ಸಮಗ್ರ ನ್ಯೂಸ್: ಸುಳ್ಯ ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಸೇವಾ ಸಮಿತಿ ಮೂರುಕಲ್ಲಡ್ಕ ಮತ್ತು ಅಯ್ಯನಕಟ್ಟೆಯಲ್ಲಿ ನಡೆದ ಶ್ರೀ ಇಷ್ಟದೇವತಾ ಉಳ್ಳಾಕುಲು ಹಾಗೂ ಸಪರಿವಾರ ದೈವಗಳ ಜಾತ್ರೋತ್ಸವ ಜ. 29ರಂದು ಸಂಪನ್ನಗೊಂಡಿತು.
ಮಧ್ಯಾಹ್ನದ ಬಳಿಕ ಕಲ್ಲಮಾಡದಲ್ಲಿ ಶಿರಾಡಿ ದೈವದ ದೊಂಪದ ಬಲಿನೇಮ ನಡೆದು ಮಾರಿ ಹೊರಟು, ಸಂಜೆಯ ವೇಳೆ ಬೆಳ್ಳಾರೆ ಸಮೀಪದ ತಂಬಿನಮಕ್ಕಿಯಲ್ಲಿ ಗೌರಿ ಹೊಳೆಯ ಬಳಿ ಬಲಿ ಸಮರ್ಪಣೆಯಾಗಿ ನಾಲ್ಕುದಿನಗಳ ಅಯ್ಯನಕಟ್ಟೆ ಜಾತ್ರೆ ಸಂಪನ್ನಗೊಂಡಿತು.
ಜ.29ರಂದು ಬೆಳಿಗ್ಗೆ ತಂಟೆಪಾಡಿಯಿಂದ ಶಿರಾಡಿ ದೈವದ ಭಂಡಾರ, ಕಳಂಜ ಗುತ್ತಿನಿಂದ ಧೂಮಾವತಿ ದೈವದ ಬಂಡಾರ ಮತ್ತು ಬಾಳಿಲ ಮೂರುಕಲ್ಲಡ್ಕ ದೈವಸ್ಥಾನದಿಂದ ಕೊಡಮಣಿತ್ತಾಯ ದೈವದ ಭಂಡಾರ ಆಗಮಿಸಿತು. ಬಳಿಕ ಕಲ್ಲಮಾಡದಲ್ಲಿ ಕೊಡಮಣಿತ್ತಾಯ, ಧೂಮಾವತಿ, ಶಿರಾಡಿ ದೈವಗಳ ನರ್ತನ ಸೇವೆ, ಬೂಳ್ಯ ವಿತರಣೆ ನಡೆಯಿತು.