January 2024

ರಾಮಲಲ್ಲಾನ ಮೂರ್ತಿ ಕೆತ್ತಿದ ಮೂರು ವಿಗ್ರಹಗಳ ಪೋಟೋ ವೈರಲ್

ಸಮಗ್ರ ನ್ಯೂಸ್: ಅಯೋಧ್ಯೆಯ ರಾಮಮಂದಿರಕ್ಕಾಗಿ ಶಿಲ್ಪಿಗಳಿಂದ ಕೆತ್ತಲಾದ ಮೂರು ರಾಮಲಲ್ಲಾ ವಿಗ್ರಹದ ಫೋಟೋ ಇದೀಗ ಬಹಿರಂಗಗೊಂಡಿದೆ. ಅಯೋಧ್ಯೆಯ ರಾಮಮಂದಿರದಲ್ಲಿ ಈಗ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ್ದ ರಾಮಲಲ್ಲಾನ ಮೂರ್ತಿಯನ್ನು ಜ.22 ರಂದು ಪ್ರತಿಷ್ಠಾಪಿಸಲಾಗಿದೆ. ಲಕ್ಷಾಂತರ ಭಕ್ತರು ದೇವರ ದರ್ಶನವನ್ನು ಪಡೆಯುತ್ತಿದ್ದಾರೆ. ಈ ಜನಸಂದಣಿಯನ್ನು ನಿಯಂತ್ರಿಸಲು ಸರ್ಕಾರ ಜಿಲ್ಲಾಡಳಿತ ಅಯೋಧ್ಯೆಗೆ ವಾಹನಗಳ ಪ್ರವೇಶವನ್ನು ನಿಷೇಧಿಸಿದೆ. ಈ ಚಿತ್ರದಲ್ಲಿ ಅರುಣ್ ಯೋಗಿರಾಜ್, ರಾಜಸ್ಥಾನದ ಶಿಲ್ಪಿ ಸತ್ಯನಾರಾಯಣ ಪಾಂಡೆ, ಇನ್ನೊಬ್ಬ ಕರ್ನಾಟಕದ ಶಿಲ್ಪಿ ಗಣೇಶ್ ಭಟ್ ಅವರು ಕೆತ್ತಿರುವ ರಾಮಲಲ್ಲಾನ […]

ರಾಮಲಲ್ಲಾನ ಮೂರ್ತಿ ಕೆತ್ತಿದ ಮೂರು ವಿಗ್ರಹಗಳ ಪೋಟೋ ವೈರಲ್ Read More »

ಬೈಕ್ ಗೆ ನೇತುಹಾಕಿದ್ದ ಬ್ಯಾಗ್ ನಲ್ಲಿ ಹುಲಿ ತಲೆಬುರುಡೆ, ಹಲ್ಲು, ಉಗುರು ಪತ್ತೆ; ಇಬ್ಬರ ಬಂಧನ

ಸಮಗ್ರ ನ್ಯೂಸ್: ಬೈಕಿಗೆ ನೇತುಹಾಕಿದ್ದ ಬ್ಯಾಗಿನಲ್ಲಿ ಹುಲಿ ತಲೆಬುರುಡೆ, ಹಲ್ಲು, ಉಗುರು ಪತ್ತೆಯಾಗಿದ್ದು, ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ಇಬ್ಬರನ್ನು ಬಂಧಿಸಿರುವ ಘಟನೆ ವರದಿಯಾಗಿದೆ. ಪ್ರಕರಣಕ್ಕೆ ಸಂಬಂದಿಸಿ ಮೂಡಿಗೆರೆ ತಾಲ್ಲೂಕಿನ ಬಣಕಲ್ ಹೋಬಳಿ ಕುಂಡ್ರ ಗ್ರಾಮದ ಸತೀಶ್ ಮತ್ತು ಸುಧೀರ್ ಅವರನ್ನು ಚಿಕ್ಕಮಗಳೂರು ನಗರ ವ್ಯಾಪ್ತಿಯಲ್ಲಿ ಜ. 19ರಂದು ಬಂಧಿಸಲಾಗಿದೆ. ಪ್ರಕರಣವೊಂದರಲ್ಲಿ ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯಕ್ಕೆ ಹಾಜರಾಗಿದ್ದ ಸತೀಶ್ ನನ್ನು ಖಚಿತ ಮಾಹಿತಿ ಮೇರೆಗೆ ಮೂಡಿಗೆರೆ ಅರಣ್ಯ ಸಿಬ್ಬಂದಿ ತಡೆದು ಬೈಕ್ ಗೆ ನೇತುಹಾಕಿದ್ದ ಬ್ಯಾಗ್

ಬೈಕ್ ಗೆ ನೇತುಹಾಕಿದ್ದ ಬ್ಯಾಗ್ ನಲ್ಲಿ ಹುಲಿ ತಲೆಬುರುಡೆ, ಹಲ್ಲು, ಉಗುರು ಪತ್ತೆ; ಇಬ್ಬರ ಬಂಧನ Read More »

ಹಠಾತ್ ಬ್ರೇಕ್ ಹಾಕಿದ ಪರಿಣಾಮ| ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ತಲೆಗೆ ಗಾಯ

ಸಮಗ್ರ ನ್ಯೂಸ್: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರಯಾಣಿಸುತ್ತಿದ್ದ ಕಾರಿನ ಚಾಲಕ ಹಠಾತ್‌ ಬ್ರೇಕ್‌ ಹಾಕಿದ ಪರಿಣಾಮ ಮಮತಾ ಅವರ ತಲೆಗೆ ಅಲ್ಪ ಪ್ರಮಾಣದ ಗಾಯಗಳಾಗಿವೆ ಎಂದು ವರದಿಯಾಗಿದೆ. ಮಮತಾ ಅವರು ಬರ್ಧಮಾನ್‌ನಿಂದ ಕೊಲ್ಕತ್ತಾಗೆ ಮರಳುತ್ತಿದಾಗ ಈ ಘಟನೆ ಸಂಭವಿಸಿದೆ. ಮಳೆ, ದಟ್ಟ ಮಂಜು ಹಾಗೂ ಕಡಿಮೆ ಗೋಚರತೆಯ ಕಾರಣ ಚಾಲಕ ಹಠಾತ್‌ ಬ್ರೇಕ್‌ ಹಾಕಿದರೆನ್ನಲಾಗಿದೆ. ಮಮತಾ ಅವರನ್ನು ಸದ್ಯ ಕೊಲ್ಕತ್ತಾಗೆ ವಾಪಸ್‌ ಕರೆದೊಯ್ಯಲಾಗುತ್ತಿದೆ.

ಹಠಾತ್ ಬ್ರೇಕ್ ಹಾಕಿದ ಪರಿಣಾಮ| ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ತಲೆಗೆ ಗಾಯ Read More »

ಬೆಂಗಳೂರು: ಹಾಡುಹಗಲೇ ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿ ಸೆಕ್ಸ್| ಪ್ರಶ್ನಿಸಿದ ಪೊಲೀಸ್ ಮೇಲೆ‌ ಕಾರು ಹತ್ತಿಸಿದ ಯುವಕ

ಸಮಗ್ರ ನ್ಯೂಸ್: ಯುವಕನೊಬ್ಬರಸ್ತೆ ಬದಿಯಲ್ಲೇ ಕಾರು ನಿಲ್ಲಿಸಿ ಯುವತಿಯೊಬ್ಬಳೊಡನೆ ಹಾಡಹಗಲಿನಲ್ಲೇ ಸಂಭೋಗ ನಡೆಸುತ್ತಿದ್ದ ವೇಳೆ ಪ್ರಶ್ನಿಸಿದ ಪೊಲೀಸ್‌ ಸಿಬ್ಬಂದಿಯೊಬ್ಬರ ಮೇಲೆ ಕಾರು ಹತ್ತಿಸಿ ಕೊಲ್ಲಲು ಯತ್ನಿಸಿರುವ ಘಟನೆ ಬೆಂಗಳೂರಿನ ಜ್ಞಾನಭಾರತಿ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದು, ಗಾಯಗೊಂಡ ಪೊಲೀಸ್‌ ಸಿಬ್ಬಂದಿ ಮಹೇಶ್‌ ಖಾಸಗಿ ಆಸ್ಪತೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೀಸಲು ಪಡೆಯಲ್ಲಿ ಸಬ್‌ ಇನ್ಸ್‌ ಪೆಕ್ಟರ್‌ ಆಗಿ ಕಾರ್ಯನಿರ್ವಹಿಸುತ್ತಿರುವ ಮಹೇಶ್‌ ಶನಿವಾರ ಉಪಕಾರ್‌ ಲೇಔಟ್‌ ನಲ್ಲಿದ್ದ ತಮ್ಮ ಮನೆಯ ಬಳಿ KA 02 MR 8102 ನೋಂದಣಿಯ ಕಾರೊಂದರಲ್ಲಿ

ಬೆಂಗಳೂರು: ಹಾಡುಹಗಲೇ ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿ ಸೆಕ್ಸ್| ಪ್ರಶ್ನಿಸಿದ ಪೊಲೀಸ್ ಮೇಲೆ‌ ಕಾರು ಹತ್ತಿಸಿದ ಯುವಕ Read More »

ರಷ್ಯಾ ಸೇನಾ ವಿಮಾನ ಪತನ| ಸೆರೆಹಿಡಿದ ಉಕ್ರೇನ್ ಸೇವಾ ಸದಸ್ಯರು ಸೇರಿ ಎಲ್ಲರೂ ದುರ್ಮರಣ

ಸಮಗ್ರ ನ್ಯೂಸ್: ಸೆರೆಹಿಡಿದ 65 ಉಕ್ರೇನ್ ಸೇವಾ ಸದಸ್ಯರು, ಆರು ಸಿಬ್ಬಂದಿ ಮತ್ತು ಪಿಒಡಬ್ಲ್ಯೂಗಳೊಂದಿಗೆ ಮೂವರು ಜನರನ್ನ ಹೊತ್ತ ಐಎಲ್ -76 ಸರಕು ವಿಮಾನವು ಸ್ಥಳೀಯ ಸಮಯ ಬೆಳಿಗ್ಗೆ 11 ಗಂಟೆ ಸುಮಾರಿಗೆ ಪೂರ್ವ ಯೋಜಿತ ಹಾರಾಟದ ಸಮಯದಲ್ಲಿ ಪತನಗೊಂಡಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ. ವಿನಿಮಯಕ್ಕಾಗಿ ಕೈದಿಗಳನ್ನು ಬೆಲ್ಗೊರೊಡ್ ಪ್ರದೇಶಕ್ಕೆ ಸಾಗಿಸಲಾಗುತ್ತಿತ್ತು ಎಂದು ಸಚಿವಾಲಯ ತಿಳಿಸಿದೆ. ಉಕ್ರೇನ್ ಪಡೆಗಳು ಉಡಾಯಿಸಿದ ಕ್ಷಿಪಣಿಗಳಿಂದ ವಿಮಾನವನ್ನ ಹೊಡೆದುರುಳಿಸಲಾಗಿದೆ ಎಂದು ರಷ್ಯಾದ ಇಬ್ಬರು ಹಿರಿಯ ಸಂಸದರು ಪುರಾವೆಗಳನ್ನ ಒದಗಿಸದೆ

ರಷ್ಯಾ ಸೇನಾ ವಿಮಾನ ಪತನ| ಸೆರೆಹಿಡಿದ ಉಕ್ರೇನ್ ಸೇವಾ ಸದಸ್ಯರು ಸೇರಿ ಎಲ್ಲರೂ ದುರ್ಮರಣ Read More »

ಫೆ.8 ರಂದು ವಿಧಾನಸೌಧದ ಮುಂಭಾಗದಲ್ಲಿ ರಾಜ್ಯಮಟ್ಟದ ಜನಸ್ಪಂದನ ಕಾರ್ಯಕ್ರಮ

ಸಮಗ್ರ ನ್ಯೂಸ್: ಫೆ.08 ರಂದು ವಿಧಾನಸೌಧದ ಮುಂಭಾಗದಲ್ಲಿ ರಾಜ್ಯಮಟ್ಟದ ಜನಸ್ಪಂದನ ಕಾರ್ಯಕ್ರಮವನ್ನು ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಸಿಎಂ ಅವರು ‘ವ್ಯವಸ್ಥಿತ, ಶಿಸ್ತುಬದ್ದ, ಪರಿಣಾಮಕಾರಿ ಜನಸ್ಪಂದನೆಗೆ ಸಕಲ ತಯಾರಿಯ ಜೊತೆಗೆ ಸ್ಥಳದಲ್ಲೇ ಸಮಸ್ಯೆ ಪರಿಹಾರಕ್ಕೆ ಹೆಚ್ಚಿನ ಗಮನ ಹರಿಸಿದ್ದಾರೆ. ಇನ್ನೂ ಮೆಜೆಸ್ಟಿಕ್‌ ಬಸ್‌ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣಕ್ಕೆ ಉಚಿತ ಬಸ್‌ ವ್ಯವಸ್ಥೆ ಮಾಡಲು ಸೂಚಿಸಿದ್ದು, ವಿವಿಧ ಇಲಾಖೆಗಳ ಅರ್ಜಿ ಸ್ವೀಕಾರಕ್ಕೆ ಪ್ರತ್ಯೇಕ ಕೌಂಟರುಗಳನ್ನು ಸ್ಥಾಪನೆ ಮಾಡಲಾಗುವುದು. ಜೊತೆಗೆ

ಫೆ.8 ರಂದು ವಿಧಾನಸೌಧದ ಮುಂಭಾಗದಲ್ಲಿ ರಾಜ್ಯಮಟ್ಟದ ಜನಸ್ಪಂದನ ಕಾರ್ಯಕ್ರಮ Read More »

ಮಗುವಿಗೆ ವಿಷವಿಟ್ಟು ತಾಯಿಯು ಆತ್ಮಹತ್ಯೆ| ಚಿಕಿತ್ಸೆ ಫಲಕಾರಿ ಆಗದೇ 3 ವರ್ಷದ ಮಗು ಸಾವು

ಸಮಗ್ರ ನ್ಯೂಸ್: ಮಗುವಿನ ಜೊತೆ ವಿಷ ಕುಡಿದು ತಾಯಿಯ ಆತ್ಮಹತ್ಯೆಗೆ ಯತ್ನಿಸಿದ ಘಟನೆ ರಾಮನಗರ ಜಿಲ್ಲೆಯ ಹಾರೋಹಳ್ಳಿ ತಾಲೂಕಿನ ಗೋದೂರ ಗ್ರಾಮದಲ್ಲಿ ನಡೆದಿದೆ. 3 ವರ್ಷದ ಮಗು ದೀಕ್ಷಿತ್ ಗೌಡ ಸಾವನ್ನಪ್ಪಿದರೆ, ಅಸ್ವಸ್ಥ ತಾಯಿ ಪೂರ್ಣಿಮಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಲಕ್ಷ್ಮಣ ರೇಖೆ ಎಂಬ ಹೆಸರಿನ ಜಿರಳೆಗಿಡುವ ವಿಷ ಇದಾಗಿದ್ದು, ತಾಯಿ ಪೂರ್ಣಿಮಾ ತಾನೂ ಕುಡಿದು, ಮಗುವಿಗೂ ವಿಷವುಣಿಸಿದ್ದಾರೆ. ಸತತ ವಾಂತಿ ಹಾಗೂ ಭೇದಿಯಿಂದ ಮಗು ಕೊನೆಯುಸಿರೆಳೆದಿದೆ. ಇದೀಗ ದಯಾನಂದ ಆಸ್ಪತ್ರೆಯಲ್ಲಿ ಮಗುವಿನ ಮರಣೋತ್ತರ

ಮಗುವಿಗೆ ವಿಷವಿಟ್ಟು ತಾಯಿಯು ಆತ್ಮಹತ್ಯೆ| ಚಿಕಿತ್ಸೆ ಫಲಕಾರಿ ಆಗದೇ 3 ವರ್ಷದ ಮಗು ಸಾವು Read More »

ಗಣರಾಜ್ಯೋತ್ಸವ ಹಿನ್ನಲೆ| ಮುಜರಾಯಿ ದೇಗುಲಗಳಲ್ಲಿ ದೀಪಾಲಂಕಾರಕ್ಕೆ ಸುತ್ತೋಲೆ

ಸಮಗ್ರ ನ್ಯೂಸ್: 75ನೇ ಗಣರಾಜ್ಯೋತ್ಸವದ ಹಿನ್ನೆಲೆ ಜನವರಿ 25 ಹಾಗೂ 26 ರಂದು ರಾಜ್ಯದ ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆಸಂಬಂಧಿಸಿದ ಎಲ್ಲಾ ಸಂಸ್ಥೆಗಳು ಹಾಗೂ ದೇವಾಲಯಗಳಲ್ಲಿ ವಿಶೇಷ ವಿದ್ಯುತ್‌ ದೀಪಾಲಂಕಾರಕ್ಕೆ ವ್ಯವಸ್ಥೆ ಮಾಡಲು ಸುತ್ತೋಲೆ ಹೊರಡಿಸಲಾಗಿದೆ. ಜನವರಿ 26 ರಂದು ದೇವಾಲಯಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ವ್ಯವಸ್ಥೆಗಳನ್ನು ಮಾಡಬೇಕು ಎಂದು ಹಿಂದೂ ಧಾರ್ಮಿಕ ದತ್ತಿ ಇಲಾಖೆ ತಿಳಿಸಿದೆ. ಕರ್ನಾಟಕ ಸರ್ಕಾರ ಪ್ರತಿ ವರ್ಷ ಗಣರಾಜ್ಯೋತ್ಸವ ವೇಳೆಗೆ ಅನುದಾನ ಬಿಡುಗಡೆ ಮಾಡುತ್ತದೆ. ರಾಜ್ಯ ಮಟ್ಟದ ಕಾರ್ಯಕ್ರಮಕ್ಕೆ 50 ಲಕ್ಷ

ಗಣರಾಜ್ಯೋತ್ಸವ ಹಿನ್ನಲೆ| ಮುಜರಾಯಿ ದೇಗುಲಗಳಲ್ಲಿ ದೀಪಾಲಂಕಾರಕ್ಕೆ ಸುತ್ತೋಲೆ Read More »

ಸುಳ್ಯ: ಕುಂಕುಂ ವಸ್ತ್ರ ಮಳಿಗೆಯಲ್ಲಿ ಬಂಪ‌ರ್ ಬಹುಮಾನವಾದ ಸ್ಕೂಟಿ ಡ್ರಾ

ಸಮಗ್ರ ನ್ಯೂಸ್: ಸುಳ್ಯದ ಹೆಸರಾಂತ ವಸ್ತ್ರಮಳಿಗೆ ಕುಂ..ಕುಂ.. ಪ್ಯಾಷನ್ ನಲ್ಲಿ ದೀಪಾವಳಿ, ಹೊಸ ವರುಷ ಹಾಗೂ ಸುಳ್ಯ ಜಾತ್ರೋತ್ಸವ ಹಬ್ಬಗಳ ಪ್ರಯುಕ್ತ 151 ದಿನಗಳ ಬಿಗ್ ಸೇಲ್ ನಲ್ಲಿ ಹಲವು ಬಹುಮಾನಗಳನ್ನು ಆಯೋಜಿಸಿದ್ದು ಬಂಪ‌ರ್ ಬಹುಮಾನವಾದ ಸ್ಕೂಟಿಯನ್ನು ಶಿವಲಿಂಗ ಮತ್ತು ದೀಪಾ ಅವರಿಗೆ ದೊರಕಿದೆ. ವಿಜೇತರಿಗೆ ಸಂಸ್ಥೆಯ ಮಾಲಕರು ಹಾಗೂ ಸಿಬ್ಬಂದಿಗಳು ಬಹುಮಾನ ಹಸ್ತಾಂತರಿಸಿ ಸಂಭ್ರಮಿಸಿದರು.

ಸುಳ್ಯ: ಕುಂಕುಂ ವಸ್ತ್ರ ಮಳಿಗೆಯಲ್ಲಿ ಬಂಪ‌ರ್ ಬಹುಮಾನವಾದ ಸ್ಕೂಟಿ ಡ್ರಾ Read More »

Redmi ಫೋನ್ ಮೇಲೆ ಭಾರೀ ಡಿಸ್ಕೌಂಟ್, 9 ಸಾವಿರಕ್ಕಿಂತ ಕಡಿಮೆ ಬೆಲೆಗೆ ಸಿಗ್ತಾ ಇದೆ!

Redmi 13C, 6GB RAM, 128GB ಸ್ಟೋರೇಜ್ ರೂಪಾಂತರವು Amazon ನಲ್ಲಿ ಉತ್ತಮ ಕೊಡುಗೆಯನ್ನು ನೀಡುತ್ತಿದೆ. ಈ ರೂಪಾಂತರದ MRP ಬೆಲೆ ರೂ.13,999 ಆಗಿದ್ದರೆ, ಇದನ್ನು ಅಮೆಜಾನ್‌ನಲ್ಲಿ ರೂ.9,999 ಗೆ ಮಾರಾಟ ಮಾಡಲಾಗುತ್ತಿದೆ. ಅಂದರೆ ಶೇ.29 ರಷ್ಟು ರಿಯಾಯಿತಿಯನ್ನು ಇಲ್ಲಿನ ಗ್ರಾಹಕರಿಗೆ ನೀಡಲಾಗುತ್ತಿದೆ. ಈ ರಿಯಾಯಿತಿಯ ಜೊತೆಗೆ, ಎಲ್ಲಾ ಬ್ಯಾಂಕ್ ಕಾರ್ಡ್ ವಹಿವಾಟಿನ ಮೇಲೆ ರೂ. 1,000 ಫ್ಲಾಟ್ ರಿಯಾಯಿತಿಯನ್ನು ಸಹ ನೀಡಲಾಗುವುದು. ಇದರಿಂದ ಗ್ರಾಹಕರಿಗೆ ರೂ. 8,999 ರ ಪರಿಣಾಮಕಾರಿ ಬೆಲೆಯಲ್ಲಿ ಫೋನ್ ಅನ್ನು ಖರೀದಿಸಬಹುದು.

Redmi ಫೋನ್ ಮೇಲೆ ಭಾರೀ ಡಿಸ್ಕೌಂಟ್, 9 ಸಾವಿರಕ್ಕಿಂತ ಕಡಿಮೆ ಬೆಲೆಗೆ ಸಿಗ್ತಾ ಇದೆ! Read More »