January 2024

ಮಧ್ಯರಾತ್ರಿ ದರ್ಶನ್, ಸ್ನೇಹಿತರು ಜೆಟ್​ಲ್ಯಾಗ್ ಪಬ್​ನಲ್ಲಿ ಪಾರ್ಟಿ ಪ್ರಕರಣ| ಜೆಟ್​ಲ್ಯಾಗ್ ಪರವಾನಗಿ ರದ್ದು

ಸಮಗ್ರ ನ್ಯೂಸ್: ಇತ್ತೀಚೆಗೆ ತಡರಾತ್ರಿವರೆಗೆ ಬೆಂಗಳೂರಿನ ಜೆಟ್​ಲ್ಯಾಗ್ ಪಬ್​ನಲ್ಲಿ ಕಾಟೇರ ಸಕ್ಸಸ್ ಪಾರ್ಟಿ ಮಾಡಿರುವ ಬಗ್ಗೆ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸಿನಿಮಾ ತಾರೆಯರು ನಿಯಮ ಮೀರಿ ಪಾರ್ಟಿ ಮಾಡಿದ್ದಾರೆಂದು ದೊಡ್ಡ ಸುದ್ದಿಯೇ ಆಗಿತ್ತು. ದರ್ಶನ್ ಹಾಗೂ ಇತರರಿಗೆ ನೊಟೀಸ್ ನೀಡಿ ವಿಚಾರಣೆಗೆ ಕರೆಸಿ ಹೇಳಿಕೆ ದಾಖಲಿಸಿಕೊಳ್ಳಲಾಗಿತ್ತು. ಇದೀಗ ದರ್ಶನ್ ಹಾಗೂ ಇತರರು ಅವಧಿ ಮೀರಿ ಪಾರ್ಟಿ ಮಾಡಲು ಅವಕಾಶ ಕೊಟ್ಟಿದ್ದ ಜೆಟ್​​ಲ್ಯಾಗ್​ ಪಬ್​ನ ಪರವಾನಗಿಯನ್ನು(ಲೈಸೆನ್ಸ್) 25 ದಿನಗಳ ಕಾಲ ರದ್ದು ಮಾಡಿ ಆದೇಶಿಸಲಾಗಿದೆ. ದರ್ಶನ್, ಡಾಲಿ […]

ಮಧ್ಯರಾತ್ರಿ ದರ್ಶನ್, ಸ್ನೇಹಿತರು ಜೆಟ್​ಲ್ಯಾಗ್ ಪಬ್​ನಲ್ಲಿ ಪಾರ್ಟಿ ಪ್ರಕರಣ| ಜೆಟ್​ಲ್ಯಾಗ್ ಪರವಾನಗಿ ರದ್ದು Read More »

ಸುಳ್ಯ: ಎರಡನೇ ರಾಜ್ಯ ಮಟ್ಟದ ಆಹ್ವಾನಿತ ಕರಾಟೆ ಚಾಂಪಿಯನ್‌ ಶಿಪ್ ನಲ್ಲಿ ದಿಯಾ ಡಿ.ಎಸ್. ಪ್ರಥಮ

ಸಮಗ್ರ ನ್ಯೂಸ್: ಯಾಮೊಟೋ ಶೋಟೋಕಾನ್ ಕರಾಟೆ ಅಸೋಸಿಯನ್ನ್ ಟ್ರಸ್ಟ್ ಮಂಗಳೂರು ಹಾಗೂ ರೋಟರಿ ಕ್ಲಬ್ ಲೊರೊಟೊ ಹಿಲ್ಸ್ ಬಂಟ್ವಾಳ, ರೋಟರಿ ಕ್ಲಬ್ ಸಿದ್ದಕಟ್ಟೆ, ಪಲ್ಗುಣಿ ರೋಟರಿ ಕ್ಲಬ್, ಬಿ.ಸಿ ರೋಡು ಸಿಟಿ ವತಿಯಿಂದ ಬಿ.ಸಿ ರೋಡ್ ಸ್ಪರ್ಶ ಕಲಾಮಂದಿರದಲ್ಲಿ ಜ. 14ರಂದು ನಡೆದ ಎರಡನೇ ರಾಜ್ಯ ಮಟ್ಟದ ಆಹ್ವಾನಿತ ಕರಾಟೆ ಚಾಂಪಿಯನ್‌ ಶಿಪ್ 2024ರ ಕಟಾ ಮತ್ತು ಕುಮಿಟೆ ವಿಭಾಗದಲ್ಲಿ ದಿಯಾ ಡಿ.ಎಸ್. ಪ್ರಥಮ ಸ್ಥಾನ‌ ಪಡೆದಿದ್ದಾರೆ. ವೆಸ್ಟರ್ನ್ ಇನ್ಸ್ಟಿಟ್ಯೂಟ್ ಆಪ್ ಮಾರ್ಷಲ್ ಆಟ್ಸ್ ವತಿಯಿಂದ ಮಂಗಳೂರಿನ

ಸುಳ್ಯ: ಎರಡನೇ ರಾಜ್ಯ ಮಟ್ಟದ ಆಹ್ವಾನಿತ ಕರಾಟೆ ಚಾಂಪಿಯನ್‌ ಶಿಪ್ ನಲ್ಲಿ ದಿಯಾ ಡಿ.ಎಸ್. ಪ್ರಥಮ Read More »

ಕೋಚಿಂಗ್ ಸೆಂಟರ್‍ಗಳ ನೋಂದಣಿ ಕಡ್ಡಾಯ/ ರಾಜ್ಯ ಸರ್ಕಾರದ ಆದೇಶ

ಸಮಗ್ರ ನ್ಯೂಸ್: ನಾಗರಿಕ ಸೇವಾ ಪರೀಕ್ಷೆಗಳಿಗೆ ಕೋಚಿಂಗ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಕೋಚಿಂಗ್ ಸೆಂಟರ್‍ಗಳಿಗೆ ಉನ್ನತ ಶಿಕ್ಷಣ ಇಲಾಖೆಯಲ್ಲಿ ನೋಂದಣಿ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕೋಚಿಂಗ್ ಸೆಂಟರ್‍ಗಳ ನೋಂದಣಿ ದೇಶದಲ್ಲಿ ಕಡ್ಡಾಯವಾಗಿರಬೇಕು. ರಾಜ್ಯದಲ್ಲಿ ಸಾಕಷ್ಟು ಕೋಚಿಂಗ್ ಸೆಂಟರ್‍ಗಳಿವೆ. ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವುದಾಗಿ ಹೇಳಿ ಅವರಿಂದ ಹಣ ವಸೂಲಿ ಮಾಡುತ್ತಾರೆ. ಆದ್ದರಿಂದ, ಕೋಚಿಂಗ್ ಸೆಂಟರ್‍ಗಳನ್ನು ನೋಂದಾಯಿಸಲು ಸರ್ಕಾರ ನಿರ್ಧರಿಸಿದೆ. 15 ದಿನಗಳಲ್ಲಿ 25,000 ಶುಲ್ಕ ಪಾವತಿಸಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನೋಂದಾಯಿಸಿಕೊಳ್ಳುವಂತೆ

ಕೋಚಿಂಗ್ ಸೆಂಟರ್‍ಗಳ ನೋಂದಣಿ ಕಡ್ಡಾಯ/ ರಾಜ್ಯ ಸರ್ಕಾರದ ಆದೇಶ Read More »

ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಬೆಂಗಳೂರಿಗೆ ಭೇಟಿ/ ಅದ್ಧೂರಿ ಸ್ವಾಗತಕ್ಕೆ ಸಜ್ಜಾದ ರಾಜ್ಯ ಬಿಜೆಪಿ

ಸಮಗ್ರ ನ್ಯೂಸ್: ಪ್ರಧಾನಿ ಮೋದಿ ಇದೇ ಶುಕ್ರವಾರ ಬೆಂಗಳೂರಿಗೆ ಭೇಟಿ ನೀಡಲಿದ್ದು ಈ ವೇಳೆ ಮೋದಿ ಸ್ವಾಗತಕ್ಕೆ ಕಾರ್ಯಕರ್ತರಿಗೆ ಅವಕಾಶ ನೀಡಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಉದ್ದೇಶಿಸಿ ಪ್ರಮುಖರ ಜತೆ ಚರ್ಚೆ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಪ್ರಧಾನಿ ಮೋದಿ ಅವರು ಲೋಕಸಭೆ ಚುನಾವಣೆಗೂ ಮುನ್ನ ರೋಡ್ ಶೋ ನಡೆಸುವ ಆಲೋಚನೆ ಇದ್ದು, ಪ್ರಧಾನಿ ಕಾರ್ಯಾಲಯದ ಒಪ್ಪಿಗೆಗಾಗಿ ಕಾಯಲಾಗಿದೆ. ಪ್ರಧಾನಿ ಭೇಟಿಯಿಂದಾಗಿ 19ರಂದು ನಡೆಯಬೇಕಿದ್ದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನು ಮುಂದೂಡಲಾಗಿದೆ ಎಂದು ಬಿಜೆಪಿ ರಾಷ್ಟ್ರೀಯ

ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಬೆಂಗಳೂರಿಗೆ ಭೇಟಿ/ ಅದ್ಧೂರಿ ಸ್ವಾಗತಕ್ಕೆ ಸಜ್ಜಾದ ರಾಜ್ಯ ಬಿಜೆಪಿ Read More »

ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಿ, ಜೀವ ಉಳಿಸಿಕೊಳ್ಳಿ: ಶ್ರೀ ದಿನೇಶ್ ಕುಮಾರ್

ಸಮಗ್ರ ನ್ಯೂಸ್: ನೈಸರ್ಗಿಕ ಕಾರಣಗಳನ್ನು ಹೊರತುಪಡಿಸಿ ರಸ್ತೆ ಅಪಘಾತಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾವು ನೋವುಗಳು ಉಂಟಾಗುತ್ತದೆ. ದೇಶಾದ್ಯಂತ ಲಕ್ಷಾಂತರ ಜನ ರಸ್ತೆ ಅಫಘಾತಗಳಲ್ಲಿ ಸಾವನ್ನಪ್ಪುತ್ತಾರೆ. ಮಂಗಳೂರು ನಗರದಲ್ಲಿ ಪ್ರತೀ ವರ್ಷ ಸುಮಾರು 800 ರಿಂದ 900 ಅಪಘಾತ ಪ್ರಕರಣಗಳು ವರದಿಯಾಗುತ್ತದೆ. 900 ರಿಂದ 1000 ಜನ ನೋವನ್ನು ಅನುಭವಿಸುತ್ತಾರೆ ಮತ್ತು ಮತ್ತು ಹಲವರು ಗಾಯಾಳುಗಳಾಗುತ್ತಾರೆ. ಅದರಲ್ಲಿ 100 ರಿಂದ 125 ರಷ್ಟು ಜನ ಪ್ರಾಣವನ್ನು ಕಳಕೊಳ್ಳುತ್ತಾರೆ. ರಸ್ತೆ ಅಪಘಾತಗಳನ್ನು ಕಡಿಮೆ ಮಾಡಬೇಕನ್ನುವಂತಹ ಕಾರಣದಿಂದ ಮಿನಿಷ್ಟ್ರಿ ಆಫ್ ರೋಡ್

ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಿ, ಜೀವ ಉಳಿಸಿಕೊಳ್ಳಿ: ಶ್ರೀ ದಿನೇಶ್ ಕುಮಾರ್ Read More »

ಖಾಲಿ ಇರುವ ಪೊಲೀಸ್ ಹುದ್ದೆಗಳ ಭರ್ತಿ/ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಖಾಲಿ ಇರುವ ಪೊಲೀಸ್ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮಾವೇಶದಲ್ಲಿ ಹೇಳಿದ್ದಾರೆ. ಖಾಲಿ ಇರುವ ಪೊಲೀಸ್ ಹುದ್ದೆಗಳನ್ನೂ ಭರ್ತಿ ಮಾಡಲಾಗುವುದು ಮತ್ತು ಕರ್ನಾಟಕ ಏಕೀಕರಣದ 50 ವರ್ಷದ ನೆನಪಿಗಾಗಿ ಸುವರ್ಣ ಪೊಲೀಸ್ ಭವನ ಕಟ್ಟಡ ನಿರ್ಮಾಣಕ್ಕೆ ಬಜೆಟ್ ನಲ್ಲಿ ಹಣ ನೀಡಲಾಗುವುದು. ಕಳ್ಳತನ ಹೆಚ್ಚಾಗ್ತಾ ಇದೆ ಎಂದರೆ ಗಸ್ತು ವ್ಯವಸ್ಥೆ, ಹೋಯ್ಸಳ ಸಿಬ್ಬಂದಿ ಮತ್ತು ಠಾಣಾಧಿಕಾರಿಗಳು ವಿಫಲರಾಗಿದ್ದಾರೆ

ಖಾಲಿ ಇರುವ ಪೊಲೀಸ್ ಹುದ್ದೆಗಳ ಭರ್ತಿ/ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ Read More »

ಯಾರೂ ಹೆಣ್ಣು ಕೊಡಲ್ಲ ಎಂದು ಯುವಕ ಆತ್ಮಹತ್ಯೆ

ಸಮಗ್ರ ನ್ಯೂಸ್: ಮದುವೆ ವಿಚಾರವಾಗಿ ಬಹಳ ಯುವಕರು ತಮ್ಮ ಜೀವ ಕಳೆದುಕೊಳ್ಳುವ ಪರಿಸ್ಥಿತಿ ಇದೀಗ ಎದುರಾಗಿದೆ. ಮದುವೆಗೆ ಯುವತಿ ಸಿಗದ ಹಿನ್ನೆಲೆ ನೊಂದ 26 ವರ್ಷದ ಯುವಕ ಮಧುಸೂದನ್ ವಿಷ ಸೇವಿಸಿ ಪ್ರಾಣ ಕಳೆದುಕೊಂಡಿದ್ದಾನೆ. ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೃತ ಮಧುಸೂದನ್ ತಂದೆ ಅರೆ ಹುಚ್ಚನಂತೆ ವರ್ತಿಸುವ ಕಾರಣ ಯಾರೂ ಹೆಣ್ಣು ನೀಡಲು ಮುಂದಾಗಿರಲಿಲ್ಲ ಈ ಕಾರಣಕ್ಕಾಗಿ ಮಧುಸೂದನ್ ನೊಂದುಕೊಂಡಿದ್ದ ಎನ್ನಲಾಗಿದೆ. ನನಗೆ ಹೆಣ್ಣು ಸಿಗಲ್ಲ. ನಾನು ಒಂಟಿಯಾಗಿಯೇ

ಯಾರೂ ಹೆಣ್ಣು ಕೊಡಲ್ಲ ಎಂದು ಯುವಕ ಆತ್ಮಹತ್ಯೆ Read More »

ಜ್ಞಾನವಾಪಿ ಮಸೀದಿ ಪಾವಿತ್ರ್ಯತೆ ಕಾಪಾಡಿ/ ಸುಪ್ರೀಂ ಕೋರ್ಟ್ ಸೂಚನೆ

ಸಮಗ್ರ ನ್ಯೂಸ್: ಜ್ಞಾನವಾಪಿ ಮಸೀದಿಯ ಸಮೀಕ್ಷೆಯಲ್ಲಿ ಪತ್ತೆಯಾದ ಶಿವಲಿಂಗ ಸ್ಥಳವನ್ನು ಮುಸ್ಲಿಮರು ವಝುಖಾನವಾಗಿ ಬಳಕೆ ಮಾಡಿ ಅಪವಿತ್ರ ಮಾಡಿದ್ದಾರೆ. ಇದು ಹಿಂದು ಭಕ್ತರ ಭಾವನೆಯನ್ನು ಘಾಸಿಗೊಳಿಸಿದೆ. ಹೀಗಾಗಿ ಈ ಸ್ಥಳದ ಶುಚಿತ್ವ ಕಾಪಾಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಾನ್ಯ ಮಾಡಿದೆ. ಮಸೀದಿಯ ಸರ್ವೆಯಲ್ಲಿ ಶಿವಲಿಂಗ ಪತ್ತೆಯಾದ ಶಿವಲಿಂಗ ಸ್ಥಳವನ್ನು ಮುಸ್ಲಿಮರು ತಮ್ಮ ನಮಾಜ್‍ಗೆ ಮೊದಲು ಕೈಕಾಲು, ಮುಖ ತೊಳೆಯಲು ವಝುಖಾನವಾಗಿ ಬಳಕೆ ಮಾಡುತ್ತಿದ್ದರು. ಈ ಮೂಲಕ ಅತ್ಯಂತ ಪವಿತ್ರ ಶಿವಲಿಂಗವನ್ನು ಅಪವಿತ್ರಗೊಳಿಸಲಾಗಿದೆ. ಹೀಗಾಗಿ

ಜ್ಞಾನವಾಪಿ ಮಸೀದಿ ಪಾವಿತ್ರ್ಯತೆ ಕಾಪಾಡಿ/ ಸುಪ್ರೀಂ ಕೋರ್ಟ್ ಸೂಚನೆ Read More »

ಜನವರಿ 22 ರಂದು ಕೋಲ್ಕತ್ತಾದಲ್ಲಿ ‘ಸಾಮರಸ್ಯ ರ್‍ಯಾಲಿ ‘/ ಮಮತಾ ಬ್ಯಾನರ್ಜಿ ಘೋಷಣೆ

ಸಮಗ್ರ ನ್ಯೂಸ್: ಜನವರಿ 22 ರಂದು ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ನಡೆಯಲಿದ್ದು, ಅದೇ ದಿನ ಕೋಲ್ಕತ್ತಾದಲ್ಲಿ ಎಲ್ಲಾ ಧರ್ಮಗಳ ಜನರೊಂದಿಗೆ ‘ಸಾಮರಸ್ಯ ರ್ಯಾಲಿ’ ನಡೆಸುವುದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ. ಮಮತಾ ಬ್ಯಾನರ್ಜಿ ಅವರು ಕಾಳಿಘಾಟ್ ದೇವಸ್ಥಾನದಲ್ಲಿ ಕಾಳಿ ದೇವಿಗೆ ಪೂಜೆ ಸಲ್ಲಿಸಿದ ನಂತರ ದಕ್ಷಿಣ ಕೋಲ್ಕತ್ತಾದ ಹಜ್ರಾ ಕ್ರಾಸಿಂಗ್ನಿಂದ ‘ಸಾಮರಸ್ಯ ರ್‍ಯಾಲಿ’ ಆರಂಭಿಸಲಿದ್ದಾರೆ. ಜನವರಿ 22 ರಂದು ಕಾಳಿಘಾಟ್ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತೇನೆ. ನಂತರ ಎಲ್ಲ ಧರ್ಮದವರೊಂದಿಗೆ ಸೌಹಾರ್ದ

ಜನವರಿ 22 ರಂದು ಕೋಲ್ಕತ್ತಾದಲ್ಲಿ ‘ಸಾಮರಸ್ಯ ರ್‍ಯಾಲಿ ‘/ ಮಮತಾ ಬ್ಯಾನರ್ಜಿ ಘೋಷಣೆ Read More »

ಆಂಧ್ರಪ್ರದೇಶ ಕಾಂಗ್ರೆಸ್ ಘಟಕದ ಅಧ್ಯಕ್ಷೆಯಾಗಿ ವೈ.ಎಸ್ ಶರ್ಮಿಳಾ ನೇಮಕ

ಸಮಗ್ರ ನ್ಯೂಸ್: ಆಂಧ್ರಪ್ರದೇಶ ಕಾಂಗ್ರೆಸ್ ಘಟಕದ ಅಧ್ಯಕ್ಷೆಯಾಗಿ, ಸಿಎಂ ಜಗನ್ ಮೋಹನ ರೆಡ್ಡಿ ಅವರ ಸಹೋದರಿ ವೈ.ಎಸ್ ಶರ್ಮಿಳಾ ಅವರನ್ನು ನೇಮಕ ಮಾಡಲಾಗಿದೆ. ಕಳೆದ ತೆಲಂಗಾಣದ ವಿಧಾನಸಭಾ ಚುನಾವಣೆಯಲ್ಲಿ ಶರ್ಮಿಳಾ ಅವರು ಕಾಂಗ್ರೆಸ್‍ಗೆ ಬೆಂಬಲ ಘೋಷಿಸಿದ್ದರು. ಬಳಿಕ ದೆಹಲಿಯಲ್ಲಿ ಹಿರಿಯ ಕಾಂಗ್ರೆಸ್ ಮುಖಂಡರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ್ದರು. ಕಾಂಗ್ರೆಸ್ ಸೇರಿದ ಬಳಿಕ ಶರ್ಮಿಳಾ ಸ್ಥಾಪಿಸಿದ್ದ ವೈಎಸ್‍ಆರ್ ತೆಲಂಗಾಣ ಪಕ್ಷವನ್ನು ಕಾಂಗ್ರೆಸ್‍ನಲ್ಲಿ ವಿಲೀನ ಮಾಡಿದರು. ಆಂಧ್ರಪ್ರದೇಶ ರಾಜ್ಯ ಘಟಕದ ನೂತನ ಅಧ್ಯಕ್ಷೆಯಾಗಿ ವೈ.ಎಸ್.ಶರ್ಮಿಳಾ ಅವರನ್ನು ನೇಮಕ ಮಾಡಲಾಗಿದೆ ಎಂದು

ಆಂಧ್ರಪ್ರದೇಶ ಕಾಂಗ್ರೆಸ್ ಘಟಕದ ಅಧ್ಯಕ್ಷೆಯಾಗಿ ವೈ.ಎಸ್ ಶರ್ಮಿಳಾ ನೇಮಕ Read More »