಲಿ 46ನೇ ವರ್ಷದ ಅಯ್ಯಪ್ಪ ದೀಪೋತ್ಸವ| ಶಾಸಕಿ ಭಾಗೀರಥಿ ಮರುಳ್ಯ ಭೇಟಿ

ಸಮಗ್ರ ನ್ಯೂಸ್: ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಶ್ರೀ ಕ್ಷೇತ್ರ ಬ್ರಹ್ಮರಗಯದಲ್ಲಿ ಜ.1ರಂದು ನಡೆದ 46 ನೇ ವರ್ಷದ ದೀಪೋತ್ಸವ ಕಾರ್ಯಕ್ರಮದಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು.ಭಾಗೀರಥಿ ಮರುಳ್ಯ ಅವರು ಕ್ಷೇತ್ರಕ್ಕೆ ಭೇಟಿ ನೀಡಿದರು. ಕ್ಷೇತ್ರದ ಆಡಳಿತ ಮಂಡಳಿಯ ಅಧ್ಯಕ್ಷ ಗಣೇಶ್ ಶಾಂತಿನಗರ ಮತ್ತು ಪದಾಧಿಕಾರಿಗಳು ಶಾಸಕಿಯವರನ್ನು ದೇವಸ್ಥಾನದ ಪರವಾಗಿ ಗೌರವಿಸಿದರು. ಬಳಿಕ‌ ಶಾಸಕರು ಶ್ರೀ ದೇವರ ಗಂಧ ಪ್ರಸಾದವನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸುಳ್ಯ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ನಗರ

ಸುಳ್ಯ:ಶ್ರೀ ಕ್ಷೇತ್ರ ಬ್ರಹ್ಮರಗಯದಲ್ಲಿ 46ನೇ ವರ್ಷದ ಅಯ್ಯಪ್ಪ ದೀಪೋತ್ಸವ| ಶಾಸಕಿ ಭಾಗೀರಥಿ ಮರುಳ್ಯ ಭೇಟಿ Read More »

ಮಣಿಪುರದಲ್ಲಿ ಮತ್ತೆ ಮುಂದುವರಿದ ಹಿಂಸಾಚಾರ| ನಾಲ್ವರು ಬಲಿ, ಕರ್ಪ್ಯೂ‌ ಹೇರಿಕೆ

ಸಮಗ್ರ ನ್ಯೂಸ್:  ಜನಾಂಗೀಯ ಸಂಘರ್ಷದಿಂದ ಕಂಗೆಟ್ಟಿರುವ ಮಣಿಪುರದಲ್ಲಿ ಜ.1 ರ ಸಂಜೆ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ನಾಲ್ಕು ಮಂದಿ ಹಿಂಸೆಗೆ ಬಲಿಯಾಗಿದ್ದಾರೆ. ಇತರ ಐದು ಮಂದಿಗೆ ಗಂಭೀರ ಸ್ವರೂಪದ ಗುಂಡೇಟು ತಗುಲಿದೆ. ಕಳೆದ ವರ್ಷದ ಮೇ ತಿಂಗಳಿನಿಂದೀಚೆಗೆ ಹಿಂಸಾಚಾರದಲ್ಲಿ 200ಕ್ಕೂ ಹೆಚ್ಚು ಮಂದಿ ಜೀವ ಕಳೆದುಕೊಂಡಿರುವ ರಾಜ್ಯದಲ್ಲಿ ಕರ್ಪ್ಯೂ ಬಿಗಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ತೌಬಲ್ನ ಲಿಲಾಂಗ್ ಪ್ರದೇಶದಲ್ಲಿ ನಾಲ್ಕು ಮಂದಿ ಮೃತಪಟ್ಟಿರುವುದನ್ನು ಹಿರಿಯ ಪೊಲೀಸ್ ಅಧಿಕಾರಿಗಳು ದೃಢಪಡಿಸಿದ್ದಾರೆ. ಆದರೆ ಇನ್ನೂ ಘಟನಾ ಸ್ಥಳವನ್ನು ಪೊಲೀಸರು

ಮಣಿಪುರದಲ್ಲಿ ಮತ್ತೆ ಮುಂದುವರಿದ ಹಿಂಸಾಚಾರ| ನಾಲ್ವರು ಬಲಿ, ಕರ್ಪ್ಯೂ‌ ಹೇರಿಕೆ Read More »

ಕುಕ್ಕೆ ಸುಬ್ರಹ್ಮಣ್ಯ: ನಿವೃತ್ತರಾದ ಮಾವುತ ಶ್ರೀನಿವಾಸರನ್ನ ಗೌರವಿಸಿ ಬೀಳ್ಕೊಟ್ಟ ‘ಯಶಸ್ವಿ’

ಸಮಗ್ರ ನ್ಯೂಸ್: ಮಹತೋಭಾರ ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಆನೆ ‘ಯಶಸ್ವಿ’ಯ ಮಾವುತರಾಗಿದ್ದ ಶ್ರೀನಿವಾಸ ಗೌಡ ಧರ್ಮಸ್ಥಳ ಭಾನುವಾರ ನಿವೃತ್ತರಾದರು. ಯಶಸ್ವಿಯು ಶ್ರೀನಿವಾಸ ಅವರಿಗೆ ಹಾರ ಹಾಕಿ ಸೊಂಡಿಲನ್ನು ಅವರ ತಲೆಯ ಮೇಲಿರಿಸಿ ಗೌರವ ಸಲ್ಲಿಸಿತು. ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆನೆ ಮಾವುತರಾಗಿ ಸುಮಾರು 15ವರ್ಷ ಅವರು ಸೇವೆ ಸಲ್ಲಿಸಿದ್ದರು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ ಶ್ರೀನಿವಾಸ ಅವರನ್ನು ಸನ್ಮಾನಿಸಿದರು. ದೇವಳದ ಕಾರ್ಯನಿರ್ವಹಣಾಧಿಕಾರಿ ನಿಂಗಯ್ಯ ಇದ್ದರು.

ಕುಕ್ಕೆ ಸುಬ್ರಹ್ಮಣ್ಯ: ನಿವೃತ್ತರಾದ ಮಾವುತ ಶ್ರೀನಿವಾಸರನ್ನ ಗೌರವಿಸಿ ಬೀಳ್ಕೊಟ್ಟ ‘ಯಶಸ್ವಿ’ Read More »

3 ವರ್ಷದ ಮಗು ಸೇರಿ ಒಂದೇ ಫ್ಯಾಮಿಲಿಯಲ್ಲಿ ಐವರ ಶವಪತ್ತೆ! ನಿಜಕ್ಕೂ ಆಗಿದ್ದೇನು?

ಹೊಸ ವರ್ಷದಂದು ಇಡೀ ದೇಶವೇ ಸಂಭ್ರಮದಲ್ಲಿದ್ದರೆ, ಪಂಜಾಬ್‌ನಲ್ಲಿ ಕುಟುಂಬವೊಂದು ದುರಂತ ಅಂತ್ಯ ಕಂಡಿದೆ. ಜಲಂಧರ್ ಜಿಲ್ಲೆಯ ಆದಂಪುರ ಗ್ರಾಮದಲ್ಲಿ ಒಂದೇ ಕುಟುಂಬದ ಐವರು ಅವರ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮೂಲಗಳ ಮಾಹಿತಿ ಪ್ರಕಾರ ಸಾಲಬಾದೆ ತಾಳಲಾರದೆ ಕುಟುಂಬಸ್ಥರರೆಲ್ಲರೂ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ಭಾನುವಾರ ರಾತ್ರಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರಲ್ಲಿ 59 ವರ್ಷದ ಮನಮೋಹನ್ ಸಿಂಗ್, ಅವರ ಪತ್ನಿ, ಇಬ್ಬರು ಪುತ್ರಿಯರು

3 ವರ್ಷದ ಮಗು ಸೇರಿ ಒಂದೇ ಫ್ಯಾಮಿಲಿಯಲ್ಲಿ ಐವರ ಶವಪತ್ತೆ! ನಿಜಕ್ಕೂ ಆಗಿದ್ದೇನು? Read More »

ನಾಳೆ(ಜ.2) ಸುಳ್ಯ ಮೆಸ್ಕಾಂನ ಉಪವಿಭಾಗ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ

ಸಮಗ್ರ ನ್ಯೂಸ್: ಜ.2 ನೇ ಮಂಗಳವಾರದಂದು ಸುಳ್ಯ ಮೆಸ್ಕಾಂನ ಉಪವಿಭಾಗ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. 33 ಕೆ.ವಿ. ಮಾಡಾವು ಬೆಳ್ಳಾರೆ, 33 ಕೆ.ವಿ. ಗುತ್ತಿಗಾರು ವಿದ್ಯುತ್ ಮಾರ್ಗಗಳಲ್ಲಿ ಮತ್ತು 11 ಕೆ.ವಿ. ಫೀಡರುಗಳಲ್ಲಿ ತುರ್ತು ನಿಯತಕಾಲಿಕ ನಿರ್ವಹಣಾ ಕೆಲಸವನ್ನು‌ ಹಮ್ಮಿಕೊಂಡಿರುವುದರಿಂದ 110/33 ಕೆ.ವಿ. ಮಾಡಾವು ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ 33 ಕೆ.ವಿ. ಗುತ್ತಿಗಾರು ಮತ್ತು 33/11 ಕೆ.ವಿ. ಬೆಳ್ಳಾರೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ 11 ಕೆ.ವಿ. ಬೆಳ್ಳಾರೆ 1, ಬೆಳ್ಳಾರೆ 2, ನೆಟ್ಟಾರು,

ನಾಳೆ(ಜ.2) ಸುಳ್ಯ ಮೆಸ್ಕಾಂನ ಉಪವಿಭಾಗ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ Read More »