January 2024

ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಸಂಬಂಧ ಬೆಂಗಳೂರು, ಕೋಲಾರದಲ್ಲಿ ಫ್ಲೆಕ್ಸ್ ಗಲಾಟೆ

ಸಮಗ್ರ ನ್ಯೂಸ್: ಇನ್ನೇನೂ 4 ದಿನವಷ್ಟೆ ಬಾಕಿ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೊಳ್ಳಲ್ಲು. ದೇಶದೆಲ್ಲೆಡೆ ಸಂಭ್ರಮದ ವಾತಾವರಣ ಸೃಷ್ಟಿಯಾಗಿದೆ. ಇದೇ ವಿಚಾರವಾಗಿ ಅನುಮತಿ ಪಡೆದು ರಾಮಮಂದಿರ ಉದ್ಘಾಟನೆ ಕಟೌಟ್ ಹಾಕಿದ್ದರೂ, ಆದರೆ ಇದೀಗ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲು ಮಾಡಲಾಗಿದೆ. ಶಿವನಗರ ಯುವಕರ ಸಂಘದಿಂದ ಬೆಸ್ಕಾಂಗೆ ಹಣ ಪಾವತಿಸಿ, ಅನುಮತಿ ಪಡೆದು ಕಾರ್ಡ್‌ ರಸ್ತೆಯ ವಾರಿಯರ್ ಬೇಕರಿ ಬಳಿ ಬೃಹತ್ ಕಟೌಟ್ ಅಳವಡಿಸಲಾಗಿದೆ. ರಾಜಾಜಿನಗರ ಪೊಲೀಸರ ನಡೆಗೆ ಶಿವನಗರ ಯುವಕರ ಸಂಘ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ […]

ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಸಂಬಂಧ ಬೆಂಗಳೂರು, ಕೋಲಾರದಲ್ಲಿ ಫ್ಲೆಕ್ಸ್ ಗಲಾಟೆ Read More »

ಬಿಜೆಪಿ ಶಾಸಕ ಉದಯ್ ಗರುಡಾಚಾರ್​ಗೆ ಹೃದಯಾಘಾತ, ಆಸ್ಪತ್ರೆಗೆ ದಾಖಲು

ಸಮಗ್ರ ನ್ಯೂಸ್: ಬೆಂಗಳೂರಿನ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಉದಯ್ ಗರುಡಾಚಾರ್​ಗೆ ಹೃದಯಾಘಾತವಾಗಿದ್ದು ಅವರನ್ನು ಜಯನಗರದ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿನ್ನೆ ಸಂಜೆ ವೇಳೆ ಅವರಿಗೆ ಹೃದಯ ಸಮಸ್ಯೆ ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, ತಜ್ಞ ವೈದ್ಯರಿಂದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದೆ. ಸಂಜೆ ಮನೆಯಲ್ಲಿ ವ್ಯಾಯಾಮ ಮಾಡುತ್ತಿದ್ದ ವೇಳೆ ಲಘು ಹೃದಯಾಘಾತವಾಗಿದೆ. ಸದ್ಯ ವೈದ್ಯರು ಶಾಸಕರಿಗೆ ಆಂಜಿಯೋಪ್ಲಾಸ್ಟಿ ಮಾಡಿ ಚಿಕಿತ್ಸೆ ಮುಂದುವರೆಸಿದ್ದಾರೆ

ಬಿಜೆಪಿ ಶಾಸಕ ಉದಯ್ ಗರುಡಾಚಾರ್​ಗೆ ಹೃದಯಾಘಾತ, ಆಸ್ಪತ್ರೆಗೆ ದಾಖಲು Read More »

ಕುಶಾಲನಗರ: ಓಮಿನಿ-ಬೊಲೆರೋ ಮುಖಾಮುಖಿ ಡಿಕ್ಕಿ

ಸಮಗ್ರ ನ್ಯೂಸ್: ಕುಶಾಲನಗರ ಆನೆಕಾಡು ಬಳಿ ಓಮಿನಿ ಹಾಗೂ ಬೋಲೇರೋ ನಡುವೆ ಮುಖಾಮುಖಿ ಡಿಕ್ಕಿಯಾಗಿ ಮಗು ಸೇರಿ ಚಾಲಕ ಮೃತ. ಕಲ್ಲೂರು ನಿವಾಸಿ ಮೃತ ದೇವಯ್ಯ ಅವರು ಮಡಿಕೇರಿಯಿಂದ ನಾಮಕರಣ ಮುಗಿಸಿ ಓಮಿನಿಯಲ್ಲಿ ಹೋಗುವಾಗ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ದೇವಯ್ಯ ಮತ್ತು ಮಗು ಮೃತಪಟ್ಟಿದ್ದು, ಬೊಲೆರೋ ಜೀಪ್ ನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅವರುಗಳನ್ನು ಮಡಿಕೇರಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಕುಶಾಲನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕುಶಾಲನಗರ: ಓಮಿನಿ-ಬೊಲೆರೋ ಮುಖಾಮುಖಿ ಡಿಕ್ಕಿ Read More »

ಮಂದಿರ ಪ್ರವೇಶಿಸಿದ ರಾಮಲಲ್ಲಾ ಮೂರ್ತಿ

ಸಮಗ್ರ ನ್ಯೂಸ್: ಅಯೋಧ್ಯಾ ಶ್ರೀರಾಮ ಮಂದಿರದ ಉದ್ಘಾಟನೆ ಹಾಗೂ ರಾಮ ಮಂದಿರ ಗರ್ಭ ಗೃಹದಲ್ಲಿ ರಾಮ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆಯ ಧಾರ್ಮಿಕ ವಿಧಿ ವಿಧಾನಗಳು ಇಗಾಗಲೇ ಆರಂಭವಾಗಿವೆ. ಜನವರಿ 22 ರಂದು ರಾಮ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಆಗಲಿದ್ದು, ಇದಕ್ಕಾಗಿ ವಿವಿಧ ಕೈಂಕರ್ಯಗಳು ಜನವರಿ 16ರ ಬೆಳಗ್ಗೆಯಿಂದಲೇ ಆರಂಭವಾಗಿವೆ. ಈಗ ಮೈಸೂರಿನ ಅರುಣ್ ಯೋಗಿರಾಜ್ ಕೆತ್ತಿರುವ ರಾಮಲಲ್ಲಾ ವಿಗ್ರಹ ಅಯೋಧ್ಯೆ ತಲುಪಿದೆ. ಇಂದು ರಾಮಲಲ್ಲಾ ಮೂರ್ತಿಯನ್ನು ಕೆತ್ತಿದ ಸ್ಥಳದಿಂದ ರಾಮ ಮಂದಿರ ನಿರ್ಮಾಣದ ಆವರಣಕ್ಕೆ

ಮಂದಿರ ಪ್ರವೇಶಿಸಿದ ರಾಮಲಲ್ಲಾ ಮೂರ್ತಿ Read More »

ಎಸ್ಎಸ್ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ| ಇಲ್ಲಿದೆ ಫುಲ್ ಡೀಟೈಲ್ಸ್

ಸಮಗ್ರ ನ್ಯೂಸ್: 2023-24ನೇ ಶೈಕ್ಷಣಿಕ ವರ್ಷದ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷಾ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷಾ ಮಂಡಳಿಯಿಂದ ಪ್ರಕಟಿಸಲಾಗಿದೆ. ಮಾರ್ಚ್ 1 ರಿಂದ ಮಾರ್ಚ್ 22 ರವರೆಗೆ ದ್ವಿತೀಯ ಪಿಯು ಪರೀಕ್ಷೆಯ ವೇಳಾಪಟ್ಟಿಯನ್ನು ನಿಗದಿ ಮಾಡಲಾಗಿದೆ. ಉಳಿದಂತೆ ಮಾರ್ಚ್ 25 ರಿಂದ ಏಪ್ರಿಲ್ 6 ರವರೆಗೆ SSLC ಪರೀಕ್ಷೆಯ ವೇಳಾಪಟ್ಟಿಯನ್ನು ಹಂಚಿಕೆ ಮಾಡಲಾಗಿದೆ. ವಿಷಯವಾರು ವೇಳಾಪಟ್ಟಿಯ ವಿವರ ಇಲ್ಲಿದೆ ನೋಡಿ. ದ್ವೀತಿಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ ದಿನಾಂಕ:ಮಾ.01-2024: ಕನ್ನಡ, ಅರೇಬಿಕ್ಮಾ.04-2024: ಗಣಿತಮಾ.05-2024 ರಾಜ್ಯ

ಎಸ್ಎಸ್ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ| ಇಲ್ಲಿದೆ ಫುಲ್ ಡೀಟೈಲ್ಸ್ Read More »

ಸುಳ್ಯ: ಫೆ.1- 4ರಂಗಮನೆಯಲ್ಲಿ ‘ರಂಗ ಸಂಭ್ರಮ’|ನಾಟಕ ಸಂಗೀತ ನೃತ್ಯ ಸಂಗಮದ ಸಾಂಸ್ಕೃತಿಕ ಉತ್ಸವ

ಸಮಗ್ರ ನ್ಯೂಸ್: ಸುಳ್ಯ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ(ರಿ.) ಇದರ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಕಾರದಲ್ಲಿ ಫೆ. 1ರಿಂದ 4ರವರೆಗೆ ನಾಲ್ಕು ದಿನಗಳ ‘ರಂಗ ಸಂಭ್ರಮ- 2024’ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳ ಉತ್ಸವ ನಡೆಯಲಿದೆ. *ಫೆ. 1ನೇ ಗುರುವಾರ ಮೂಡುಬಿದ್ರೆಯ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಕಲಾವಿದರಿಂದ ವೈದೇಹಿ ರಚನೆಯ, ಡಾ.ಜೀವನ್ ರಾಂ ಸುಳ್ಯ ನಿರ್ದೇಶನದ ಪ್ರಸಿದ್ಧ ಮಕ್ಕಳ ಪ್ರಯೋಗ ‘ನಾಯಿಮರಿ ನಾಟಕ’ ಪ್ರದರ್ಶನ. *ಫೆ. 2ನೇ ಶುಕ್ರವಾರ ಮಂಡ್ಯ ರಮೇಶ್ ನೇತೃತ್ವದ

ಸುಳ್ಯ: ಫೆ.1- 4ರಂಗಮನೆಯಲ್ಲಿ ‘ರಂಗ ಸಂಭ್ರಮ’|ನಾಟಕ ಸಂಗೀತ ನೃತ್ಯ ಸಂಗಮದ ಸಾಂಸ್ಕೃತಿಕ ಉತ್ಸವ Read More »

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಕ್ರಿಕೇಟಿಗ ಕೆ.ಎಲ್.ರಾಹುಲ್ ಭೇಟಿ

ಸಮಗ್ರ ನ್ಯೂಸ್:ಜ.17, ಕ್ರಿಕೆಟಿಗ ಮಂಗಳೂರು ಮೂಲದ ಕೆ.ಎಲ್. ರಾಹುಲ್ ಬುಧವಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದರು. ಕ್ಷೇತ್ರಕ್ಕೆ ಭೇಟಿ ನೀಡಿದ ಕೆ.ಎಲ್.ರಾಹುಲ್ ಶ್ರೀ ಸುಬ್ರಹ್ಮಣ್ಯ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಬಳಿಕ ಹೊಸಳಿಗಮ್ಮನ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ದೇವಳದ ವತಿಯಿಂದ ಕೆ.ಎಲ್. ರಾಹುಲ್ ಅವರನ್ನು ಗೌರವಿಸಲಾಯಿತು. ಸ್ನೇಹಿತರ ಜೊತೆಗೆ ಕೆ.ಎಲ್.ರಾಹುಲ್ ಕುಕ್ಕೆಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ದೇವಳದ ಅಧಿಕಾರಿಗಳು, ಸಿಬ್ಬಂದಿಗಳು, ದೇವಳದವರು, ಸ್ನೇಹಿತರು ಜತೆಗಿದ್ದರು. ಅಭಿಮಾನಿಗಳು ರಾಹುಲ್ ಜೊತೆ ಫೊಟೊ ಕ್ಲಿಕ್ಕಿಸಿಕೊಂಡರು.

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಕ್ರಿಕೇಟಿಗ ಕೆ.ಎಲ್.ರಾಹುಲ್ ಭೇಟಿ Read More »

ಕುಕ್ಕೆ ಸುಬ್ರಹ್ಮಣ್ಯ: ಬಿದ್ದು ಸಿಕ್ಕಿದ ಹಣ ಮರಳಿಸಿ ಪ್ರಾಮಾಣಿಕತೆ ಮೆರೆದ ಐದರ ಬಾಲೆ

ಸಮಗ್ರ ನ್ಯೂಸ್: ಭಕ್ತರೊಬ್ಬರು ಕಳೆದುಕೊಂಡ ಹಣದ ಬಂಡಲನ್ನು ಐದರ ಹರೆಯದ ಬಾಲಕಿಯೊಬ್ಬಳ ಪ್ರಾಮಾಣಿಕತೆಯಿಂದ ವಾರಿಸುದಾರರ ಕೈ ಸೇರುವಂತಾದ ಘಟನೆ ದಕ್ಷಿಣ ಕನ್ನಡದ ಪುರಾಣ ಪ್ರಸಿದ್ದ ಕ್ಷೇತ್ರ ಕುಕ್ಕೆಸುಬ್ರಹ್ಮಣ್ಯದಲ್ಲಿ ನಡೆದಿದೆ. ಬೆಂಗಳೂರು ಮೂಲದ ಶ್ರೀಧರ ಎಂಬವರು ಕುಕ್ಕೆ ಸುಬ್ರಹ್ಮಣ್ಯಕ್ಕೆ ಹರಕೆ ತೀರಿಸಲು ಬಂದಿದ್ದರು.ಈ ಸಂದರ್ಭ ತಮ್ಮ ಬ್ಯಾಗ್ ನಲ್ಲಿದ್ದ ಸುಮಾರು ಐವತ್ತು ಸಾವಿರ ನೋಟಿನ ಕಂತೆ ಆಕಸ್ಮಿಕವಾಗಿ ಬಿದ್ದು ಹೋಗಿತ್ತು. ದೇಗುಲದ ಜಮಾ ಉಗ್ರಾಣ ಬಳಿ ಇರುವ ಹಣ್ಣು ಕಾಯಿ ಅಂಗಡಿ ಬಳಿಯಲ್ಲಿ ಬಿದ್ದಿದ್ದ ಈ ನೋಟಿನ ಕಂತೆ

ಕುಕ್ಕೆ ಸುಬ್ರಹ್ಮಣ್ಯ: ಬಿದ್ದು ಸಿಕ್ಕಿದ ಹಣ ಮರಳಿಸಿ ಪ್ರಾಮಾಣಿಕತೆ ಮೆರೆದ ಐದರ ಬಾಲೆ Read More »

ಅಯೋಧ್ಯೆಗೆ ಪಟಾಕಿ ಕೊಂಡೊಯ್ತಿದ್ದ ಲಾರಿಗೆ ಬೆಂಕಿ

ಸಮಗ್ರ ನ್ಯೂಸ್: ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಇನ್ನೇನೂ ಕೆಲವು ದಿನಗಳಷ್ಟೆ ಬಾಕಿ ಇದೆ. ಈಗ ಅಯೋಧ್ಯೆಯಲ್ಲಿ ಸಂಭ್ರಮ ಮನೆಮಾಡಿದೆ. ಈ ಸಂಭ್ರಮಕ್ಕೆ ಅಯೋಧ್ಯೆಗೆ ಪಟಾಕಿ ಕೊಂಡೊಯ್ತಿದ್ದ ಲಾರಿಗೆ ಬೆಂಕಿ ಹತ್ತಿದ್ದು ನಡು ರಸ್ತೆಯಲ್ಲೆ ಪಟಾಕಿ ತುಂಬಿದ ಲಾರಿ ಹೊತ್ತಿ ಉರಿದಿದೆ. ಉತ್ತರಪ್ರದೇಶದ ಉನ್ನಾವೋದಲ್ಲಿ ಈ ಘಟನೆ ನಡೆದಿದ್ದು, ತಮಿಳುನಾಡಿನಿಂದ ಅಯೋಧ್ಯೆಗೆ ಪಟಾಕಿ ಲಾರಿ ಸಾಗುತ್ತಿದ್ದ ವೇಳೆ ನಡುರಸ್ತೆಯಲ್ಲಿ ಹೊತ್ತಿ ಉರಿದಿದೆ.

ಅಯೋಧ್ಯೆಗೆ ಪಟಾಕಿ ಕೊಂಡೊಯ್ತಿದ್ದ ಲಾರಿಗೆ ಬೆಂಕಿ Read More »

ಪುತ್ತೂರು: ಕೇವಲ ಕೇಸರಿ ಶಾಲು ಹಾಕಿದರೆ ಹಿಂದುತ್ವ ಆಗುತ್ತಾ..? ಪುತ್ತಿಲ ಪರಿವಾರದಿಂದ ಜೀವಕ್ಕೇ ಅಪಾಯವಿದೆ”| ಪುತ್ತಿಲ ಪರಿವಾರ ವಿರುದ್ಧ ಸಂತೋಷ್ ಕುಟುಂಬ ವಾಗ್ದಾಳಿ

ಸಮಗ್ರ ನ್ಯೂಸ್: ಮಂತ್ರಾಕ್ಷತೆ ಹಂಚುವ ವಿಚಾರದಲ್ಲೇ ಪುತ್ತಿಲ ಪರಿವಾರದ ಸದಸ್ಯರಿಂದ ನಮ್ಮ ಮೇಲೆ ಹಲ್ಲೆ ನಡೆದಿದೆ ನಮಗೆ ಬದುಕಲು ಬಿಡುತ್ತಿಲ್ಲ ನಮ್ಮ ಜೀವಕ್ಕೆ ಅಪಾಯವಿದೆ ಎಂದು ಜ. 16ರಂದು ನಡೆದ ಸುದ್ದಿಗೋಷ್ಟಿಯಲ್ಲಿ ಹಲ್ಲೆಗೊಳಗಾದ ಸಂತೋಷ್ ಅಳಲು ತೋಡಿಕೊಂಡಿದ್ದಾರೆ. ತಮ್ಮ ಕುಟುಂಬದ ಜೊತೆ ಸೇರಿ ಪುತ್ತೂರಿನಲ್ಲಿ ಸುದ್ದಿಗೋಷ್ಟಿ ನಡೆಸಿದ ಸಂತೋಷ್, ಹಲ್ಲೆ ಮಾಡಿದವರು ಮತ್ತು ನಮ್ಮ ನಡುವೆ ಕಳೆದ ಮೂರು ವರ್ಷಗಳಿಂದ ದಾರಿ ವಿವಾದವಿದೆ. ಆದರೂ ನಾವು ಯಾವತ್ತೂ ಅವರ ಜೊತೆಗೆ ತಕರಾರು ಎತ್ತಲು ಹೋಗಿಲ್ಲ. ಆದರೆ ರಾಮಮಂದಿರದ

ಪುತ್ತೂರು: ಕೇವಲ ಕೇಸರಿ ಶಾಲು ಹಾಕಿದರೆ ಹಿಂದುತ್ವ ಆಗುತ್ತಾ..? ಪುತ್ತಿಲ ಪರಿವಾರದಿಂದ ಜೀವಕ್ಕೇ ಅಪಾಯವಿದೆ”| ಪುತ್ತಿಲ ಪರಿವಾರ ವಿರುದ್ಧ ಸಂತೋಷ್ ಕುಟುಂಬ ವಾಗ್ದಾಳಿ Read More »