Ad Widget .

ಗೋಣಿಕೊಪ್ಪಲು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪ್ರಮೋದ್ ಗಣಪತಿ, ಉಪಾಧ್ಯಕ್ಷರಾಗಿ ಮಂಜುಳಾ ಆಯ್ಕೆ|ಹೆಚ್ಚಿನ ಸದಸ್ಯ ಬಲ ಹೊಂದಿದ ಬಿಜೆಪಿ ಅಧಿಕಾರ ಕಳೆದುಕೊಂಡಿದೆ

ಸಮಗ್ರ ನ್ಯೂಸ್: ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಎರಡನೇ ಅವಧಿಗೆ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕುಲ್ಲಚಂಡ ಪ್ರಮೋದ್ ಗಣಪತಿ ಚುನಾವಣೆಯಲ್ಲಿ ಆಯ್ಕೆಗೊಂಡಿದ್ದಾರೆ.

Ad Widget . Ad Widget .

ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮಂಜುಳ ಅವರು ಆಯ್ಕೆಗೊಂಡಿದ್ದಾರೆ. ಒಟ್ಟು 21 ಸದಸ್ಯರನ್ನು ಹೊಂದಿರುವ ಗ್ರಾಮ ಪಂಚಾಯಿತಿಯಲ್ಲಿ ಬಿಜೆಪಿ ಬೆಂಬಲಿತ ಹನ್ನೆರಡು ಸದಸ್ಯರ ಬಲವಿದ್ದು ಎಲ್ಲಾ ಸದಸ್ಯರನ್ನು ರೆಸಾರ್ಟಿನಲ್ಲಿ ಒಟ್ಟಿಗೆ ಸೇರಿಸಿ ಇಂದು ಚುನಾವಣೆ ಸಂದರ್ಭ ಅವರೆಲ್ಲರನ್ನು ಕರೆತರಲಾಗಿತ್ತು. ಕಾಂಗ್ರೆಸ್ ಕಾಂಗ್ರೆಸ್ ಬೆಂಬಲಿತರು ಒಂಬತ್ತು ಸದಸ್ಯರ ಬಲವಿದ್ದು ಇಂದು ನಡೆದ ಚುನಾವಣೆಯಲ್ಲಿ ಕೆಲವು ಬಿಜೆಪಿ ಸದಸ್ಯರ ಮತದಿಂದ ಕಾಂಗ್ರೆಸ್ ಅಭ್ಯರ್ಥಿಗಳು ಆಯ್ಕೆಗೊಂಡಿದ್ದಾರೆ. ಪ್ರಮೋದ್ ಗಣಪತಿಯವರಿಗೆ 11 ಮತಗಳು ದೊರಕಿದರೆ, ರಾಜೇಶ್ ರವರಿಗೆ 10 ಮತ ದೊರಕಿದೆ.ಹಾಗೆ ಉಪಾಧ್ಯಕ್ಷ ಸ್ಥಾನಕ್ಕೆ ಮಂಜುಳಾ ರವರಿಗೆ 11 ಮತ ಗೀತಾ ರವರಿಗೆ 9 ಮತ ದೊರಕಿದೆ ಒಂದು ಮತ ತಿರಸ್ಕಾರಗೊಂಡಿದೆ. ಕಾಂಗ್ರೆಸ್ ನಾಯಕರ ತೆರೆಯ ಮರೆಯ ಕಸರತ್ತು ಫಲ ನೀಡಿದೆ.

Ad Widget . Ad Widget .

Leave a Comment

Your email address will not be published. Required fields are marked *