Ad Widget .

ಪಂಜ: ಫೆ. 1ರಿಂದ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಾಲಯದ ವರ್ಷಾಷಧಿ ಜಾತ್ರೋತ್ಸವ

ಸಮಗ್ರ ನ್ಯೂಸ್: ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ಸಾವಿರ ಸೀಮೆ ಶ್ರೀ ದೇವರ ವರ್ಷಾಷಧಿ ಜಾತ್ರಾ ಮಹೋತ್ಸವವು ಫೆ. 1ರಿಂದ ಫೆ. 9ರವರೆಗೆ ನಡೆಯಲಿದೆ.

Ad Widget . Ad Widget .

ಫೆ. 1ರಂದು ಸಂಜೆ 6.00ಕ್ಕೆ ತಂತ್ರಿಗಳ ಆಗಮನ, ಪೂರ್ಣಕುಂಭ ಸ್ವಾಗತ ರಾತ್ರಿ ಗಂಟೆ 7.00ಕ್ಕೆ ಧ್ವಜಾರೋಹಣ, ಫೆ. 2ರಂದು ಬೆಳಿಗ್ಗೆ ಗಂಟೆ 7.00ಕ್ಕೆ ನಾಗತೀರ್ಥದ ಮೂಲಸ್ಥಾನ ಬಂಟಮಲೆಯಿಂದ ಶ್ರೀ ದೇವಾಲಯಕ್ಕೆ ತೀರ್ಥ ತರುವುದು, ಮಹಾಪೂಜೆ, ನಿತ್ಯ ಬಲಿ. ಫೆ. 3ರಂದು ಮಧ್ಯಾಹ್ನ ಮಹಾಪೂಜೆ, ನಿತ್ಯ ಬಲಿ, ಸಂಜೆ ಗಂಟೆ 4.30ರಿಂದ ಹಸಿರು ಕಾಣಿಕೆಯನ್ನು ಮೆರವಣಿಗೆಯಲ್ಲಿ ಪುತ್ಯ ಸತ್ಯಕಟ್ಟೆಯಿಂದ ದೇವಳಕ್ಕೆ ತರುವುದು, ಸಂಜೆ ಗಂಟೆ 6.00ರಿಂದ ಉಗ್ರಾಣ ತುಂಬಿಸುವುದು. ದಂಡಮಾಲೆ ಹಾಕಿ ಬಲಿ ಹೊರಡುವುದು, ಬೇತಾಳಗಳು ಇಳಿಯುವುದು, ಅನ್ನಸಂತರ್ಪಣೆ ನಡೆಯಲಿದೆ.

Ad Widget . Ad Widget .

ಫೆ.4ರಂದು ಬೆಳಗ್ಗೆ ಶ್ರೀ ದೇವರ ಉತ್ಸವ, ಮಧ್ಯಾಹ್ನ ಮಹಾಪೂಜೆ, ಉತ್ಸವ, ಅನ್ನಸಂತರ್ಪಣೆ, ಫೆ. 5ರಂದು ಪೂರ್ವಾಹ್ನ ಶ್ರೀ ದೇವರ ಬಲಿ ಹೊರಟು ಗಂಟೆ 10.30ರಿಂದ ದರ್ಶನ ಬಲಿ, ಬಟ್ಟಲು ಕಾಣಿಕೆ, ಅನ್ನಸಂತರ್ಪಣೆ, ರಾತ್ರಿ ದೀಪೋತ್ಸವ, ಮಹಾಪೂಜೆ, ಶ್ರೀ ದೇವರ ಬಲಿ ಹೊರಟು ವಸಂತ ಕಟ್ಟೆಪೂಜೆ, ಶಿರಾಡಿ, ರುದ್ರಚಾಮುಂಡಿ ಮತ್ತು ಕಾಚುಕುಜುಂಬ ದೈವಗಳ ನರ್ತನ ಸೇವೆ, ಶ್ರೀ ದೇವರ ಉತ್ಸವ, ಅನ್ನಸಂತರ್ಪಣೆ. ಫೆ. 6ರಂದು ಬೆಳಗ್ಗೆ ಶ್ರೀ ದೇವರ ಬಲಿ ಹೊರಟು ಉತ್ಸವ, ಮಧ್ಯಾಹ್ನ ಮಹಾಪೂಜೆ, ರಾತ್ರಿ ಗಂಟೆ 9.30ರಿಂದ ಬ್ರಹ್ಮ ರಥೋತ್ಸವ, ಕಾಚುಕುಜುಂಬ ದೈವದ ನರ್ತನ ಸೇವೆ, ಮಹಾಪೂಜೆ, ಶ್ರೀ ಭೂತಬಲಿ, ಶಯನೋತ್ಸವ, ಕವಾಟ ಬಂಧನ, ಅನ್ನಸಂತರ್ಪಣೆ. ಫೆ. 7ರಂದು ಮುಂಜಾನೆ ಗಂಟೆ 6-00ಕ್ಕೆ ಕವಾಟೋದ್ಘಾಟನೆ, ದೇವರಿಗೆ ಅಭಿಷೇಕ, ಬೆಳಿಗ್ಗೆ ಗಂಟೆ 9.00ರಿಂದ ಬಲಿ ಹೊರಟು ಅವಕೃತ ಸ್ನಾನ, ಧ್ವಜಾವರೋಹಣ, ಮಹಾಪೂಜೆ, ಅನ್ನಸಂತರ್ಪಣೆ, ಅಪರಾಹ್ನ ಗಂಟೆ 4-00ಕ್ಕೆ ದೇಗುಲದಿಂದ ಶ್ರೀ ಕಾಚುಕುಜುಂಬ ಉಳ್ಳಾಕುಲು ದೈವಗಳ ಭಂಡಾರವನ್ನು ಮೆರವಣಿಗೆ ಮೂಲಕ ಮೂಲಸ್ಥಾನ ಗರಡಿಬೈಲಿಗೆ ಹೋಗಿ ಧ್ವಜಾರೋಹಣ, ಶ್ರೀ ಕಾಚುಕುಜುಂಬ ದೈವದ ನೇಮ. ಪ್ರಸಾದ ವಿತರಣೆ, ಅನ್ನಸಂತರ್ಪಣೆ. ಫೆ. 8ರಂದು ಮುಂಜಾನೆ ಗಂಟೆ 6.30ಕ್ಕೆ ಗರಡಿಬೈಲಿನ ಮೂಲ ನಾಗನ ಕಟ್ಟೆಯಲ್ಲಿ ತಂಬಿಲ ಹಾಗೂ ಬೆಳಗ್ಗೆ ಗಂಟೆ 7.30ರಿಂದ ಶ್ರೀ ಉಳ್ಳಾಕುಲು ದೈವದ ನೇಮ. ಪ್ರಸಾದ ವಿತರಣೆ, ಧ್ವಜಾವರೋಹಣ, ಶ್ರೀ ದೇವಳದಲ್ಲಿ ಸಂಪ್ರೋಕ್ಷಣೆ, ಮಹಾಪೂಜೆ, ವೈದಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ಶಿರಾಡಿ ದೈವದ ಭಂಡಾರ ಬರುವುದು. ಫೆ. 9ರಂದು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಪೂಜೆ ಹಾಗೂ ಶಿರಾಡಿ ದೈವದ ನೇಮ, ಅನ್ನಸಂತರ್ಪಣೆ ನಡೆಯಲಿದೆ.

ಫೆ. 22ರಂದು ರಾತ್ರಿ ಗಂಟೆ 7 ರಿಂದ ರಂಗಪೂಜೆ, ಬೀದಿನೇಮ, ಅನ್ನಸಂತರ್ಪಣೆ, ಫೆ. 23ರಂದು ಆದಿಬೈದರುಗಳ ನೇಮೋತ್ಸವ, ಅನ್ನಸಂತರ್ಪಣೆ, ಫೆ. 8ರಂದು ಮಹಾಶಿವರಾತ್ರಿ ಪ್ರಯುಕ್ತ ಭಜನೆ ಮತ್ತು ವಿಶೇಷ ಸೇವೆಗಳು ನಡೆಯಲಿದೆ.

Leave a Comment

Your email address will not be published. Required fields are marked *