ಕೊಡಗು:ಬಿಜೆಪಿಗೆ ನೂತನ ಸಾರಥಿ
ಸಮಗ್ರ ನ್ಯೂಸ್: ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ನಾಪಂಡ ರವಿ ಕಾಳಪ್ಪನವರನ್ನು ರಾಜ್ಯ ಘಟಕ ನೇಮಕ ಗೊಳಿಸಿದೆ. ರಾಜ್ಯ ಜೀವ ವೈವಿಧ್ಯ ಮಂಡಳಿ ಮಾಜಿ ಅಧ್ಯಕ್ಷರಾಗಿದ್ದ ರವಿ ಕಾಳಪ್ಪನವರ ಹೆಸರು ರಾಜ್ಯ ಬಿಜೆಪಿ ಜ. 14ರಂದು ಬಿಡುಗಡೆ ಗೊಳಿಸಲಾದ ಅಧ್ಯಕ್ಷರ ಪಟ್ಟಿಯಲ್ಲಿ ನಮೂದಿಸಲಾಗಿದೆ. ಮಡಿಕೇರಿ ತಾಲೂಕು ಮಕ್ಕಂದೂರು ಗ್ರಾಮದ ರವಿ ಕಾಳಪ್ಪ. ಪಕ್ಷದಲ್ಲಿ ಈ ಹಿಂದೆ ಹಲವಾರು ಜವಾಬ್ದಾರಿಗಳನ್ನು ನಿರ್ವಹಿಸಿದ ಅನುಭವ ಇದ್ದು ಸರಳ ವ್ಯಕ್ತಿತ್ವ ಹೊಂದಿದ್ದಾರೆ.
ಕೊಡಗು:ಬಿಜೆಪಿಗೆ ನೂತನ ಸಾರಥಿ Read More »