January 2024

ವಿಧಾನಸೌಧ ಮುಂಭಾಗದಲ್ಲೇ ಸೀಮೆಎಣ್ಣೆ ಸುರಿದುಕೊಂಡು ದಂಪತಿ ಆತ್ಮಹತ್ಯೆಗೆ ಯತ್ನ..!

ಸಮಗ್ರ ನ್ಯೂಸ್: ಸಾಲ ಪಾವತಿಸದ ಹಿನ್ನೆಲೆಯಲ್ಲಿ ಬ್ಯಾಂಕ್​ನವರು ಜಮೀನು ಹರಾಜು ಹಾಕಿದ್ದರು. ಇದರಿಂದ ಮನನೊಂದು ಶಾಯಿಸ್ತಾ ದಂಪತಿ ವಿಧಾನಸೌಧ ಮುಂಭಾಗದಲ್ಲೇ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸ್ಥಳದಲ್ಲಿದ್ದ ಪೊಲೀಸರು ಕೂಡಲೆ ದಂಪತಿಯನ್ನು ತಡೆದಿದ್ದಾರೆ. ಬೆಂಗಳೂರು ಕೋ ಆಪರೇಟೀವ್ ಬ್ಯಾಂಕ್‌ನಿಂದ 50 ಲಕ್ಷ ಸಾಲ ಪಡೆದುಕೊಂಡಿದ್ದೆ. ಇದೀಗ ಸಾಲಕ್ಕೆ ₹1.20 ಕೋಟಿಯ ಮನೆ ಸೀಜ್ ಮಾಡಿದ್ದಾರೆ. ಬ್ಯಾಂಕ್ ನಿಂದ ನಮಗೆ ಅನ್ಯಾಯವಾಗಿದೆ ಎಂದು ಮೊಹಮದ್ ಮುನಾಯಿದ್ ಉಲ್ಲಾ ಆರೋಪಿಸಿದ್ದಾರೆ.ಸಚಿವ ಜಮೀರ್ ಅಹ್ಮದ್ ಖಾನ್ ಸಹಾಯ ಮಾಡ್ತೀನಿ ಅಂತ ಹೇಳಿ […]

ವಿಧಾನಸೌಧ ಮುಂಭಾಗದಲ್ಲೇ ಸೀಮೆಎಣ್ಣೆ ಸುರಿದುಕೊಂಡು ದಂಪತಿ ಆತ್ಮಹತ್ಯೆಗೆ ಯತ್ನ..! Read More »

ಕಾಪು: ಮಳೆಗಾಲ ಕೆಸರು, ಬೇಸಿಗೆಯಲ್ಲಿ ಧೂಳು| ಇದು ರಸ್ತೆ ಪ್ರಯಾಣಿಕರ ಪಾಡು

ಸಮಗ್ರ ನ್ಯೂಸ್: ವರ್ಷವಿಡಿ ಧೂಳು ಇಲ್ಲವೇ ಕೆಸರಿನಿಂದ ತುಂಬಿದ ರಸ್ತೆಯಲ್ಲಿ ಸಾರ್ವಜನಿಕರು ಓಡಾಡಲು ಸಂಕಷ್ಟಪಡಬೇಕಾದ ದುಸ್ಥಿತಿ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಕುತ್ಯಾರು ಗ್ರಾಮದ ಅಗರ್ ದಂಡೆ ಕೇಂಜಿಬೈಲು ರಸ್ತೆ ಪ್ರಯಾಣಿಕರಿಗೆ ಎದುರಾಗಿದೆ. ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಮಳೆಗಾಲದಲ್ಲಿ ಕೆಸರುಮಯ ರಸ್ತೆಯಾದರೆ ಬೇಸಿಗೆಯಲ್ಲಿ ಧೂಳುಮಯ ರಸ್ತೆಯಿಂದಾಗಿ ಇಲ್ಲಿನ ಜನ ವರ್ಷವಿಡೀ ಸಂಕಷ್ಟ ಪಡುವಂತ ಸ್ಥಿತಿ ಎದುರಾಗಿದೆ. ಸುಮಾರು 500 ಮೀಟರ್ ಉದ್ದದ ರಸ್ತೆ ಇದಾಗಿದ್ದು 100 ಮೀಟರ್ ಮಾತ್ರ ಕಾಂಕ್ರೀಟ್ ರಸ್ತೆಯಾಗಿದೆ. ವಯಸ್ಸಾದವರನ್ನು ಇಲ್ಲವೇ ಅನಾರೋಗ್ಯಕ್ಕೆ ಒಳಗಾದವರನ್ನು

ಕಾಪು: ಮಳೆಗಾಲ ಕೆಸರು, ಬೇಸಿಗೆಯಲ್ಲಿ ಧೂಳು| ಇದು ರಸ್ತೆ ಪ್ರಯಾಣಿಕರ ಪಾಡು Read More »

ಅಯ್ಯಪ್ಪ ಮಾಲಾಧರಿಗಳಿಗೆ ಅನ್ನ ಸಂತರ್ಪಣೆ ನೀಡಿ ಸೌಹಾರ್ದತೆ ಮೆರೆದ ಮುಸ್ಲಿಂ ಕುಟುಂಬ

ಸಮಗ್ರ ನ್ಯೂಸ್: ಮುಸ್ಲಿಂ ಕುಟುಂಬವೊಂದು ಶಬರಿಮಲೆ ತೀರ್ಥಯಾತ್ರಿಗಳಿಗೆ ಅನ್ನಸಂತರ್ಪಣೆ ಆಯೋಜಿಸಿ ಧಾರ್ಮಿಕ ಸೌಹಾರ್ದತೆ ಮೆರೆದಿರುವ ಸುದ್ದಿಯೊಂದು ಕೊಪ್ಪಳದ ಜಯನಗರದಿಂದ ವರದಿಯಾಗಿದೆ. ಈ ಕುರಿತ ಫೋಟೋಗಳು ಹಾಗೂ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ. ಜಿಲ್ಲಾ ಪಿಂಜಾರ ಸಮುದಾಯದ ಅಧ್ಯಕ್ಷ ಖಾಶಿಂ ಆಲಿ ಮುದ್ದಬಳ್ಳಿ ಅವರ ನಿವಾಸದಲ್ಲಿಯೇ ಈ ಅನ್ನಸಂತರ್ಪಣೆ ಆಯೋಜಿಸಲಾಗಿತ್ತು. ಅಯ್ಯಪ್ಪ ವೃತಧಾರಿಗಳು ಖಾಶಿಂ ಮನೆಯಲ್ಲಿ ಭಜನೆಗಳನ್ನು ಹಾಡಿ ಅಯ್ಯಪ್ಪನನ್ನು ಆರಾಧಿಸಿದರು. ಖಾಶಿಂ ಅವರ ಕುಟುಂಬ ಸದಸ್ಯರೂ ಪಾಲ್ಗೊಂಡರು. ಎಲ್ಲಾ ಧರ್ಮಗಳೂ ಒಂದೇ ಹಾಗೂ ಎಲ್ಲರೂ ಎಲ್ಲಾ

ಅಯ್ಯಪ್ಪ ಮಾಲಾಧರಿಗಳಿಗೆ ಅನ್ನ ಸಂತರ್ಪಣೆ ನೀಡಿ ಸೌಹಾರ್ದತೆ ಮೆರೆದ ಮುಸ್ಲಿಂ ಕುಟುಂಬ Read More »

ರಾಮಮಂದಿರ ಟ್ರಸ್ಟ್ ನ ಆಹ್ವಾನವನ್ನು ತಿರಸ್ಕರಿಸಿದ ‘ಕೈ’ ನಾಯಕರು…?

ಸಮಗ್ರ ನ್ಯೂಸ್: ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಇನ್ನೇನೂ ಕೆಲವು ದಿನಗಳಷ್ಟೆ ಬಾಕಿ ಇದೆ. ಈ ಕಾರ್ಯಕ್ರಮಕ್ಕೆ ಕಾಂಗ್ರೆಸ್​ ನಾಯಕಿ ಸೋನಿಯಾ ಗಾಂಧಿ, ಕಾಂಗ್ರೆಸ್​ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಅಧೀರ್ ರಂಜನ್ ಬರುವುದಿಲ್ಲ ಎಂದು ಹೇಳಿದೆ. ರಾಮಮಂದಿರ ಟ್ರಸ್ಟ್ ನ ಆಹ್ವಾನವನ್ನು ಕೈ ನಾಯಕರು ತಿರಸ್ಕರಿಸಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಸಭೆಯಲ್ಲಿ ಒಮ್ಮತದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹಲವಾರು ಪರ-ವಿರೋಧ ಅಭಿಪ್ರಾಯಗಳ ನಡುವೆ ರಾಮ ಮಂದಿರ ಕಾರ್ಯಕ್ರಮದ ವಿಷಯದಲ್ಲಿ ಕಾಂಗ್ರೆಸ್ ನಿಲುವಿನ ಬಗ್ಗೆ ಊಹಾಪೋಹಗಳಿಗೆ ಕೊನೆ ಹಾಡಿದೆ. ಇಂಡಿಯಾ

ರಾಮಮಂದಿರ ಟ್ರಸ್ಟ್ ನ ಆಹ್ವಾನವನ್ನು ತಿರಸ್ಕರಿಸಿದ ‘ಕೈ’ ನಾಯಕರು…? Read More »

ಭಾರತ್ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್ ನಲ್ಲಿ ಉದ್ಯೋಗಕ್ಕೆ ಅರ್ಜಿ ಆಹ್ವಾನ! ಬೇಗ ಅಪ್ಲೈ ಮಾಡಿ

ಸಮಗ್ರ ಉದ್ಯೋಗ: Bharat Electronics Limited ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 81 ಅಪ್ರೆಂಟಿಸ್​ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಜನವರಿ 12, 2024 ಬೆಳಗ್ಗೆ 10 ಗಂಟೆಗೆ ಸಂದರ್ಶನ ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಕರ್ನಾಟಕ ಸೇರಿ ಇತರೆ ರಾಜ್ಯಗಳಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಹುದ್ದೆಯ ಮಾಹಿತಿ:ಗ್ರಾಜುಯೇಟ್ ಅಪ್ರೆಂಟಿಸ್- 63ಟೆಕ್ನಿಷಿಯನ್ (ಡಿಪ್ಲೊಮಾ) ಅಪ್ರೆಂಟಿಸ್-10ಬಿ.ಕಾಂ ಅಪ್ರೆಂಟಿಸ್- 8 ವಿದ್ಯಾರ್ಹತೆ:ಗ್ರಾಜುಯೇಟ್ ಅಪ್ರೆಂಟಿಸ್- ಎಂಜಿನಿಯರಿಂಗ್ ಪದವಿಟೆಕ್ನಿಷಿಯನ್ (ಡಿಪ್ಲೊಮಾ) ಅಪ್ರೆಂಟಿಸ್-ಡಿಪ್ಲೊಮಾಬಿ.ಕಾಂ

ಭಾರತ್ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್ ನಲ್ಲಿ ಉದ್ಯೋಗಕ್ಕೆ ಅರ್ಜಿ ಆಹ್ವಾನ! ಬೇಗ ಅಪ್ಲೈ ಮಾಡಿ Read More »

ಹೃದಯಾಘಾತದಿಂದ ಕ್ರಿಕೆಟ್ ಮೈದಾನದಲ್ಲೇ ಮೃತಪಟ್ಟ ವಿಕಾಸ್

ಸಮಗ್ರ ನ್ಯೂಸ್: ಇತ್ತೀಚೆಗೆ ಹೃದಯಾಘಾತದ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದರಲ್ಲೂ ಜವರಾಯ ಹೇಗೆ ಬರುತ್ತಾನೋ ತಿಳಿಯಲು ಅಸಾಧ್ಯ. ಸಂಪೂರ್ಣ ಫಿಟ್​ನೆಸ್ ಹೊಂದಿದ್ದರೂ ಕೆಲವರು ಹೃದಯಾಘಾತ ಹಾಗೂ ಹೃದಯ ಸ್ತಂಭನದಿಂದ ಸಾವನ್ನಪ್ಪುತ್ತಿರುವ ಸುದ್ದಿಗಳು ಆಗಾಗ್ಗೆ ಕೇಳಿ ಬರುತ್ತಿದೆ. ಇದೀಗ ಕ್ರಿಕೆಟ್ ಪಂದ್ಯಾಟ ನಡುವೆಯೇ 36 ವರ್ಷದ ಯುವಕನೊಬ್ಬ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನೋಯ್ಡಾದಲ್ಲಿ ನಡೆದಿದೆ. ನೋಯ್ಡಾದ ಥಾನಾ ಎಕ್ಸ್​ಪ್ರೇಸ್​ವೇ ಸೆಕ್ಟರ್-135 ಪ್ರದೇಶದಲ್ಲಿ ಕ್ರಿಕೆಟ್ ಟೂರ್ನಿಯನ್ನು ಆಯೋಜಿಸಲಾಗಿತ್ತು. ಈ ಟೂರ್ನಿಯಲ್ಲಿ ಉತ್ತರಾಖಂಡ ಮೂಲದ ವಿಕಾಸ್ ನೇಗಿ ಕಣಕ್ಕಿಳಿದಿದ್ದರು. ಬ್ಯಾಟಿಂಗ್

ಹೃದಯಾಘಾತದಿಂದ ಕ್ರಿಕೆಟ್ ಮೈದಾನದಲ್ಲೇ ಮೃತಪಟ್ಟ ವಿಕಾಸ್ Read More »

ಅಯೋಧ್ಯೆಯಲ್ಲಿ ಮತ್ತೆ ರಾಮನ ಪಟ್ಟಾಭಿಷೇಕ

ಸಮಗ್ರ ನ್ಯೂಸ್:ಇಷ್ಟು ವರ್ಷಗಳ ಕಾಲ ವನವಾಸದಲ್ಲಿದ್ದ ರಾಮನಿಗೆ ಮರಳಿ ತನ್ನ ಸ್ವಂತ ಸ್ಥಳದಲ್ಲಿ ಪಟ್ಟಾಭಿಷೇಕವಾಗುತ್ತಿರುವುದನ್ನು ಕಣ್ತುಂಬಿಕೊಳ್ಳಲು ಕೆಲವೇ ದಿನಗಳು ಬಾಕಿ ಉಳಿದಿವೆ. ಕೋಟ್ಯಾಂತರ ಜನರ ರಾಮರಾಜ್ಯದ ಕನಸು ನನಸಾಗುವ ಅಮೃತಘಳಿಗೆ ಎದುರಾಗುತ್ತಿದೆ. ಆ ಒಂದು ಸುಸಂದರ್ಭಕ್ಕೆ ಸಾಕ್ಷಿಯಾಗಲು ಇಡೀ ಹಿಂದೂಸ್ತಾನವೇ ಕ್ಷಣಗಣನೆಗೆ ಸಿದ್ಧವಾಗಿದೆ. ಎಷ್ಟೋ ಹೋರಾಟಗಳು, ಎಷ್ಟೋ ಸಾವುಗಳು, ಅದೆಷ್ಟೋ ಚಳುವಳಿಗಳು, ತ್ಯಾಗ-ಬಲಿದಾನಗಳ ಫಲವಾಗಿ ಇಂದು ಭಾರತೀಯರು ರಾಮನ ರಾಜ್ಯವನ್ನು ಮರಳಿ ಕಟ್ಟುವಂತಾಗಿದೆ. ಶತಮಾನಗಳ ಹೋರಾಟದ ಫಲವಾಗಿ ಇಂದು ರಾಮನ ಜನ್ಮಭೂಮಿ ಹಿಂದೂಗಳದ್ದೇ ಆಗಿದೆ. ವಿಶ್ವಮಟ್ಟದಲ್ಲಿ ಭಾರತ

ಅಯೋಧ್ಯೆಯಲ್ಲಿ ಮತ್ತೆ ರಾಮನ ಪಟ್ಟಾಭಿಷೇಕ Read More »

ಎದೆಹಾಲು ಗಂಟಲಲ್ಲಿ ಸಿಲುಕಿ ಹಸುಳೆ ಸಾವು

ಸಮಗ್ರ ನ್ಯೂಸ್: ತಾಯಿಯ ಎದೆ ಹಾಲು ಗಂಟಲಲ್ಲಿ ಸಿಲುಕಿ ಮಗು ಮೃತಪಟ್ಟ ಘಟನೆ ಮಂಗಳವಾರ ಕಾಸರಗೋಡಿನ ಕುಂಬಳೆ ಸಮೀಪದ ಬಂಬ್ರಾಣದಲ್ಲಿ ನಡೆದಿದೆ. ಸ್ಥಳೀಯ ನಿವಾಸಿ ಅಬ್ದುಲ್ ಅಝೀಝ್-ಖದೀಜಾ ದಂಪತಿ ಪುತ್ರಿ, ಎರಡೂವರೆ ತಿಂಗಳ ಹಸುಳೆ ಮೃತಪಟ್ಟಿದೆ. ಮಲಗಿಕೊಂಡು ಎದೆಹಾಲು ಕುಡಿಯುತ್ತಿದ್ದ ಮಗು ಎಷ್ಟು ಹೊತ್ತಾದರೂ ಎಚ್ಚರಗೊಳ್ಳದೆ ಇದ್ದಾಗ ಕುಂಬಳೆಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅದಾಗಲೇ ಮಗು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದರು. ಕುಂಬಳೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎದೆಹಾಲು ಗಂಟಲಲ್ಲಿ ಸಿಲುಕಿ ಹಸುಳೆ ಸಾವು Read More »

7 ಲಕ್ಷ ಸ್ಯಾಲರಿ ಪ್ಯಾಕೇಜ್ ಕೊಡ್ತಾರೆ ಇಲ್ಲಿ, ಇಂದೇ ಅರ್ಜಿ ಸಲ್ಲಿಸಿ

ಸಮಗ್ರ ಉದ್ಯೋಗ: ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಮ್ಯಾನೇಜ್​ಮೆಂಟ್ ಬೆಂಗಳೂರು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 2 ಸೆಕ್ಯುರಿಟಿ ಸೂಪರ್​ವೈಸರ್​ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಜನವರಿ 11, 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆನ್​ಲೈನ್ ಮೂಲಕ ಅರ್ಜಿ ಹಾಕಬೇಕು. ವಿದ್ಯಾರ್ಹತೆ:ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಮ್ಯಾನೇಜ್​ಮೆಂಟ್ ಬೆಂಗಳೂರು ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ

7 ಲಕ್ಷ ಸ್ಯಾಲರಿ ಪ್ಯಾಕೇಜ್ ಕೊಡ್ತಾರೆ ಇಲ್ಲಿ, ಇಂದೇ ಅರ್ಜಿ ಸಲ್ಲಿಸಿ Read More »

ಇಂದು ಕರಾವಳಿ ಸೇರಿದಂತೆ ರಾಜ್ಯಾದ್ಯಂತ ಭಾರೀ ಮಳೆ ಮುನ್ಸೂಚನೆ

ಸಮಗ್ರ ನ್ಯೂಸ್: ಜನವರಿ 10 ರಂದು ಬುಧವಾರ ರಾಜ್ಯದ ಕರಾವಳಿ ಜಿಲ್ಲೆಗಳು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿಯ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಆಗಲಿದೆ. ದಕ್ಷಿಣ ಒಳನಾಡಿನ ಎಲ್ಲಾ ಜಿಲ್ಲೆಗಳು, ಉತ್ತರ ಒಳನಾಡಿನ ಗದಗ, ಕೊಪ್ಪಳ, ರಾಯಚೂರು ಹೊರತುಪಡಿಸಿ ಉಳಿದ ಕಡೆಗಳಲ್ಲಿ ಸಾಧಾರಣ ಮಳೆಯಾಗುವ ಸಂಭವ ಇದೆ. ದಕ್ಷಿಣ ಕನ್ನಡ, ಹಾಸನ, ಕೊಡಗು ಜಿಲ್ಲೆಗಳ ವ್ಯಾಪ್ತಿಯಲ್ಲಿ ಗುಡುಗು ಸಹಿತ 7 ಸೆಂ.ಮೀ.ಗಿಂತ

ಇಂದು ಕರಾವಳಿ ಸೇರಿದಂತೆ ರಾಜ್ಯಾದ್ಯಂತ ಭಾರೀ ಮಳೆ ಮುನ್ಸೂಚನೆ Read More »