Ad Widget .

ಕುಮಾರಪರ್ವತ ಚಾರಣಕ್ಕೆ ನಿರ್ಬಂಧ| ಅರಣ್ಯ ಸಚಿವರ ಗಮನ ಸೆಳೆದ ಛಾಯಾಗ್ರಾಹಕ ಅನೂಪ್

ಸಮಗ್ರ ನ್ಯೂಸ್: ಪುಷ್ಪಗಿರಿ ವಲಯದ ಕುಮಾರ ಪರ್ವತಕ್ಕೆ ಕಳೆದ ವಾರಾಂತ್ಯ ಚಾರಣಿಗರ ದಟ್ಟಣೆ ಹೆಚ್ಚಾಗಿದ್ದು, ಈ ಹಿನ್ನಲೆಯಲ್ಲಿ ಛಾಯಾಗ್ರಾಹಕ ಅನೂಪ್ ನರಿಯೂರು ಎಂಬ ಯುವಕ ಶೇರ್ ಮಾಡಿದ ವಿಡಿಯೋ ಅರಣ್ಯ ಸಚಿವರ ಗಮನ ಸೆಳೆದಿತ್ತು. ಈ ಹಿನ್ನಲೆಯಲ್ಲಿ ಚಾರಣ ನಿಯಂತ್ರಣಕ್ಕಾಗಿ ಫೆಬ್ರವರಿ 1ರಿಂದ ಪ್ರವೇಶಾವಕಾಶ ಬಂದ್ ಮಾಡಿ ಮುಂದಿನ ಆಕ್ಟೊಬರ್ ನಿಂದ ಆನ್ ಲೈನ್ ಬುಕ್ಕಿಂಗ್ ಆರಂಭಿಸಲು ಅರಣ್ಯ ಇಲಾಖೆ ಮಹತ್ವ ತೀರ್ಮಾನ ಕೈಗೊಂಡಿದೆ.

Ad Widget . Ad Widget .

ಚಾರಣಿಗರ ದಂಡೇ ಕುಮಾರ ಪರ್ವತದತ್ತ ಲಗ್ಗೆ ಇಟ್ಟಿದ್ದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಿದ್ದ ಛಾಯಾಚಿತ್ರಕಾರ ಅನೂಪ್ ನರಿಯೂರು ಅವರು ಅರಣ್ಯ ಸಚಿವ ಈಶ್ವರ ಖಂಡ್ರೆ ಗಮನ ಸೆಳೆದಿದ್ದರು. ಹದಿಹರೆಯದ ಯುವಕ ಯುವತಿಯರನ್ನೊಳಗೊಂಡ ಜನದಟ್ಟಣೆ ಬಗೆಗಿನ ವಿಡಿಯೋ ಸಾಕಷ್ಟು ವೈರಲ್ ಆಗಿದ್ದು ಮಾತ್ರವಲ್ಲದೇ ಅನೂಪ್ ಅವರು ಯುವ ಸಮೂಹದ ದಟ್ಟಣೆ ಬಗ್ಗೆ ಪರಿಸರ ಮಾರಕ ಮಾತ್ರವಲ್ಲದೇ ಮೋಜು‌ಮಸ್ತಿಯಂತಹ ಅನೈತಿಕ ಕೃತ್ಯಗಳ ಎಲ್ಲೆ ಮೀರುವ ಬಗೆಗಿನ ಲೇಖನವನ್ನು ಜಾಲತಾಣದಲ್ಲಿ ಬರೆದುಕೊಂಡಿದ್ದು ಸಾಕಷ್ಟು ವೈರಲ್ ಆಗಿತ್ತು.

Ad Widget . Ad Widget .

ಇದರ ಪರಿಣಾಮ ಸಂಬಂಧಿತ ಇಲಾಖೆಗಳು ಗಮನಹರಿಸುವಂತಾಗಿತ್ತು.
ಇದೀಗ ಅರಣ್ಯ ಇಲಾಖೆ ತುರ್ತಾಗಿ ಗಮನಹರಿಸಿ ಕ್ರಮ ಕೈಗೊಂಡಿದೆ. ಪ್ರತಿನಿತ್ಯ ಪುಷ್ಪಗಿರಿ ಮತ್ತು ಸುಬ್ರಹ್ಮಣ್ಯ ವಲಯ ಕಡೆಯಿಂದ 600 ಮಂದಿ ಚಾರಣಿಗರಿಗೆ ಮಾತ್ರ ಅವಕಾಶ ಕಲ್ಪಿಸಿದೆ. ಸರ್ಕಾರದ ಕ್ರಮಕ್ಕೆ ಪರಿಸರ ಪ್ರೇಮಿಗಳು ಕೂಡಾ ಸಂತಸ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಚಾರಣ ಮಾಡಿರುವ ಅನೂಪ್ ಚಾರಣಿಗರು ಎಸೆದ ಬಾಟಲಿ ಹಾಗೂ ಪ್ಲಾಸ್ಟಿಕ್ ವಸ್ತುಗಳನ್ನು ತಮ್ಮ ಗೆಳೆಯರ ಜೊತೆಗೂಡಿ ಸಂಗ್ರಹಿಸಿದ್ದು, ಸ್ವಚ್ಛ ಕುಮಾರಪರ್ವತ ಯಾತ್ರೆಗೆ ಕೈ ಜೋಡಿಸಿದ್ದಾರೆ. ಇವರ ಕಾರ್ಯ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

Leave a Comment

Your email address will not be published. Required fields are marked *