ಸಮಗ್ರ ನ್ಯೂಸ್: ಸಾಲ ತೀರಿಸೋಕೆ ಪರದಾಡುತ್ತಿದ್ದ ಅಸಿಸ್ಟೆಂಟ್ ಲೋಕೋ ಪೈಲಟ್ (Assistant Loco Pilot) ಸಾಲ ತೀರಿಸಲು ಕಳ್ಳತನದ (Theft) ದಾರಿ ಹಿಡಿದು ಜೈಲು ಸೇರಿದ್ದಾರೆ.
ಅರಸಿಕೆರೆ ರೈಲ್ವೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು ಅಸಿಸ್ಟೆಂಟ್ ಲೋಕೋ ಪೈಲಟ್ ಪಡಿ ಸ್ವರಾಜ್ ಅವರನ್ನು ಬಂಧಿಸಿ 3ಲಕ್ಷದ 33ಸಾವಿರದ 489 ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ರೈಲ್ವೆ ಪೊಲೀಸರು ಆರೋಪಿಯನ್ನ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಸಾಲ ತೀರಿಸೋಕೆ ಪಡಿ ಸ್ವರಾಜ್ ರೈಲ್ವೆ ಪ್ರಯಾಣಿಕರ ವಸ್ತುಗಳ ಕಳ್ಳತನಕ್ಕೆ ಇಳಿದಿದ್ದರು. ಒಂದು ವರ್ಷದ ಹಿಂದೆಯಷ್ಟೇ ತುಂಬು ಬಡ ಕುಟುಂಬದ ಹುಡಗಿಯನ್ನ ಮದುವೆಯಾಗಿದ್ದ ಪಡಿ ಸ್ವರಾಜ್ ಸುಮಾರು 13 ಲಕ್ಷ ಸಾಲ ಮಾಡಿಕೊಂಡಿದ್ದರು.
ಸಾಲ ತೀರಿಸಲಾಗದೇ ಒದ್ದಾಡುತ್ತಿದ್ದ ಅವರು ಈ ವೇಳೆ ಬೆಂಗಳೂರಿನಿಂದ ಉಡುಪಿಗೆ ಪ್ರಯಾಣಿಸುತ್ತಿದ್ದ ಓರ್ವ ಪ್ರಯಾಣಿಕರು ಮಲಗಿದ್ದಾಗ ಅವರ ಲ್ಯಾಪ್ ಟಾಪ್ ಬಾಗ್ ಕಳ್ಳತನವಾಗಿತ್ತು. ಈ ಪ್ರಕರಣದ ತನಿಖೆ ಕೈಗೊಂಡ ಗಪಡಿ ಸ್ವರಾಜ್ ಕೈ ಚಳಕ ಬಯಲಾಗಿದೆ.
ಅನುಮಾನ ಬಂದು ಪೊಲೀಸರು, ಪಡಿ ಸ್ವರಾಜ್ ಟ್ರಾಲಿ ಬ್ಯಾಗ್ ಪರಿಶೀಲಿಸಿದ್ದು ಅತನ ಬ್ಯಾಗ್ನಲ್ಲಿ ಮೊಬೈಲ್ ಫೋನ್ಗಳು, ಆಭರಣ ಪತ್ತೆಯಾಗಿದೆ. ಅದರ ಬಗ್ಗೆ ಕೇಳಿದಾಗ ಮೊದಲಿಗೆ ತನ್ನ ಹೆಂಡತಿಯ ಆಭರಣ ಎಂದು ಸ್ವರಾಜ್ ಕಥೆ ಕಟ್ಟಿದ್ದ. ಅನಂತರ ಪೊಲೀಸರ ವಿಚಾರಣೆಯಲ್ಲಿ ಕಳ್ಳತನ ಮಾಡುತ್ತಿರೋದಾಗಿ ತಪ್ಪೊಪ್ಪಿಕೊಂಡರು. ಆರೋಪಿಯ ವಿಚಾರಣೆಯಿಂದ ಒಟ್ಟು 5 ಪ್ರಕರಣಗಳು ಬೆಳಕಿಗೆ ಬಂದಿದೆ. ಒಟ್ಟು 3 ಲಕ್ಷದ 33 ಸಾವಿರ 489 ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಯನ್ನ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.