January 2024

ಸುಳ್ಯ: ಗಣರಾಜ್ಯೋತ್ಸವ ದಿನಾಚರಣೆ – ಧ್ವಜಾರೋಹಣ

ಸಮಗ್ರನ್ಯೂಸ್: ಜ.26: ರಾಷ್ಟ್ರೀಯ ಹಬ್ಬಗಳ ದಿನಾಚರಣೆ ಸಮಿತಿ ಸುಳ್ಯ ತಾಲೂಕು ಆಶ್ರಯದಲ್ಲಿ ಸುಳ್ಯ ಸರಕಾರಿ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮ ನಡೆಯಿತು. ಸುಳ್ಯ ತಹಶಿಲ್ದಾರ್ ಜಿ.ಮಂಜುನಾಥ್ ಧ್ವಜಾರೋಹಣ ನೆರವೇರಿಸಿ, ಧ್ವಜ ವಂದನೆ ಸ್ವೀಕರಿಸಿ. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ವೃತ್ತ ನಿರೀಕ್ಷಕ ಮೋಹನ್ ಕೊಠಾರಿ, ಎಒಎಲ್ಇ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ, ಸುಳ್ಯ ನ.ಪಂ. ಮುಖ್ಯಾಧಿಕಾರಿ ಸುಧಾಕರ್ ಎಂ.ಎಚ್., ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮೋಹನ ಗೌಡ, […]

ಸುಳ್ಯ: ಗಣರಾಜ್ಯೋತ್ಸವ ದಿನಾಚರಣೆ – ಧ್ವಜಾರೋಹಣ Read More »

ಶೆಟ್ಟರ್ ಪಕ್ಷ ತೊರೆದಿದ್ದಕ್ಕೆ ಡಿಕೆಶಿಗೆ ಎಚ್ಚರಿಕೆ ಕೊಟ್ಟ ಮಲ್ಲಿಕಾರ್ಜುನ ಖರ್ಗೆ

ಸಮಗ್ರ ನ್ಯೂಸ್: ಜಗದೀಶ್ ಶೆಟ್ಟರ್ ಕಾಂಗ್ರೆಸ್ ಪಕ್ಷ ತೊರೆದು ಮತ್ತೆ ಬಿಜೆಪಿ ಸೇರ್ಪಡೆಯಾಗಿರುವ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿಸಿಎಂ ಡಿ.ಕೆ ಶಿವಕುಮಾರ್​ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಹಿರಂಗವಾಗಿಯೇ ಎಚ್ಚರಿಕೆ ನೀಡಿದ್ದಾರೆ. ಗಣರಾಜ್ಯೋತ್ಸವ ಪ್ರಯುಕ್ತ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಅವರು ಧ್ವಜಾರೋಹಣ ನೆರವೇರಿಸಿದರು. ಇದಕ್ಕೂ ಮೊದಲೇ ಅವರು ಡಿ.ಕೆ ಶಿವಕುಮಾರ್​​ಗೆ ಎಚ್ಚರಿಕೆ ನೀಡಿದ್ದಾರೆ. ಪಕ್ಷಕ್ಕೆ ಯಾರನ್ನಾದರೂ ಸೇರಿಸಿಕೊಳ್ಳುವಾಗ ಯೋಚಿಸಬೇಕು. ಅವರ ಹಿನ್ನೆಲೆ, ಸಿದ್ಧಾಂತ ಏನೆಂದು ಅರಿತುಕೊಳ್ಳಬೇಕು. ಪಕ್ಷಕ್ಕೆ ನಿಷ್ಠಾವಂತರು ಮಾತ್ರ ಬರಬೇಕು. ಹೀಗೆ ಬಂದರು, ಹಾಗೆ ಹೋದರು

ಶೆಟ್ಟರ್ ಪಕ್ಷ ತೊರೆದಿದ್ದಕ್ಕೆ ಡಿಕೆಶಿಗೆ ಎಚ್ಚರಿಕೆ ಕೊಟ್ಟ ಮಲ್ಲಿಕಾರ್ಜುನ ಖರ್ಗೆ Read More »

ಸುಳ್ಯ: ಯುದ್ಧ ಸ್ಮಾರಕ ಲೋಕಾರ್ಪಣೆ; ಗೌರವಾರ್ಪಣೆ|’ಯೋಧರ ನಿಸ್ವಾರ್ಥ ಸೇವೆಯಿಂದ ದೇಶದಲ್ಲಿ ಶಾಂತಿ’

ಸಮಗ್ರ ಸಮಾಚಾರ:ಯೋಧರು ತಮ್ಮ ನಿಸ್ವಾರ್ಥ ಭಾವನೆಯಿಂದ ಸೇವೆ ಸಲ್ಲಿಸುತ್ತಿರುವುದರಿಂದ ದೇಶದಲ್ಲಿ ಶಾಂತಿ ನೆಲೆಸಿದೆ ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು. ಸುಳ್ಯ ಪಟ್ಟಣ ಪಂಚಾಯತ್ ಕಛೇರಿ ಆವರಣದಲ್ಲಿ ನಿರ್ಮಿಸಲಾಗಿರುವ ಯುದ್ಧ ಸ್ಮಾರಕದ ಲೋಕಾರ್ಪಣೆ ಮತ್ತು ಯುದ್ಧ ಸ್ಮಾರಕಕ್ಕೆ ಗೌರವಾರ್ಪಣೆ ಕಾರ್ಯಕ್ರಮದ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಇಂದು ಸುಳ್ಯದಲ್ಲಿ ಯುದ್ಧ ಸ್ಮಾರಕ ನಿರ್ಮಾಣಗೊಂಡಿದೆ‌ ಇದು ಇಲ್ಲಿನ ಜನರಿಗೆ ಪ್ರೇರಣೆಯಾಗುವ ಮೂಲಕ ಸುಳ್ಯದಿಂದಲೂ ಹಚ್ಚು ಹೆಚ್ಚು ಸೈನಿಕರು ಸೇವೆಗೆ ಸೇರುವಂತಾಗಲಿ ಎಂದ ಅವರ

ಸುಳ್ಯ: ಯುದ್ಧ ಸ್ಮಾರಕ ಲೋಕಾರ್ಪಣೆ; ಗೌರವಾರ್ಪಣೆ|’ಯೋಧರ ನಿಸ್ವಾರ್ಥ ಸೇವೆಯಿಂದ ದೇಶದಲ್ಲಿ ಶಾಂತಿ’ Read More »

ಪುತ್ತೂರು: ಉದ್ಯೋಗದ ಜಾಹೀರಾತು ನಂಬಿ ₹ 2.25ಲಕ್ಷ ಕಳೆದುಕೊಂಡ ಯುವತಿ

ಸಮಗ್ರ ನ್ಯೂಸ್: ಪತ್ರಿಕೆಯೊಂದರಲ್ಲಿ ಪ್ರಕಟಗೊಂಡಿದ್ದ ಉದ್ಯೋಗದ ಜಾಹೀರಾತನ್ನು ನಂಬಿ, ಉದ್ಯೋಗದ ಆಸೆಯಿಂದ ವಂಚಕರ ಖಾತೆಗೆ ₹ 2.25 ಲಕ್ಷ ಹಣ ಜಮೆ ಮಾಡಿ ಯುವತಿಯೊಬ್ಬರು ಮೋಸ ಹೋಗಿದ್ದಾರೆ. ಆರ್ಯಾಪು ಗ್ರಾಮದ ಒಳತ್ತಡ್ಕ ನಿವಾಸಿ ನಿಶ್ಮಿತಾ (24) ವಂಚನೆಗೊಳಗಾದ ಯುವತಿ. ಪತ್ರಿಕೆ ಜಾಹೀರಾತಿನಲ್ಲಿ ನೀಡಲಾಗಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ವಿಚಾರಿದ ಯುವತಿ, ಅವರು ಸೂಚಿಸಿದಂತೆ 2023ರಜೂನ್ 28ರಿಂದ 2024ರ ಜನವರಿ12ರ ಅವಧಿಯಲ್ಲಿ ಹಂತ ಹಂತವಾಗಿ ಅವರು ತಿಳಿಸಿದ ಬ್ಯಾಂಕ್ ಖಾತೆಗಳಿಗೆ ಒಟ್ಟು ₹2.25 ಲಕ್ಷ ಪಾವತಿ ಮಾಡಿದ್ದರು.

ಪುತ್ತೂರು: ಉದ್ಯೋಗದ ಜಾಹೀರಾತು ನಂಬಿ ₹ 2.25ಲಕ್ಷ ಕಳೆದುಕೊಂಡ ಯುವತಿ Read More »

ಇಂದು ಕುಕ್ಕೆಗೆ ಮಾಜಿ ಪ್ರಧಾನಿ ದೇವೇಗೌಡ

ಸಮಗ್ರ ನ್ಯೂಸ್: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮಾಜಿ ಪ್ರಧಾನಿ ಹಾಗೂ ರಾಜ್ಯ ಸಭಾ ಸದಸ್ಯ ಎಚ್.ಡಿ.ದೇವೇಗೌಡ ಅವರು ಜ.26ರಂದು ಭೇಟಿ ನೀಡುವರು. ಜ.26ರಂದು ಧರ್ಮಸ್ಥಳದಿಂದ 1 ಗಂಟೆ ಹೊರಟು ರಸ್ತೆ ಮಾರ್ಗದ ಮೂಲಕ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸುವರು. ಸಂಜೆ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ವಿಶೇಷ ಪೂಜೆಯಲ್ಲಿ ಭಾಗವಹಿಸಿ, ರಾತ್ರಿ ಸುಬ್ರಹ್ಮಣ್ಯದಲ್ಲಿ ವಾಸ್ತವ್ಯ ಮಾಡುವರು. ಜ.27ರಂದು ಕುಕ್ಕೆ ಕ್ಷೇತ್ರದಲ್ಲಿ ವಿಶೇಷ ಪೂಜೆಯಲ್ಲಿ ಭಾಗವಹಿಸುವರು. ಮಧ್ಯಾಹ್ನ 1 ಗಂಟೆಗೆ ರಸ್ತೆ ಮಾರ್ಗದ ಮೂಲಕ ಬಿಳೆನೆಲೆ ಹೆಲಿಪ್ಯಾಡ್ ಗೆ ಆಗಮಿಸಿ

ಇಂದು ಕುಕ್ಕೆಗೆ ಮಾಜಿ ಪ್ರಧಾನಿ ದೇವೇಗೌಡ Read More »

ಸಂಗೀತ ನಿರ್ದೇಶಕ ಇಳಯರಾಜ ಪುತ್ರಿ ಭವತಾರಿಣಿ ವಿಧಿವಶ

ಸಮಗ್ರ ನ್ಯೂಸ್: ಖ್ಯಾತ ಸಂಗೀತ ನಿರ್ದೇಶಕ ಇಳಯರಾಜಾ ಅವರ ಮಗಳು ಮತ್ತು ಹಿನ್ನೆಲೆ ಗಾಯಕಿ ಭವತಾರಿಣಿ ವಿಧಿವಶರಾಗಿದ್ದಾರೆ. ಭವತಾರಿಣಿ ಪಿತ್ತಜನಕಾಂಗದ ಕ್ಯಾನ್ಸರ್’ನಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಶ್ರೀಲಂಕಾಕ್ಕೆ ತೆರಳಿದ್ದರು.ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಂಜೆ 5 ಗಂಟೆ ಸುಮಾರಿಗೆ ಶ್ರೀಲಂಕಾದಲ್ಲಿ ನಿಧನರಾದರು. ಅವರ ಪಾರ್ಥಿವ ಶರೀರವನ್ನು ಜನವರಿ 26ರಂದು ಚೆನ್ನೈಗೆ ತರಲಾಗುವುದು. ಭವತಾರಿಣಿ 47 ವರ್ಷ ವಯಸ್ಸಾಗಿದ್ದು, ಪತಿಯನ್ನು ಅಗಲಿದ್ದಾರೆ. ಇಳಯರಾಜಾ ಅವರ ಮಗಳು ಮತ್ತು ಕಾರ್ತಿಕ್ ರಾಜಾ ಮತ್ತು ಯುವನ್ ಶಂಕರ್ ರಾಜಾ ಅವರ ಸಹೋದರಿಯಾಗಿದ್ದ ಭವತಾರಿಣಿ, ‘ಭಾರತಿ’

ಸಂಗೀತ ನಿರ್ದೇಶಕ ಇಳಯರಾಜ ಪುತ್ರಿ ಭವತಾರಿಣಿ ವಿಧಿವಶ Read More »

8 ಡ್ರೋನ್​ ನೀಡುವಂತೆ ಒಪ್ಪಂದ ಮಾಡಿಕೊಂಡು ಅಡ್ವಾನ್ಸ್ ನೀಡಿದ್ದ ಸಿಇಓ… ಪ್ರತಾಪ್ ವಿರುದ್ಧ ಆರೋಪ

ಸಮಗ್ರ ನ್ಯೂಸ್: ಡ್ರೋನ್ ಪ್ರತಾಪ್ ಅಂತ ಫೇಮಸ್ ಆಗಿರುವ ಪ್ರತಾಪ್ ತಾವು ವಿದೇಶಗಳಲ್ಲಿ ಭಾರಿ ಗೌರವ, ಆದರಗಳನ್ನು ಪಡೆದಿದ್ದಾಗಿ ಸುಳ್ಳು ಹೇಳಿ ತೀವ್ರ ಟ್ರೋಲ್​ಗೆ ಒಳಗಾಗಿದ್ದರು. ಅದಾದ ಬಳಿಕ ತಾವೇ ಒಂದು ಡ್ರೋನ್ ಸಂಸ್ಥೆ ಪ್ರಾರಂಭಿಸಿ, ರೈತರಿಗೆ ಅನುಕೂಲಕರವಾಗುವಂತೆ ಡ್ರೋನ್ ನಿರ್ಮಿಸಿ ಮಾರಾಟ ಮಾಡುತ್ತಿರುವುದಾಗಿ ಹೇಳಿ ಹಲವು ವಿಡಿಯೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದೀಗ ಪ್ರತಾಪ್, ತಮ್ಮ ಡ್ರೋನ್​ಗಳನ್ನು ಮಾರಾಟ ಮಾಡಿದ್ದ ಸಂಸ್ಥೆಯ ಸಿಇಓ ಪ್ರತಾಪ್ ವಿರುದ್ಧ ಆರೋಪ ಮಾಡಿದ್ದಾರೆ. ಪುಣೆಯ ಕ್ಯಾಸ್ಪರ್ ಡ್ರೊನೊಟಿಕ್ಸ್ ಹೆಸರಿನ

8 ಡ್ರೋನ್​ ನೀಡುವಂತೆ ಒಪ್ಪಂದ ಮಾಡಿಕೊಂಡು ಅಡ್ವಾನ್ಸ್ ನೀಡಿದ್ದ ಸಿಇಓ… ಪ್ರತಾಪ್ ವಿರುದ್ಧ ಆರೋಪ Read More »

ಕಡಬ: ಆಶಕ್ತ ಕುಟುಂಬಕ್ಕೆ ಆಸರೆಯಾದ ಒಕ್ಕಲಿಗ ಗೌಡ ಮಹಾ ಸೇವಾ ಬಳಗ| ಶಾರದೆಗೆ ಒಲಿದ ಸೂರು!!

ಸಮಗ್ರ ನ್ಯೂಸ್: ಆರ್ಥಿಕವಾಗಿ ದುರ್ಬಲ ಹೊಂದಿದ ತಾಯಿ – ಮಗಳ ಕಷ್ಟಕ್ಕೆ ಮಿಡಿದ ಸಮಾನ ಮನಸ್ಕರ ತಂಡ ಆಸರೆಯಾಗಿದ್ದು, ಸೂರು ಕಲ್ಪಿಸಿ ಮಾನವೀಯತೆ ಮೆರೆದಿದೆ. ಒಕ್ಕಲಿಗ ಗೌಡ ಮಹಾ ಸೇವಾ ಬಳಗ ಕಡಬ ಇದರ ವತಿಯಿಂದ ತಾಯಿ ಮತ್ತು ಮಗಳಿಗೆ ಮನೆಯನ್ನು ದುರಸ್ತಿ ಮಾಡಿ ಹಸ್ತಾಂತರಿಸಿದ ಕಾರ್ಯಕ್ರಮವು ಜ.25 ರಂದು ಕಡಬ ತಾಲೂಕಿನ ಐತ್ತೂರು ಗ್ರಾಮದ ಆಜನದಲ್ಲಿ ನಡೆಯಿತು. ಕೆಲ ತಿಂಗಳ ಹಿಂದೆ ಅಷ್ಟೆ ಒಕ್ಕಲಿಗ ಗೌಡ ಮಹಾ ಸೇವಾ ಬಳಗ ಎಂಬ ಯುವಕರ ತಂಡ ಕಡಬದಲ್ಲಿ

ಕಡಬ: ಆಶಕ್ತ ಕುಟುಂಬಕ್ಕೆ ಆಸರೆಯಾದ ಒಕ್ಕಲಿಗ ಗೌಡ ಮಹಾ ಸೇವಾ ಬಳಗ| ಶಾರದೆಗೆ ಒಲಿದ ಸೂರು!! Read More »

ನಾಳೆ ಒಟಿಟಿಯಲ್ಲಿ ‘ಅನಿಮಲ್​’ ಸಿನಿಮಾ ಬಿಡುಗಡೆ

ಸಮಗ್ರ ನ್ಯೂಸ್: ಡಿಸೆಂಬರ್​ 1ರಂದು ತೆರೆಕಂಡ ಸೂಪರ್​ ಹಿಟ್​ ಆದ ‘ಅನಿಮಲ್​’ ಸಿನಿಮಾ ಯಾವಾಗ ಒಟಿಟಿಗೆ ಬರಲಿದೆ ಎಂದು ಕೇಳುತ್ತಲೇ ಇದ್ದರು. ಈಗ ಎಲ್ಲರಿಗೂ ನಿರ್ಮಾಪಕರು ಗುಡ್ ನ್ಯೂಸ್ ನೀಡಿದ್ದಾರೆ. ಜ. 26ರಂದು ‘ಅನಿಮಲ್​’ ಸಿನಿಮಾ ಒಟಿಟಿಯಲ್ಲಿ ಲಭ್ಯವಾಗುತ್ತಿದೆ. ನೆಟ್​ಫ್ಲಿಕ್ಸ್​ (Netflix) ಮೂಲಕ ಈ ಚಿತ್ರದ ಸ್ಟ್ರೀಮಿಂಗ್​ ಆರಂಭ ಆಗುತ್ತಿದೆ. ರಣಬೀರ್​ ಕಪೂರ್​ ಅವರಿಗೆ ಈ ಚಿತ್ರದಿಂದ ಬಹು ದೊಡ್ಡ ಯಶಸ್ಸು ಸಿಕ್ಕಿದೆ. ರಶ್ಮಿಕಾ ಮಂದಣ್ಣ ಅವರ ಚಾರ್ಮ್​ ಕೂಡ ಹೆಚ್ಚಾಗಿದೆ. ನಿರ್ದೇಶಕ ಸಂದೀಪ್​ ರೆಡ್ಡಿ ವಂಗಾ

ನಾಳೆ ಒಟಿಟಿಯಲ್ಲಿ ‘ಅನಿಮಲ್​’ ಸಿನಿಮಾ ಬಿಡುಗಡೆ Read More »

ವಿದ್ಯುತ್ ಕಂಬಕ್ಕೆ ಸ್ಕೂಟರ್ ಡಿಕ್ಕಿ| ಮೂವರು ಯುವಕರು ಸಾವು

ಸಮಗ್ರ ನ್ಯೂಸ್: ವಿದ್ಯುತ್ ಕಂಬಕ್ಕೆ ಸ್ಕೂಟರ್ ಡಿಕ್ಕಿಯಾಗಿ ಮೂವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಚೌಕನಗಾಳಾಯದಲ್ಲಿ ನಡೆದಿದೆ. ಮೃತರು ದಾಂಡೇಲಿ ನಗರದ ರಾಕೇಶ್​ ಮಹಾದೇವಪ್ಪ ಬಡಿಗೇರ, ರಿತೇಶ್ ಸುಬ್ರಹ್ಮಣ್ಯ ನಾಯರ್ ಹಾಗೂ ಕೃಷ್ಣ ವಣ್ಣುರಾಯ ಹರಿಜನ ಎಂದು ತಿಳಿದು ಬಂದಿದೆ. ಅತಿವೇಗದ ಚಾಲನೆಯಿಂದ ಈ ದುರ್ಘಟನೆ ಸಂಭವಿಸಿದ್ದು, ಜೋಯಿಡಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ವಿದ್ಯುತ್ ಕಂಬಕ್ಕೆ ಸ್ಕೂಟರ್ ಡಿಕ್ಕಿ| ಮೂವರು ಯುವಕರು ಸಾವು Read More »