ಕೊಡಗಿನಲ್ಲಿ ಯುವ ಪ್ರತಿಭೆಗಳಿಗೆ ಮುಕ್ತ ಅವಕಾಶವಿದೆ, ಕ್ರೀಡೆಗೆ ಹೆಚ್ಚು ಒತ್ತು ನೀಡುವ ಜಿಲ್ಲೆ ನಮ್ಮದು: ಮಂತರ್ ಗೌಡ
ಸಮಗ್ರ ನ್ಯೂಸ್: ಕೂಡಿಗೆ ಕ್ರೀಡಾ ಶಾಲೆಯಲ್ಲಿ ಇಂದಿನಿಂದ ಆರಂಭವಾದ 67ನೇ ವರ್ಷದ ರಾಷ್ಟ್ರ ಮಟ್ಟದ 17 ವರ್ಷದ ಬಾಲಕಿಯರ ಪಂದ್ಯಾವಳಿಯ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಸಕ ಮಂತರ ಗೌಡರವರು ಮಾತನಾಡಿ ಕೊಡಗಿನಲ್ಲಿ ಕ್ರೀಡೆಗೆ ಹೆಚ್ಚು ಒತ್ತು ನೀಡಲಾಗಿದೆ. ಕೊಡಗು ಹಾಕಿ ಕ್ರೀಡೆಯಲ್ಲಿ ಹೆಸರುವಾಸಿ ಆಗಿದ್ದು ಯುವಪ್ರತಿಭೆಗಳಿಗೆ ಮುಕ್ತ ಅವಕಾಶ ನೀಡಲಾಗಿದೆ. ಇಂದು ರಾಷ್ಟ್ರೀಯ ಮಟ್ಟದ ಕ್ರೀಡಾಕೂಟ ಕೊಡಗಿನಲ್ಲಿ ನಡೆಯುತ್ತಿರುವುದು ಹೆಮ್ಮೆಯ ವಿಚಾರ. ಇಲ್ಲಿ ಭಾಗವಹಿಸುತ್ತಿರುವ ಎಲ್ಲಾ ತಂಡಗಳು ಕೂಡ ಉತ್ತಮವಾಗಿ ಪ್ರದರ್ಶನವನ್ನು ನೀಡಿ ತಮ್ಮ ಸಾಮರ್ಥ್ಯವನ್ನು […]