January 2024

ನಕಲಿ ಮೈಸೂರು ಸ್ಯಾಂಡಲ್ ಸೋಪ್ ತಯಾರಿಕಾ ಘಟಕ ಪತ್ತೆ… ಸಂಕ್ರಾಂತಿ ನೆಪದಲ್ಲಿ ಪೊಲೀಸರ ರೈಡ್

ಸಮಗ್ರ ನ್ಯೂಸ್: ನಕಲಿ ಮೈಸೂರು ಸ್ಯಾಂಡಲ್ ಸೋಪ್ ತಯಾರಿಕಾ ಘಟಕ ಪತ್ತೆಯಾಗಿದ್ದು, 2 ಕೋಟಿ ರೂ. ಮೌಲ್ಯದ ಸಾಮಾಗ್ರಿ ವಶಕ್ಕೆ ಪಡೆಯಲಾಗಿದೆ. ಹೈದ್ರಾಬಾದ್ ನಲ್ಲಿ ಈ ಜಾಲ ಪತ್ತೆಯಾಗಿದ್ದು. ಸರ್ಕಾರಿ ಸ್ವಾಮ್ಯದ ಮೈಸೂರು ಸ್ಯಾಂಡಲ್ ಸೋಪ್ ನಕಲಿ ತಯಾರಿಸಿ ಮಾರಾಟ ಮಾಡುತ್ತಿದು ನಕಲಿ ಉತ್ಪನ್ನ, ಪ್ಯಾಕಿಂಗ್​ಗೆ ಬಳಸುತ್ತಿದ್ದ ಕಾರ್ಟನ್ ಬಾಕ್ಸ್ ಸೇರಿದಂತೆ ಸಾಮಾಗ್ರಿಗಳು ಪತ್ತೆಯಾಗಿವೆ. ಹೈದರಾಬಾದಿನ ರಾಕೇಶ್ ಜೈನ್ ಮತ್ತು ಮಹಾವೀರ್ ಜೈನ್ ಎಂಬುವರ ಬಂಧಿಸಲಾಗಿದ್ದು, ಮಾಲಕಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ. ನಕಲಿ ಮೈಸೂರ್ […]

ನಕಲಿ ಮೈಸೂರು ಸ್ಯಾಂಡಲ್ ಸೋಪ್ ತಯಾರಿಕಾ ಘಟಕ ಪತ್ತೆ… ಸಂಕ್ರಾಂತಿ ನೆಪದಲ್ಲಿ ಪೊಲೀಸರ ರೈಡ್ Read More »

ಐಎನ್‍ಡಿಐಎ ಮೈತ್ರಿಕೂಟದ ಸಂಚಾಲಕರಾಗಿ ನಿತೀಶ್ ಕುಮಾರ್ ನೇಮಕ

ಸಮಗ್ರ ನ್ಯೂಸ್: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಐಎನ್‍ಡಿಐಎ ಮೈತ್ರಿಕೂಟದ ಸಂಚಾಲಕರಾಗಿ ನೇಮಕಗೊಂಡಿದ್ದಾರೆ. ಐಎನ್‍ಡಿಐಎ ಮೈತ್ರಿಕೂಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಮೈತ್ರಿಕೂಟದ ಮುಖ್ಯಸ್ತರಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇಮಕಕ್ಕೆ ನಿತೀಶ್ ಕುಮಾರ್ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. ದೆಹಲಿಯಲ್ಲಿ ನಡೆದ ಮೈತ್ರಿಕೂಟದ ಸಭೆಯಲ್ಲಿ ರಾಜ್ಯಸಭಾ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬಹುಮತದೊಂದಿಗೆ ಮೈತ್ರಿಕೂಟದ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಮೈತ್ರಿಕೂಟದ ಸಂಚಾಲಕರಾಗಿ ನಿತೀಶ್ ಕುಮಾರ್ ನೇಮಕಕ್ಕೆ ಕೂಡ ಸಭೆಯಲ್ಲಿ ಗ್ರೀನ್ ಸಿಗ್ನಲ್ ನೀಡಲಾಗಿದೆ.

ಐಎನ್‍ಡಿಐಎ ಮೈತ್ರಿಕೂಟದ ಸಂಚಾಲಕರಾಗಿ ನಿತೀಶ್ ಕುಮಾರ್ ನೇಮಕ Read More »

ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್​​ ಗೆ ಅರ್ಜಿ ಆಹ್ವಾನ, ಬೇಗ ಅಪ್ಲೈ ಮಾಡಿ

ಸಮಗ್ರ ಉದ್ಯೋಗ: ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅನೇಕ ಗ್ರಾಜುಯೇಟ್ ಅಪ್ರೆಂಟಿಸ್ ಟ್ರೈನಿ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಜನವರಿ 14, 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅಪ್ಲೈ ಮಾಡಬೇಕು. ಶೈಕ್ಷಣಿಕ ಅರ್ಹತೆ:ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಸಿವಿಲ್/ಮೆಕ್ಯಾನಿಕಲ್/ಕೆಮಿಕಲ್/ಎಲೆಕ್ಟ್ರಿಕಲ್/ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್/ಎಲೆಕ್ಟ್ರಾನಿಕ್ಸ್ ಮತ್ತು

ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್​​ ಗೆ ಅರ್ಜಿ ಆಹ್ವಾನ, ಬೇಗ ಅಪ್ಲೈ ಮಾಡಿ Read More »

ಪೆರುವಾಜೆ: ರಥೋತ್ಸವ ದಿನ ವಿಶೇಷ ಸಾರಿಗೆ ಬಸ್ಸಿಗೆ ಮನವಿ|ಕೆ.ಎಸ್.ಆರ್.ಟಿ.ಸಿ. ಅಧಿಕಾರಿಯಿಂದ ಭರವಸೆ

ಸಮಗ್ರ ನ್ಯೂಸ್: ಪೆರುವಾಜೆ ಶ್ರೀ ಉದ್ಭವ ಜಲದುರ್ಗಾ ದೇವಿ ದೇವಸ್ಥಾನದ ನೂತನ ರಥೋತ್ಸವ ಜ. 19ರಂದು ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಆಗಮಿಸುವ ಭಕ್ತಾದಿಗಳಿಗೆ ಅನುಕೂಲ ಆಗಲು ಸಾರಿಗೆ ಬಸ್ ವ್ಯವಸ್ಥೆಗೆ ಕಲ್ಪಿಸಲು ಕಾಂಗ್ರೆಸ್ ಸಾಮಾಜಿಕ ಜಾಲತಾಣ ಮಾಜಿ ಜಿಲ್ಲಾಧ್ಯಕ್ಷ ಸಚಿನ್ ರಾಜ್ ಶೆಟ್ಟಿ ಅವರು ಮನವಿ ಮಾಡಿಕೊಂಡರು. ಈ ಸಮಯದಲ್ಲಿ ಮಾಡಾವು, ಕಾಣಿಯೂರು, ಸವಣೂರು, ಕಲ್ಮಡ್ಕ, ಬಾಳಿಲ, ಪೆರ್ಲಂಪಾಡಿ, ಐವರ್ನಾಡು ಈ ಸ್ಥಳಗಳಿಂದ ಸಂಜೆ ಮತ್ತು ರಾತ್ರಿ ವಿಶೇಷ ಸಾರಿಗೆ ವ್ಯವಸ್ಥೆ ಮಾಡುವಂತೆ ಕಾಂಗ್ರೆಸ್ ಸಾಮಾಜಿಕ ಜಾಲತಾಣ

ಪೆರುವಾಜೆ: ರಥೋತ್ಸವ ದಿನ ವಿಶೇಷ ಸಾರಿಗೆ ಬಸ್ಸಿಗೆ ಮನವಿ|ಕೆ.ಎಸ್.ಆರ್.ಟಿ.ಸಿ. ಅಧಿಕಾರಿಯಿಂದ ಭರವಸೆ Read More »

ಚಿಕ್ಕಮಗಳೂರು: ಆಸ್ಪತ್ರೆಗೆ ದಾಖಲಾಗಿದ್ದ ಆರೋಪಿ ಪರಾರಿ

ಸಮಗ್ರ ನ್ಯೂಸ್: ಚಿಕ್ಕಮಗಳೂರು ನಗರದ ಮಲ್ಲೇಗೌಡ ಆಸ್ಪತ್ರೆಗೆ ದಾಖಲಾಗಿದ್ದ ಕೊಲೆ ಯತ್ನದ ಆರೋಪಿಯು ಪರಾರಿಯಾಗಿರುವ ಘಟನೆ ಜ.13 ರಂದು ನಡೆದಿದೆ. ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಐಪಿಸಿ 504,326,307 ಕೊಲೆ ಯತ್ನ ಪ್ರಕರಣದ ಆರೋಪಿ ಎಂ .ಕೆ ಪೂರ್ಣೇಶ್ ನನ್ನು ಚಿಕ್ಕಮಗಳೂರು ನಗರದ ಮಲ್ಲೇಗೌಡ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಬಲಗಾಲಿಗೆ ಗಾಯವಾಗಿದ್ದು ಸೂಕ್ತ ಚಿಕಿತ್ಸೆಗೆ ದಾಖಲಿಸಿದ್ದು ಬೆಳಗಿನ ಜಾವ ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ. ಆರೋಪಿ ಕುಂಟುತ್ತಾ ನಡೆಯುತ್ತಿದ್ದು ಈತನು ಕಂಡುಬಂದಲ್ಲಿ ಅಥವಾ ಈತನ ಇರುವಿಕೆ ಬಗ್ಗೆ ಸುಳಿವು ಸಿಕ್ಕಲ್ಲಿ ಕೂಡಲೇ

ಚಿಕ್ಕಮಗಳೂರು: ಆಸ್ಪತ್ರೆಗೆ ದಾಖಲಾಗಿದ್ದ ಆರೋಪಿ ಪರಾರಿ Read More »

ಲೈವ್ ಕಾರ್ಯಕ್ರಮದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಕೃಷಿತಜ್ಞ

ಸಮಗ್ರ ನ್ಯೂಸ್: ದೂರದರ್ಶನದ ಸ್ಟುಡಿಯೋದಲ್ಲಿ ನೇರ ಕಾರ್ಯಕ್ರಮದ ಸಮಯದಲ್ಲಿ, ಕೃಷಿ ತಜ್ಞರು ಇದ್ದಕ್ಕಿದ್ದಂತೆ ಪ್ರಜ್ಞಾಹೀನರಾದರು. ಬಳಿಕ ಅವರು ನಿಧನರಾಗಿದ್ದಾರೆ. ಪೊಲೀಸರ ಕಡೆಯಿಂದ ಈ ಮಾಹಿತಿ ಹೊರಬಿದ್ದಿದೆ. ಚಾನೆಲ್ ಮೂಲಗಳಿಂದಲೂ ಈ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಕೇರಳ ಕೃಷಿ ವಿಶ್ವವಿದ್ಯಾಲಯದ ನಿರ್ದೇಶಕರಾಗಿದ್ದ 59 ವರ್ಷದ ಡಾ.ಎಸ್. ವಾಹಿನಿಯಲ್ಲಿ ಕಾರ್ಯಕ್ರಮವೊಂದರ ನೇರ ಪ್ರಸಾರದ ವೇಳೆ ದಾಸ್ ಪ್ರಜ್ಞೆ ತಪ್ಪಿದ್ದಾರೆ. ದೂರದರ್ಶನದ ಕೃಷಿ ದರ್ಶನ ಕಾರ್ಯಕ್ರಮದಲ್ಲಿ ಸಂಜೆ 6.30ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಚಾನೆಲ್ ಮೂಲಗಳು ತಿಳಿಸಿವೆ. ಪ್ರಜ್ಞಾಹೀನರಾದ

ಲೈವ್ ಕಾರ್ಯಕ್ರಮದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಕೃಷಿತಜ್ಞ Read More »

ಸ್ಮಾರ್ಟ್‌ಫೋನ್‌ಗಳ ಮೇಲಿನ ಕೊಡುಗೆಗಳು! ಇಲ್ಲಿದೆ ನೋಡಿ ಸೂಪರ್ ಫೀಚರ್ಸ್ ಗಳು

ಸಮಗ್ರ ನ್ಯೂಸ್: ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ (ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್) ಜನವರಿ 13 ರಿಂದ ಪ್ರಾರಂಭವಾಗುತ್ತದೆ ಮತ್ತು ಜನವರಿ 17 ರಂದು ಕೊನೆಗೊಳ್ಳುತ್ತದೆ. ಆದರೆ ಈ ಮಾರಾಟದ ಸಮಯದಲ್ಲಿ ಸ್ಮಾರ್ಟ್‌ಫೋನ್‌ಗಳ ಮೇಲೆ ಅನೇಕ ಇತರ ವಸ್ತುಗಳ ಮೇಲೆ ರಿಯಾಯಿತಿಗಳನ್ನು ನೀಡಲಾಗುವುದು. ಹೊಸ ಸ್ಮಾರ್ಟ್‌ಫೋನ್ ಖರೀದಿಸಲು ಯೋಚಿಸುವವರಿಗೆ ಇದು ಉತ್ತಮ ಸಮಯ. Amazon Great Republic Day Sale Redmi Note 13 5G, Vivo Y56, Itel s23+, Realme Narzo

ಸ್ಮಾರ್ಟ್‌ಫೋನ್‌ಗಳ ಮೇಲಿನ ಕೊಡುಗೆಗಳು! ಇಲ್ಲಿದೆ ನೋಡಿ ಸೂಪರ್ ಫೀಚರ್ಸ್ ಗಳು Read More »

ಕ್ರೀಡಾಕೂಟಕ್ಕೆ ಆಗಮಿಸಿದ್ದ ಪಶುವೈದ್ಯ ಕ್ರೀಡಾಂಗಣದಲ್ಲೇ ಕುಸಿದು ಬಿದ್ದು ಮೃತ್ಯು

ಸಮಗ್ರ ನ್ಯೂಸ್: ಪಶುವೈದ್ಯ ಇಲಾಖೆಯ ವಿಭಾಗ ಮಟ್ಟದ ಕ್ರಿಕೆಟ್ ಕ್ರೀಡಾಕೂಟಕ್ಕೆ ಆಗಮಿಸಿದ್ದ ಪಶುವೈದ್ಯ ಕ್ರೀಡಾಂಗಣದಲ್ಲೇ ಕುಸಿದು ಬಿದ್ದು ಮೃತಪಟ್ಟ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಕೊಡಗು ಜಿಲ್ಲೆಯ ಸೋಮವಾರಪೇಟೆಯ ಪಶುವೈದ್ಯರಾದ ಶಿವಪ್ಪ ಬಾದಾಮಿ (56) ಅವರು ಚಿಕ್ಕಮಗಳೂರು ನಗರದ ಸುಭಾಷ್ ಚಂದ್ರ ಬೋಸ್ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಲು ಆಗಮಿಸಿದ್ದರು. ಕ್ರಿಕೆಟ್ ಆಡಿ ನಂತರ ಕ್ರೀಡಾಂಗಣದಲ್ಲಿ ಕುಳಿತು ಕ್ರಿಕೆಟ್ ನೋಡುತ್ತಿದ್ದವರು ಅಲ್ಲಿಯೇ ಕುಸಿದು ಬಿದ್ದಿದ್ದಾರೆ. ಸ್ಥಳದಲ್ಲಿದ್ದ ಇತರೆ ವೈದ್ಯರು ಚಿಕಿತ್ಸೆಗೆ ಮುಂದಾದರೂ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಬಾದಾಮಿ

ಕ್ರೀಡಾಕೂಟಕ್ಕೆ ಆಗಮಿಸಿದ್ದ ಪಶುವೈದ್ಯ ಕ್ರೀಡಾಂಗಣದಲ್ಲೇ ಕುಸಿದು ಬಿದ್ದು ಮೃತ್ಯು Read More »

ದಳಪತಿಗಳಿಗೆ ಜಾಕ್ ಪಾಟ್| ಜ.17ರಂದು ಮಾಜಿ ಸಿಎಂ ಕುಮಾರಸ್ವಾಮಿ ಕೇಂದ್ರ ಸಚಿವರಾಗಿ ಪ್ರಮಾಣವಚನ?

ಸಮಗ್ರ ನ್ಯೂಸ್: ಲೋಕಸಭಾ ಚುನಾವಣೆ ಹಿನ್ನೆಲೆ ಬಿಜೆಪಿ ಹಾಗೂ ಜೆಡಿಎಸ್​ ನಡುವೆ ಮೈತ್ರಿ ಏರ್ಪಟ್ಟಿದೆ. ಇದರ ಫಲವಾಗಿ ದಳಪತಿಗೆ ದೊಡ್ಡ ಜಾಕ್​ಪಾಟ್ ಹೊಡೆದಿದೆ. ಜೆಡಿಎಸ್​ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟಕ್ಕೆ ಸೇರುವ ಸಾಧ್ಯತೆ ದಟ್ಟವಾಗಿದೆ. ಇದೇ ಜನವರಿ 17ರಂದು ಕೇಂದ್ರ ಸಚಿವರಾಗಿ ಕುಮಾರಸ್ವಾಮಿ ಪದಗ್ರಹಣ ಮಾಡಲಿದ್ದಾರೆ ಎಂದು ವರದಿಯಾಗಿದೆ. ಕೃಷಿ ಖಾತೆ ಅಥವಾ ಜಲಸಂಪನ್ಮೂಲ ಖಾತೆ ನೀಡಲು ಬಿಜೆಪಿ ಹೈಕಮಾಂಡ್

ದಳಪತಿಗಳಿಗೆ ಜಾಕ್ ಪಾಟ್| ಜ.17ರಂದು ಮಾಜಿ ಸಿಎಂ ಕುಮಾರಸ್ವಾಮಿ ಕೇಂದ್ರ ಸಚಿವರಾಗಿ ಪ್ರಮಾಣವಚನ? Read More »

ಹೈಟೆಕ್ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ| 6 ಕ್ಕೂ‌ ಹೆಚ್ಚು ಮಂದಿ ಬಂಧನ

ಸಮಗ್ರ ನ್ಯೂಸ್: ವೇಶ್ಯಾವಾಟಿಕೆ ನಡೆಸುತ್ತಿದ್ದ ಹೊಸಪೇಟೆಯ ಲಾಡ್ಜ್ ಮೇಲೆ ದಾಳಿ ನಡೆದಿದ್ದು, ನಾಲ್ವರು ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ. ವಿಜಯನಗರದ ಹೊಸಪೇಟೆಯ ರಾಣಿಪೇಟ್‍ನಲ್ಲಿ ಒಡನಾಡಿ ಸಂಸ್ಥೆ ಮತ್ತು ಹೊಸಪೇಟೆ ಪಟ್ಟಣ ಪೊಲೀಸರಿಂದ ಜಂಟಿ ದಾಳಿ ನಡೆದಿದೆ. ಲಾಡ್ಜ್ ನ ನೆಲಮಹಡಿಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿತ್ತು. ಈ ಬಗ್ಗೆ ಮಾಹಿತಿ ಲಭ್ಯವಾದ ಹಿನ್ನೆಲೆ ಪೊಲೀಸರ ತಂಡ ಲಾಡ್ಜ್ ಮೇಲೆ ದಾಳಿ ಮಾಡಿದೆ. ಈ ವೇಳೆ ಲಾಡ್ಜ್ ನಲ್ಲಿದ್ದ 6ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆಯಲಾಯಿತು. ಬಳಿಕ ದಂಧೆಯಲ್ಲಿ ತೊಡಗಿದ ಸಂತ್ರಸ್ತ ಮಹಿಳೆಯರ

ಹೈಟೆಕ್ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ| 6 ಕ್ಕೂ‌ ಹೆಚ್ಚು ಮಂದಿ ಬಂಧನ Read More »