Ad Widget .

ಹನುಮ ಧ್ವಜ ದಂಗಲ್| ಫೆ.9ರಂದು ಮಂಡ್ಯ ಬಂದ್ ಗೆ ಕರೆ

ಸಮಗ್ರ ನ್ಯೂಸ್: ನಿನ್ನೆಯಿಂದ ಶುರುವಾದ ಮಂಡ್ಯದ ಕೆರಗೋಡುವಿನಲ್ಲಿ ಹನುಮ ಧ್ವಜ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಮಂಡ್ಯದ ಕಾಂಗ್ರೆಸ್‌ ಶಾಸಕ ರವಿ ಗಣಿಗ ಅವರ ಫ್ಲೆಕ್ಸ್, ಬ್ಯಾನರ್ ಕಿತ್ತೆಸೆದು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Ad Widget . Ad Widget .

ಮಂಡ್ಯದ ಮಹಾವೀರ ಸರ್ಕಲ್​ನಲ್ಲಿ ಪಾದಯಾತ್ರೆ ವೇಳೆ ಬ್ಯಾನರ್​ ಬೆಂಕಿ ಹಚ್ಚುತ್ತಿದ್ದಂತೆಯೇ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಬ್ಬರು ಕಾರ್ಯಕರ್ತರ ತಲೆಗೆ ಗಾಯವಾಗಿದೆ. ಇದರಿಂದ ಮತ್ತಷ್ಟು ಆಕ್ರೋಶಗೊಂಡ ಕಾರ್ಯಕರ್ತರು ಬೆಂಗಳೂರು-ಮೈಸೂರು ಹಳೇ ಹೆದ್ದಾರಿಯಲ್ಲಿ ಕುಳಿತು ಪ್ರತಿಭಟನೆ ನಡೆಸಿದ್ದಾರೆ.

Ad Widget . Ad Widget .

ಮಂಡ್ಯ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ಮಾಡಲಾಗಿದ್ದು, ಈ ವೇಳೆ ಸಿ.ಟಿ ರವಿ, ಮಾಜಿ ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ಸಹ ಸ್ಥಳಕ್ಕಾಗಮಿಸಿ ಬಿಜೆಪಿ ಪ್ರತಿಭಟನೆಗೆ ಬೆಂಬಲ ನೀಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಸಿಟಿ ರವಿ, ನಾವು ಮನೆ ಮನೆ ಮೇಲೆ ಹನುಮ ಧ್ವಜ ಹಾರಿಸುತ್ತೇವೆ. ತಾಕತ್ ಇದ್ದರೆ ಇದನ್ನು ತಡೆಯಿರಿ. ನಮ್ಮ ಹೋರಾಟ ಹಿಂದೂ ವಿರೋಧಿಗಳ ಮೇಲೆ. ಧ್ವಜ ತೆಗೆದ ಕಾಂಗ್ರೆಸ್ ಸರ್ಕಾರ ರಾಜಕೀಯವಾಗಿ ಭಸ್ಮ ಆಗಬೇಕು. ಹನುಮನ ಬಾಲಕ್ಕೆ ಬೆಂಕಿ ಹಾಕಿದ್ದರಿಂದ ಲಂಕೆ ಭಸ್ಮ ಆಯ್ತು. ಲಂಕೆಗೆ ಆದ ಪರಿಸ್ಥಿತಿ ಈ ಸರ್ಕಾರಕ್ಕೂ ಆಗುತ್ತೆ. ಯಾರನ್ನು ತೃಪ್ತಿ ಪಡಿಸಲು ಬಾವುಟ ತೆಗೆದ್ರಿ. ನಮ್ಮ ಹೆಸರಿನಲ್ಲಿ ರಾಮ ಇದ್ದಾನೆ, ತಂದೆ ಹೆಸರಲ್ಲೂ ರಾಮ ಇದ್ದಾನೆ ಆಂದ್ರಿ. ನಿಮಗೆ ರಾಮ ಭಕ್ತಿ ಇಲ್ಲ ಎಂದು ನಿಮ್ಮ ಕೃತ್ಯ ತೋರಿಸಿದೆ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಕುಮಾರಸ್ವಾಮಿ ಮಾತನಾಡಿ ಸಿಎಂ ಸಿದ್ದರಾಮಯ್ಯನವ್ರೆ ಹೆಸರಲ್ಲಿ ರಾಮ ಇದ್ದರೆ ಸಾಲದು, ಶ್ರೀರಾಮನ ನಡವಳಿಕೆ ಇರಬೇಕು. ಈ ಪ್ರತಿಭಟನೆ ಇಲ್ಲಿಗೆ ಸೀಮಿತವಾಗಲ್ಲ ಎಂದು ಕಿಡಿಕಾರಿದರು. 30 ವರ್ಷದ ಹಿಂದೆ ಸಿದ್ದರಾಮಯ್ಯ ನವ್ರೆ ಧ್ವಜಸ್ತಂಭ ಉದ್ಘಾಟಿಸಿದರು ಅದರೆ ಈಗ ಅದಕ್ಕೆ ವಿರೋಧಿಯಾಗಿದ್ದಾರೆ. ಗ್ರಾಮದವರ ಭಾವನೆಗೆ ದಕ್ಕೆ ತಂದಿದ್ದಾರೆ. ಕೇಸರಿ ಕಂಡರೆ ಕಾಂಗ್ರೆಸ್ ನವರಿಗೆ ವಾಕರಿಕೆ ಬರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಎಂ ಸಾರ್ವಜನಿಕರ ಕ್ಷಮೆ ಕೇಳಬೇಕು. ನಿಮ್ಮ ತಪ್ಪಿಗೆ ಪ್ರಾಯಶ್ಚಿತ್ತವಾಗಿ ಸಾರ್ವಜನಿಕವಾಗಿ ಕ್ಷಮೆ ಕೇಳಿ ಮತ್ತೆ ಕೆರಗೋಡಿನಲ್ಲಿ ಹನುಮ ಧ್ವಜ ಹಾಕಿಸಬೇಕೆಂದು ಆಗ್ರಹಿಸಿದರು.

ಈ ವಿಚಾರವಾಗಿ ಫೆ.9 ರಂದು ಮಂಡ್ಯ ಬಂದ್ ಗೆ ಕರೆ ಕೊಟ್ಟಿದ್ದಾರೆ. ಹಾಗೇ ಇಂದಿನ ಪಾದಯಾತ್ರೆಯನ್ನು ಅಂತ್ಯ ಗೊಳಿಸಿದ್ದರು.

Leave a Comment

Your email address will not be published. Required fields are marked *