January 2024

ಕಡಬ: ಮನೆಯ ಬೀಗ ಮುರಿದು ಲಕ್ಷಾಂತರ ರೂ. ಮೌಲ್ಯದ ನಗದು ದೋಚಿ ಪರಾರಿ

ಸಮಗ್ರ ನ್ಯೂಸ್: ಮನೆಗೆ ಬೀಗ ಹಾಕಿ ಮನೆ ಮಂದಿ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ನಗ, ನಗದನ್ನು ದೋಚಿರುವ ಘಟನೆ ಕಡಬ ಠಾಣಾ ವ್ಯಾಪ್ತಿಯ ಆತೂರು ಕೊಯಿಲ ಎಂಬಲ್ಲಿ ಗುರುವಾರ ತಡರಾತ್ರಿ ನಡೆದಿದೆ. ಆತೂರು ಕೊಯಿಲ ಸಮೀಪದ ಕಲಾಯಿ ನಿವಾಸಿ ಯಾಕುಬ್ ಎಂಬವರ ಮನೆಯ ಬೀಗ ಮುರಿದ ಕಳ್ಳರು ನಗದನ್ನು ದೋಚಿದ್ದಾರೆ. ಇನ್ನು ಪಕ್ಕದಲ್ಲಿರುವ ಮನೆಯೊಂದರ ಬೀಗ‌ ಮುರಿಯುವ ವೇಳೆ ಆಟೋ ರಿಕ್ಷಾ ಆಗಮಿಸುವುದನ್ನು ನೋಡಿದ ಕಳ್ಳರು […]

ಕಡಬ: ಮನೆಯ ಬೀಗ ಮುರಿದು ಲಕ್ಷಾಂತರ ರೂ. ಮೌಲ್ಯದ ನಗದು ದೋಚಿ ಪರಾರಿ Read More »

ನನ್ನನ್ನೂ ಬಂಧಿಸಿ ಎಂದು ಪ್ರತಿಭಟಿಸಿದ ಶಾಸಕ ವಿ. ಸುನಿಲ್ ಕುಮಾರ್ ಅರೆಸ್ಟ್

ಸಮಗ್ರ ನ್ಯೂಸ್: ಅಯೋಧ್ಯೆ ರಾಮಮಂದಿರದ ಕರಸೇವಕ ನಾನು. ನನ್ನನ್ನೂ ಬಂಧಿಸಿ’ ಎಂದು ಆಗ್ರಹಿಸಿ ನಗರದ ಸದಾಶಿವನಗರ ಪೊಲೀಸ್ ಠಾಣೆ ಎದುರು ಗುರುವಾರ ಬೆಳಿಗ್ಗೆ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ ಶಾಸಕರೂ‌ ಆಗಿರುವ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಸುನಿಲ್ ಕುಮಾರ್ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು. ನನ್ನನ್ನೂ ಬಂಧಿಸಿ ಎಂಬ ಬರಹವುಳ್ಳ ಕರಪತ್ರ ಹಿಡಿದು ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ‌ಹೊರಹಾಕಿದರು.‌ ಇದೇ ವೇಳೆ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು

ನನ್ನನ್ನೂ ಬಂಧಿಸಿ ಎಂದು ಪ್ರತಿಭಟಿಸಿದ ಶಾಸಕ ವಿ. ಸುನಿಲ್ ಕುಮಾರ್ ಅರೆಸ್ಟ್ Read More »

ನಾಲಗೆ ಕ್ಯಾನ್ಸರ್

ಸಮಗ್ರ ನ್ಯೂಸ್: ನಾಲಗೆ ಕ್ಯಾನ್ಸರ್ ಎನ್ನುವುದು ಬಾಯಿಯ ಕ್ಯಾನ್ಸರಿನ ಒಂದು ಉಪ ವಿಂಗಡಣೆಯಾಗಿರುತ್ತದೆ. ಅದರೆ ಬಾಯಿಯ ಇತರ ಭಾಗಗಳಾದ ದವಡೆ, ಕೆನ್ನೆ, ತುಟಿ, ಅಂಗಳ ಮುಂತಾದ ಭಾಗದ ಕ್ಯಾನ್ಸರ್‍ಗಳಿಗಿಂತ ನಾಲಗೆ ಕ್ಯಾನ್ಸರ್ ಬಹಳ ಅಪಾಯಕಾರಿ. ಸಾಮಾನ್ಯವಾಗಿ ಕ್ಯಾನ್ಸರ್ ರೋಗದ ತ್ರೀವ್ರತೆಯನ್ನು ಗಡ್ಡೆಯ ಗಾತ್ರ ಮತ್ತು ಜೀವಕೋಶಗಳ ರಚನೆಯ ಮೇಲೆ ನಿರ್ಧರಿಸಲಾಗುತ್ತದೆ. ಆದರೆ ನಾಲಗೆ ಕ್ಯಾನ್ಸರ್ ಇದಕ್ಕೆ ತದ್ವಿರುದ್ದವಾಗಿ ವರ್ತಿಸುತ್ತದೆ. ಅತೀ ಸಣ್ಣ ಕ್ಯಾನ್ಸರ್ ಗಡ್ಡೆಯೂ ಮಾರಣಾಂತಿಕವಾಗುವ ಮತ್ತು ಬೇಗನೆ ಕುತ್ತಿಗೆಯ ದುಗ್ಧಗ್ರಂಥಿಗಳಿಗೆ ಮತ್ತು ದೇಹದ ಇತರ ಬಾಗಕ್ಕೆ

ನಾಲಗೆ ಕ್ಯಾನ್ಸರ್ Read More »

ಸುಳ್ಯ:ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸುಳ್ಯ ವತಿಯಿಂದ First Aid Box ಹಸ್ತಾಂತರ

ಸಮಗ್ರ ನ್ಯೂಸ್: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸುಳ್ಯ ವತಿಯಿಂದ First Aid Boxಗಳನ್ನು, ಸಭಾಪತಿ ಸುಧಾಕರ್ ರೈ ಇವರು ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಬಿ.ಈ. ಇವರಿಗೆ ಹಸ್ತಾಂತರಿಸಿದರು. ಸುಳ್ಯ ತಾಲೂಕಿನ ಆಯ್ದ ಶಾಲೆಗಳಿಗೆ ಈ ಕಿಟ್ ವಿತರಿಸಲಾಗಿದೆ. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ರಾಜ್ಯ ಪರಿಷತ್ ಸದಸ್ಯ ಮತ್ತು ಭಾ.ರೆ.ಕ್ರಾ. ನಿರ್ದೇಶಕ ಪೃಥ್ವಿ ಕುಮಾರ್ ಟಿ., ಭಾ.ರೆ.ಕ್ರಾ. ನಿರ್ದೇಶಕ ಶಿವಪ್ರಸಾದ್ ಕೆ.ವಿ., ಪದ್ಮ, ಕಾರ್ಯದರ್ಶಿ ತಿಪ್ಪೇಶ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ

ಸುಳ್ಯ:ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸುಳ್ಯ ವತಿಯಿಂದ First Aid Box ಹಸ್ತಾಂತರ Read More »

ಲಕ್ಷದ್ವೀಪದಲ್ಲಿ ಮೋದಿ ಸ್ನಾರ್ಕ್ಲಿಂಗ್

ಸಮಗ್ರ ನ್ಯೂಸ್: ಪ್ರಧಾನಿ ನರೇಂದ್ರ ಮೋದಿ ಭಾರತದ ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪದಲ್ಲಿ ವಾಸ್ತವ್ಯ ಹೂಡಿದ್ದಾಗ ತೆಗೆಸಿದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಆ ಫೋಟೋಗಳು ಭಾರೀ ಸದ್ದು ಮಾಡುತ್ತಿದೆ. ಎರಡು ದಿನಗಳ ಕಾಲ ತಮಿಳುನಾಡು, ಕೇರಳ ಮತ್ತು ಲಕ್ಷದ್ವೀಪ ಪ್ರವಾಸದಲ್ಲಿದ್ದ ಮೋದಿ ಅವರು ಹಲವು ಮನಮೋಹಕ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಲಕ್ಷದ್ವೀಪದಲ್ಲಿ ಸ್ನಾರ್ಕ್ಲಿಂಗ್ ಮಾಡುತ್ತಿರುವ ಫೋಟೋಗಳು ಹಾಗೂ ಕಡಲತೀರಗಳಲ್ಲಿ ಮಾರ್ನಿಂಗ್ ವಾಕ್‌ ಮಾಡುತ್ತಾ ಅನುಭವಿಸಿದ ಸುಂದರ ಕ್ಷಣಗಳ ಫೋಟೋಗಳನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಪ್ರಧಾನಿ ಹಂಚಿಕೊಂಡ

ಲಕ್ಷದ್ವೀಪದಲ್ಲಿ ಮೋದಿ ಸ್ನಾರ್ಕ್ಲಿಂಗ್ Read More »

ಎದೆಗೆ ಗುಂಡು ಹೊಡೆದುಕೊಂಡು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ

ಸಮಗ್ರ ನ್ಯೂಸ್: ಎದೆಗೆ ಗುಂಡು ಹೊಡೆದುಕೊಂಡು ವಿದ್ಯಾರ್ಥೀಯೊಬ್ಬ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮೃತ ವಿದ್ಯಾರ್ಥಿಯನ್ನು ವಿಷು ಉತ್ತಪ್ಪ (19) ಎಂದು ಗುರುತಿಸಲಾಗಿದೆ. ಕೊಡಗು ಮೂಲದ ಮೃತ ವಿಷು ಉತ್ತಪ್ಪನ ತಂದೆ ತಮ್ಮಯ್ಯ ರೇಷನ್ ತರಲು ಹೋದಾಗ ಪುತ್ರ ವಿಷು ಉತ್ತಪ್ಪ ಮನೆಯಲ್ಲಿದ್ದ ಗನ್ ತೆಗೆದುಕೊಂಡು ಎದೆಗೆ ಶೂಟ್ ಮಾಡಿಕೊಂಡು ತಂದೆಗೆ ಕರೆ ಮಾಡಿ ಇನ್ಮುಂದೆ ತಪ್ಪು ಮಾಡುವುದಿಲ್ಲ ಅಂತ ಹೇಳಿದ್ದಾನೆ ಎನ್ನಲಾಗಿದೆ. ಈ ನಡುವೆ ಕೂಡಲೇ ಮನೆಗೆ ಬಂದ ತಮ್ಮಯ್ಯ ಮಗನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

ಎದೆಗೆ ಗುಂಡು ಹೊಡೆದುಕೊಂಡು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ Read More »

“ಪ್ರಧಾನಿ ನರೇಂದ್ರ ಮೋದಿ, ಸಿಎಂ ಯೋಗಿ ಆದಿತ್ಯನಾಥ್​ ಇರುವವರೆಗೂ ರಾಮ ಮಂದಿರ ಇರತ್ತೆ”

ಸಮಗ್ರ ನ್ಯೂಸ್:ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ಇರುವವರೆಗೂ ರಾಮ ಮಂದಿರ ಇರತ್ತೆ ಎಂದು ಎಂದು ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ. ವಿಜಯಪುರ ದ ಕೃಷ್ಣ ಮಠದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೇಜಾವರ ಶ್ರೀ ಅವರು ಭಾರತದ ಮೇಲೆ ಎಷ್ಟೋ ಜನ ಧಾಳಿ ಮಾಡಿದರೂ ಸನಾತನ ಧರ್ಮವನ್ನು ನಾಶಮಾಡಲು ಯಾರಿಂದಲೂ ಸಾಧ್ಯವಾಗಲಿಲ್ಲ ಯಾಕೆಂದರೆ ಈ ಧರ್ಮಕ್ಕೆ ಅದರದ್ದೇ ಆದ ವೈಶಿಷ್ಟ ಇದೆ ಎಂದು ವಿಶ್ಲೇಷಕರು ಹೇಳಿದ ಮಾತು

“ಪ್ರಧಾನಿ ನರೇಂದ್ರ ಮೋದಿ, ಸಿಎಂ ಯೋಗಿ ಆದಿತ್ಯನಾಥ್​ ಇರುವವರೆಗೂ ರಾಮ ಮಂದಿರ ಇರತ್ತೆ” Read More »

ಭಾರತ ಹಿಂದುರಾಷ್ಟ್ರ ಆಗಬಾರದು, ಹಿಂದು ರಾಷ್ಟ್ರವಾದರೆ ಅದಕ್ಕಿಂತಲೂ ದೊಡ್ಡ ಅಪಾಯ ಮತ್ತೊಂದಿಲ್ಲ: ಯತೀಂದ್ರ ಸಿದ್ದರಾಮಯ್ಯ

ಸಮಗ್ರ ನ್ಯೂಸ್: ಭಾರತ ಹಿಂದುರಾಷ್ಟ್ರ ಆಗಬಾರದು, ಹಿಂದು ರಾಷ್ಟ್ರವಾದರೆ ಅದಕ್ಕಿಂತಲೂ ದೊಡ್ಡ ಅಪಾಯ ಮತ್ತೊಂದಿಲ್ಲ ಎಂದು ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ ಸಮಾರಂಭದಲ್ಲಿ ಮಾತನಾಡಿ, ಭಾರತವೇನಾದರೂ ಹಿಂದು ರಾಷ್ಟ್ರವಾದರೆ ಪಾಕಿಸ್ತಾನ, ಅಫ್ಘಾನಿಸ್ತಾನ ಆಗುತ್ತದೆ. ನಮ್ಮ ದೇಶ ಹಿಂದು ರಾಷ್ಟ್ರವಾಗಬಾರದು, ಹಾಗೇನಾದರೂ ಆದರೆ ಅದಕ್ಕಿಂತಲೂ ದೊಡ್ಡ ಅಪಾಯ ಮತ್ತೊಂದಿಲ್ಲ ಎಂದು ಡಾ.ಬಿ.ಆರ್‌. ಅಂಬೇಡ್ಕರ್‌ ಅವರೇ ಹೇಳಿದ್ದಾರೆ. ನಮ್ಮ ದೇಶ ಹಿಂದು ರಾಷ್ಟ್ರವಾದರೆ ದೇಶಕ್ಕೆ ತೊಂದರೆಯಾಗಲಿದೆ ಎಂದು ಹೇಳಿದರು. ಧರ್ಮದ ಹೆಸರಿನಲ್ಲಿ ಸರ್ವಾಧಿಕಾರ

ಭಾರತ ಹಿಂದುರಾಷ್ಟ್ರ ಆಗಬಾರದು, ಹಿಂದು ರಾಷ್ಟ್ರವಾದರೆ ಅದಕ್ಕಿಂತಲೂ ದೊಡ್ಡ ಅಪಾಯ ಮತ್ತೊಂದಿಲ್ಲ: ಯತೀಂದ್ರ ಸಿದ್ದರಾಮಯ್ಯ Read More »

“ ಒಂದು ಬೆಡ್‍ರೂಮ್ ಪ್ಲಾಟಿನ ಕಥೆ”

ಸಮಗ್ರ ನ್ಯೂಸ್: ಆತ ಹಳ್ಳಿಯಲ್ಲಿ ಹುಟ್ಟಿ ಬೆಳೆದ ಹುಡುಗ. ಕಡು ಬಡತನವಿದ್ದರೂ ಚೆನ್ನಾಗಿ ಓದಿ ಒಳ್ಳೆ ಮಾರ್ಕ್ ತೆಗೆದುಕೊಂಡು ಕಷ್ಟಪಟ್ಟು ಇಂಜಿನಿಯರಿಂಗ್ ಸೀಟು ಗಿಟ್ಟಿಸಿಕೊಂಡಿದ್ದ. ತಂದೆ ಹಳ್ಳಿಯ ಸರಕಾರಿ ಶಾಲೆಯ ಮೇಷ್ಟ್ರು. ಸರಕಾರಿ ಶಾಲೆಯಲ್ಲಿ ಪ್ರಾಮಾಣಿಕವಾಗಿ ದುಡಿಯುವ ಬಡ ಮೇಷ್ಟ್ರು. ಯಾವುದಕ್ಕೂ ಯಾರೆದುರೂ ಹಲ್ಲು ಗಿಂಜಿದವರಲ್ಲ. ತಾನಾಯಿತು, ತನ್ನ ಕೆಲಸವಾಯಿತು ಎಂದು ವೃತ್ತಿಯನ್ನು ನಿಷ್ಠೆಯಿಂದ ಪ್ರಾಮಾಣಿಕವಾಗಿ ಮಾಡಿ ಒಳ್ಳೆ ಹೆಸರುಗಳಿಸಿದ್ದರು. ಸರಕಾರಿ ಸಂಬಳದಿಂದ ಹೇಗೋ ಕುಟುಂಬ ನಿಭಾಯಿಸುತ್ತಿದ್ದರು. ಕಷ್ಟಪಟ್ಟು ತನ್ನ ದುಡಿಮೆಯ ಹಣವನ್ನು ಹೊಂದಿಸಿ ಮಗನ ಇಂಜಿನಿಯರಿಂಗ್

“ ಒಂದು ಬೆಡ್‍ರೂಮ್ ಪ್ಲಾಟಿನ ಕಥೆ” Read More »

ಪುತ್ತೂರು: ಜ.14ರಿಂದ ಜ. 19ರವರೆಗೆ ಪಡುಮಲೆ ಶ್ರೀ ಉಳ್ಳಾಕುಲು ವ್ಯಾಘ್ರಚಾಮುಂಡಿ ದೈವಸ್ಥಾನದಲ್ಲಿ ಶ್ರೀ ದೈವಗಳ ನೇಮೊತ್ಸವ

ಸಮಗ್ರ ನ್ಯೂಸ್: ಪಡುಮಲೆ ಶ್ರೀ ಉಳ್ಳಾಕುಲು ವ್ಯಾಘ್ರಚಾಮುಂಡಿ ದೈವಸ್ಥಾನ ಪಡುಮಲೆ ಇಲ್ಲಿನ ವಾರ್ಷಿಕ ನೇಮೊತ್ಸವ ಜ.14ರಿಂದ 19ರ ವರೆಗೆ ನಡೆಯಲಿರುವುದು. ಜ.14ನೇ ಆದಿತ್ಯವಾರ ಭಂಡಾರ ತೆಗೆಯುವುದು, ಧ್ವಜಾರೋಹಣ, ಬೀರತಂಬಿಲ. 15ರಂದು ರಾತ್ರಿ ಪೂ. ಗಂಟೆ 6-00ರಿಂದ 48 ಕಾಯಿ ಗಣಪತಿ ಹೋಮ, ಪೂ. ಗಂಟೆ 9-00ರಿಂದ ಆನೆ ಚಪ್ಪರ ಏರಿಸುವುದು, ಬಳಿಕ ಮಕರ ತೋರಣ ಏರಿಸುವುದು, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ಗಂಟೆ 8ರಿಂದ ಪಾಲಕ್ಕಿ ಉತ್ಸವ, ಬೀರತಂಬಿಲ. 16ರಂದು ಪೂ. ಗಂಟೆ 11-00ರಿಂದ ಕಿನ್ನಿಮಾಣಿ ದೈವದ

ಪುತ್ತೂರು: ಜ.14ರಿಂದ ಜ. 19ರವರೆಗೆ ಪಡುಮಲೆ ಶ್ರೀ ಉಳ್ಳಾಕುಲು ವ್ಯಾಘ್ರಚಾಮುಂಡಿ ದೈವಸ್ಥಾನದಲ್ಲಿ ಶ್ರೀ ದೈವಗಳ ನೇಮೊತ್ಸವ Read More »