January 2024

ಸುಳ್ಯ: ಮೊಗ್ರ ಜಾತ್ರೆಗೆ ಗೊನೆ ಮುಹೂರ್ತ

ಸಮಗ್ರ ನ್ಯೂಸ್: ಸುಳ್ಯ ತಾಲೂಕಿನ ಮೊಗ್ರ ಶ್ರೀ ಕನ್ನಡ ದೇವತೆ ಯಾನೆ ಪುರುಷ ದೈವಸ್ಥಾನದಲ್ಲಿ ಜ. 19 ರಿಂದ 23ರವರೆಗೆ ನಡೆಯುವ ಕಾಲಾವಧಿ ಜಾತ್ರಾ ಉತ್ಸವಕ್ಕೆ ಗೊನೆ ಮುಹೂರ್ತ ನಡೆಯಿತು. ದೈವಸ್ಥಾನದ ಆಡಳಿತ ಮೊಕ್ತೇಸರ ಎಮ್.ಎನ್ ವೆಂಕಟ್ರಮಣ ಮೊಗ್ರ, ಮೊಕ್ತೇಸರ ಕಾರ್ಯಪ್ಪ ಗೌಡ ಚಿಕ್ಮುಳಿ, ಕಾರ್ಯನಿರ್ವಹಣಾ ಮೊಕ್ತೇಸರ ಚೆನ್ನಕೇಶವ ಗೌಡ ಕಮಿಲ, ಉಮೇಶ ಗೌಡ ಮಕ್ಕಿ , ಹೆಬ್ಬಾರರಾದ ಕೇಶವ ಗೌಡ ಬಳ್ಳಕ್ಕ,ಪೂಜಾರಿ ವರ್ಗ, ಸೇವಕರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಸುಳ್ಯ: ಮೊಗ್ರ ಜಾತ್ರೆಗೆ ಗೊನೆ ಮುಹೂರ್ತ Read More »

ಪುತ್ತೂರು: ಅಕ್ಷತೆ ಹಂಚುತ್ತಿದ್ದ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿದ್ರಾ‌ ಪುತ್ತಿಲ ಪರಿವಾರ? ನಿಜಕ್ಕೂ ಅಲ್ಲಿ ಆಗಿದ್ದೇನು? ಎಸ್ಪಿ ರಿಷ್ಯಂತ್ ನೀಡಿದ ಎಚ್ಚರಿಕೆ ಏನು?

ಸಮಗ್ರ ನ್ಯೂಸ್: ಜನವರಿ 22 ರಂದು ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆ ಹಿನ್ನಲೆ ರಾಮಮಂದಿರದ ಅಕ್ಷತೆ ವಿತರಣೆ ಮಾಡುತ್ತಿದ್ದ ಹಿಂದೂ ಸಂಘಟನೆಯ ಕಾರ್ಯಕರ್ತನ ಮೇಲೆ ಪುತ್ತಿಲ ಪರಿವಾರದ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದ್ದು, ಈ ಕುರಿತು ದ.ಕ ಜಿಲ್ಲಾ ಎಸ್.ಪಿ ರಿಷ್ಯಂತ್ ಸಿ.ಬಿ ಸ್ಪಷ್ಟನೆ ನೀಡಿದ್ದಾರೆ. ಘಟನೆ ಪುತ್ತೂರಿನ ಮುಂಡೂರು ಎಂಬಲ್ಲಿ ನಡೆದಿದ್ದು, ಸಂತೋಷ್ ಎಂಬಾತ ಹಲ್ಲೆಗೊಳಗಾದ ಹಿಂದೂ ಸಂಘಟನೆಯ ಕಾರ್ಯಕರ್ತ. ಈತ ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಂತೋಷ್ ಮುಂಡೂರು ಗ್ರಾಮದಲ್ಲಿ ರಾಮಮಂದಿರದ ಅಕ್ಷತೆ ಹಂಚುವ

ಪುತ್ತೂರು: ಅಕ್ಷತೆ ಹಂಚುತ್ತಿದ್ದ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿದ್ರಾ‌ ಪುತ್ತಿಲ ಪರಿವಾರ? ನಿಜಕ್ಕೂ ಅಲ್ಲಿ ಆಗಿದ್ದೇನು? ಎಸ್ಪಿ ರಿಷ್ಯಂತ್ ನೀಡಿದ ಎಚ್ಚರಿಕೆ ಏನು? Read More »

ಘಾಟಿ ಸುಬ್ರಹ್ಮಣ್ಯದಲ್ಲಿ ತಪ್ಪಿದ ಅನಾಹುತ| ರಥದ ಚಕ್ರದ ಬಳಿ ಬಿದ್ದ ಮಹಿಳೆ

ಸಮಗ್ರ ನ್ಯೂಸ್: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಹ್ಮಣ್ಯದಲ್ಲಿ ಇಂದು ಬ್ರಹ್ಮ ರಥೋತ್ಸವ ನಡೆದಿದ್ದು ಬ್ರಹ್ಮ ರಥೋತ್ಸವದ ವೇಳೆ ಭಾರಿ ಅನಾಹುತವೊಂದು ತಪ್ಪಿದೆ. ರಥ ಎಳೆಯುವಾಗ ನೂಕುನುಗ್ಗಲು ಉಂಟಾಗಿ ಚಕ್ರದ ಬಳಿ ಮಹಿಳೆ ಬಿದ್ದಿದ್ದರು. ಕೂಡಲೇ ಎಚ್ಚೆತ್ತ ಪೊಲೀಸರು ಮತ್ತು ದೇವಸ್ಥಾನದ ಸಿಬ್ಬಂದಿ ಮಹಿಳೆಯನ್ನು ಮೇಲಕ್ಕೆ ಎತ್ತಿದ್ದಾರೆ. ಬಳಿಕ ಮಹಿಳೆಯನ್ನು ಪಕ್ಕಕ್ಕೆ ಸರಿಸಿದ್ದಾರೆ. ಕೂದಲೆಳೆ ಅಂತರದಲ್ಲಿ ಮಹಿಳೆ ಅಪಾಯದಿಂದ ಪಾರಾಗಿದ್ದಾರೆ. ಪುಷ್ಯ ಶುದ್ದ ಷಷ್ಟಿ ಹಿನ್ನೆಲೆಯಲ್ಲಿ ಇಂದು ಘಾಟಿ ಸುಬ್ರಮಣ್ಯದಲ್ಲಿ ಬ್ರಹ್ಮ ರಥೋತ್ಸವ ನಡೆಯಿತು.

ಘಾಟಿ ಸುಬ್ರಹ್ಮಣ್ಯದಲ್ಲಿ ತಪ್ಪಿದ ಅನಾಹುತ| ರಥದ ಚಕ್ರದ ಬಳಿ ಬಿದ್ದ ಮಹಿಳೆ Read More »

ಬೆಂಗಳೂರಿನ ಯುವಕ ಮಡಿಕೇರಿ ಲಾಡ್ಜ್ ನಲ್ಲಿ ನೇಣಿಗೆ ಶರಣು

ಸಮಗ್ರ ನ್ಯೂಸ್: ಮಡಿಕೇರಿ ನಗರದ ಲಾಡ್ಜ್ ಒಂದರಲ್ಲಿ ಮೈಸೂರು ಮೂಲದ ಸಂದೇಶ್(35) ಸಾವಿಗೆ ಶರಣಾಗಿದ್ದಾನೆ. ಬೆಂಗಳೂರಿನಲ್ಲಿ ಐಟಿ ಉದ್ಯೋಗಿಯಾಗಿದ್ದ ಸಂದೇಶ್ ಕಳೆದ 3ದಿನಗಳ ಹಿಂದೆ ಮಡಿಕೇರಿಗೆ ಬಂದಿದ್ದು ಇಲ್ಲಿನ ಕೊಹಿನೂರ್ ರಸ್ತೆಯಲ್ಲಿರುವ ಲಾಡ್ಜ್ ನಲ್ಲಿ ಬೆಳಗೆ ನೇಣು ಬಿಗಿದುಕೊಂಡು ಸಾವನಪ್ಪಿದ್ದಾನೆ.ಈ ಬಗ್ಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಬೆಂಗಳೂರಿನ ಯುವಕ ಮಡಿಕೇರಿ ಲಾಡ್ಜ್ ನಲ್ಲಿ ನೇಣಿಗೆ ಶರಣು Read More »

ಧರ್ಮಸ್ಥಳ: ನೈತಿಕ ಪೊಲೀಸ್ ಗಿರಿ| ಭಿನ್ನಕೋಮಿನ ಜೋಡಿಯನ್ನು ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು

ಸಮಗ್ರ ನ್ಯೂಸ್ : ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿಯ ಘಟನೆ ಮರುಕಳಿಸಿದೆ. ಕ್ಷೇತ್ರಕ್ಕೆ ಮುಸ್ಲಿಂ ಯುವಕನ ಜೊತೆ ಬಂದಿದ್ದ ಹಿಂದೂ ಯುವತಿಯ ಜೋಡಿಯನ್ನು ಸಾರ್ವಜನಿಕರು ಹಿಡಿದು ವಿಚಾರಿಸಿ ಬಳಿಕ ಪೋಲಿಸರಿಗೆ ಒಪ್ಪಿಸಿದ್ದಾರೆ. ಬೆಂಗಳೂರು ಮೂಲದ ಈ ಜೋಡಿ ಧರ್ಮಸ್ಥಳದಲ್ಲಿ ತಿರುಗಾಡುತ್ತಿದ್ದಾಗ ಸಂಶಯಗೊಂಡ ಸಾರ್ವಜನಿಕರು ಹಿಡಿದು ವಿಚಾರಿಸಿದ್ದಾರೆ. ಆಗ ಯುವಕ ಮುಸ್ಲಿಂ ಧರ್ಮದವನಾಗಿದ್ದು ಯುವತಿ ಹಿಂದೂ ಎಂದು ಗೊತ್ತಾಗಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಸ್ಥಳಕ್ಕೆಧಾವಿಸಿ ಬಂದ ಪೊಲೀಸರು ಯುವಕ ಯುವತಿಯನ್ನು ವಶಕ್ಕೆ

ಧರ್ಮಸ್ಥಳ: ನೈತಿಕ ಪೊಲೀಸ್ ಗಿರಿ| ಭಿನ್ನಕೋಮಿನ ಜೋಡಿಯನ್ನು ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು Read More »

ಮಡಿಕೇರಿ:ನೆಲಜಿ ಮತ್ತು ಕುಂಚಿಲ ಗ್ರಾಮದ ತೋಟದಲ್ಲಿ ಕಾಣಿಸಿಕೊಂಡ ಹುಲಿ

ಸಮಗ್ರ ನ್ಯೂಸ್:ಮಡಿಕೇರಿ ತಾಲೂಕಿನ ನೆಲಜಿ ಮತ್ತು ಕುಂಜಿಲ ಗ್ರಾಮದ ಗಡಿಯಲ್ಲಿರುವ ಅಚ್ಚಾಂಡಿರ ಹಾಗೂ ಕಲಿಯಾಟಂಡ ತೋಟದ ಮಧ್ಯೆ ಬರುವ ಕೊಲ್ಲಿಯ ಬಳಿ ಇಂದು ಬೆಳಿಗ್ಗೆ(ಜ.16) ಕಾಣಿಸಿಕೊಂಡ ಬೃಹತ್ ಗಾತ್ರದ ಹೆಬ್ಬುಲಿ. ಕಾಡು ಕುರಿಯನ್ನು ಅಟ್ಟಿಸಿಕೊಂಡು ಹೋಗುತ್ತಾ ತೋಟದ ಕಾರ್ಮಿಕರಿಗೆ ದರ್ಶನವಿತ್ತ ಹುಲಿರಾಯ. ಈ ಎರಡೂ ಗ್ರಾಮಗಳ ಜನ ಎಚ್ಚರಿಕೆಯಲ್ಲಿರುವಂತೆ ಸ್ಥಳೀಯರೊಬ್ಬರು ಕೋರಿಕೊಂಡಿದ್ದಾರೆ.

ಮಡಿಕೇರಿ:ನೆಲಜಿ ಮತ್ತು ಕುಂಚಿಲ ಗ್ರಾಮದ ತೋಟದಲ್ಲಿ ಕಾಣಿಸಿಕೊಂಡ ಹುಲಿ Read More »

ಬೆಂಗಳೂರಿನಲ್ಲಿ ಹೆಚ್ಚುತ್ತಿದೆ ನಕಲಿ ವೈದ್ಯರ ಹಾವಳಿ|ಯೂಟ್ಯೂಬ್ ನೋಡಿ ಮೆಡಿಕಲ್ ಶಾಪ್​ನಲ್ಲಿ ಚಿಕಿತ್ಸೆ

ಸಮಗ್ರ ನ್ಯೂಸ್: ಸಿಲಿಕಾನ್ ಸಿಟಿನಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದೆ. ಎಂಬಿಬಿಎಸ್ ಮಾಡಿಲ್ಲ ಅಂದ್ರೂ ವೈದ್ಯರೆಂದು ಹೇಳಿಕೊಂಡು ಜನರ ಜೀವನದ ಜೊತೆ ಆಟ ಆಡುತ್ತಿದ್ದಾರೆ. ಈ ಹಿಂದೆ ಸರ್ಕಾರ ನಕಲಿ ವೈದ್ಯರಿಗೆ ಕಡಿವಾಣ ಹಾಕಲು ಅನೇಕ ಕ್ರಮಗಳನ್ನು ಕೈಗೊಂಡಿತ್ತು. ಆದರೂ ನಗರದಲ್ಲಿ ನಕಲಿ ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡಿ ಹಣ ಸಂಪಾದಿಸುತ್ತಿದ್ದಾರೆ. ಸದ್ಯ ಇದೀಗ ಬೆಂಗಳೂರಿನಲ್ಲಿ ನಕಲಿ ವೈದ್ಯನೊಬ್ಬ ಸಿಕ್ಕಿಬಿದ್ದಿದ್ದಾನೆ. ಮೆಡಿಕಲ್ ಶಾಪ್ ಇಟ್ಟುಕೊಂಡಿದ್ದ ವ್ಯಕ್ತಿಯೋರ್ವ ತಾನೊಬ್ಬ ವೈದ್ಯ ಎಂದು ಹೇಳಿಕೊಂಡು ಯೂಟ್ಯೂಬ್ ನೋಡಿ ಚಿಕಿತ್ಸೆ ನೀಡಿರುವ

ಬೆಂಗಳೂರಿನಲ್ಲಿ ಹೆಚ್ಚುತ್ತಿದೆ ನಕಲಿ ವೈದ್ಯರ ಹಾವಳಿ|ಯೂಟ್ಯೂಬ್ ನೋಡಿ ಮೆಡಿಕಲ್ ಶಾಪ್​ನಲ್ಲಿ ಚಿಕಿತ್ಸೆ Read More »

ನಿಮ್ಹಾನ್ಸ್​ನಲ್ಲಿ ಉದ್ಯೋಗವಿದೆ, ಬೇಗ ಅರ್ಜಿ ಸಲ್ಲಿಸಿ!

ಸಮಗ್ರ ಉದ್ಯೋಗ: ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ- ಬೆಂಗಳೂರು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 4 ಪ್ರಾಜೆಕ್ಟ್ ಆಫೀಸರ್​ ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಜನವರಿ 17, 2024 ಅಂದರೆ ನಾಳೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಹುದ್ದೆಯ ಮಾಹಿತಿ:ಪ್ರಾಜೆಕ್ಟ್ ಆಫೀಸರ್​ – ಚೈಲ್ಡ್​ ಪ್ರೊಟೆಕ್ಷನ್ ಥೀಮ್- 2ಪ್ರಾಜೆಕ್ಟ್ ಆಫೀಸರ್​ – ಮೆಂಟಲ್ ಹೆಲ್ತ್​ ಥೀಮ್- 2

ನಿಮ್ಹಾನ್ಸ್​ನಲ್ಲಿ ಉದ್ಯೋಗವಿದೆ, ಬೇಗ ಅರ್ಜಿ ಸಲ್ಲಿಸಿ! Read More »

ಬೆಳ್ತಂಗಡಿ: ಕಾಲುಜಾರಿ ಬಾವಿಗೆ ಬಿದ್ದು ಬಾಲಕ ಸಾವು

ಸಮಗ್ರ ನ್ಯೂಸ್: ಮಕ್ಕಳ ಜೊತೆ ಆಟವಾಡುತ್ತಿರುವ ವೇಳೆ ತೆರೆದ ಬಾವಿಗೆ ಕಾಲು ಜಾರಿ ಬಿದ್ದು 7 ವರ್ಷದ ಬಾಲಕ ಸಾವನಪ್ಪಿರುವ ಘಟನೆ ಬೆಳ್ತಂಗಡಿಯ ಸೋಣಂದೂರು ಗ್ರಾಮದ ಪಣಕಜೆ ಎಂಬಲ್ಲಿ ನಡೆದಿದೆ. ಮೃತ ಬಾಲಕ ಪಣಕಜೆ ನಿವಾಸಿ ಮಹಮ್ಮದ ಹನೀಫ್ ಅವರ ಪುತ್ರ ಮಹಮ್ಮದ್ ಅನಾನ್(7) ಜ. 15ರಂದು ಶಾಲೆಗೆ ರಜೆ ಇದ್ದ ಕಾರಣ ಪಕ್ಕದ ಮನೆಯ ಮಕ್ಕಳ ಜೊತೆ ಆಟವಾಡುತ್ತಿದ್ದಾಗ ಈ ಘಟನೆ ನಡೆದಿದೆ. ಕಟ್ಟೆ ಇಲ್ಲದ ಬಾವಿಯ ಬಳಿ ಮಕ್ಕಳು ಆಟವಾಡುತ್ತಿದ್ದಾಗ ಬಾಲಕ ಅನಾನ್ ಆಕಸ್ಮಿಕವಾಗಿ

ಬೆಳ್ತಂಗಡಿ: ಕಾಲುಜಾರಿ ಬಾವಿಗೆ ಬಿದ್ದು ಬಾಲಕ ಸಾವು Read More »

ಕೊಡಗು: ಜೀವಿತ ಚಿಂತನ್ ಅವರು ರಾಜ್ಯ ಮಟ್ಟದ ಯುವ ಪ್ರಶಸ್ತಿಗೆ ಆಯ್ಕೆ

ಸಮಗ್ರ ನ್ಯೂಸ್: ಕೊಡಗು ಜಿಲ್ಲೆಯ ಮೂಲತಃ ತಾಳತ್ ಮನೆ ನಿವಾಸಿ ಮಡಿಕೇರಿ ನೆಲಕ್ಕಿ ಯುವತಿ ಮಂಡಳಿಯ ಸದಸ್ಯೆ ಜೀವಿತ ಚಿಂತನ್ ಬಹುಮುಖ ಪ್ರತಿಭೆಯ ಕಲಾವಿದೆ ಇದೀಗ ರಾಜ್ಯ ಮಟ್ಟದ ಯುವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ವತಿಯಿಂದ ನೀಡುವ 15 ರಿಂದ 29 ವರ್ಷ ವಯೋಮಿತಿಯವರಿಗೆ ನೀಡುವ ವೈಯಕ್ತಿಕ ರಾಜ್ಯ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ. ಜ. 20ರಂದು ಸುಬ್ರಮಣ್ಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪಡೆಯಲಿದ್ದಾರೆ. ಅವರು ಮಾಜಿ ಸೈನಿಕಸುಳ್ಯದ ಕೊಡಿ ಜಿ. ನಾಣಯ್ಯ

ಕೊಡಗು: ಜೀವಿತ ಚಿಂತನ್ ಅವರು ರಾಜ್ಯ ಮಟ್ಟದ ಯುವ ಪ್ರಶಸ್ತಿಗೆ ಆಯ್ಕೆ Read More »