Ad Widget .

ಬಿಗ್ ಬಾಸ್ ಸೀಸನ್ 10 ಗ್ರ್ಯಾಂಡ್ ಫಿನಾಲೆ| ಕಾರ್ತಿಕ್ ವಿನ್ನರ್, ರನ್ನರ್ ಅಪ್ ಆದ ಪ್ರತಾಪ್

ಸಮಗ್ರ ನ್ಯೂಸ್: ಬಿಗ್​ಬಾಸ್ ಕನ್ನಡ ಸೀಸನ್ 10 ಮುಗಿದಿದ್ದು, ಕಠಿಣ ಸ್ಪರ್ಧೆಯ ನಡುವೆ ಕಾರ್ತಿಕ್ ಮಹೇಶ್ ಗೆಲುವು ಸಾಧಿಸಿದ್ದಾರೆ. 112 ದಿನಗಳ ಸುದೀರ್ಘ ಪಯಣ ಇಂದು ಅಂತ್ಯವಾಗಿದೆ. ಬಿಗ್​ಬಾಸ್ ಗೆಲ್ಲಲು 16 ಮಂದಿಯಿಂದ ಪ್ರಾರಂಭವಾದ ಓಟದಲ್ಲಿ ಕೊನೆಯದಾಗಿ ಗೆಲುವು ಕಂಡಿರುವುದು ಕಾರ್ತಿಕ್ ಮಹೇಶ್.

Ad Widget . Ad Widget .

ಕೊನೆಯ ಕ್ಷಣದಲ್ಲಿ ಬಿಗ್​ಬಾಸ್​ ಮನೆಗೆ ಬರಲು ತೆಗೆದುಕೊಂಡ ನಿರ್ಣಯ ಅವರ ಕೈಹಿಡಿದಿದೆ. ಹಲವು ಏಳು-ಬೀಳುಗಳಿದ್ದ ಪಯಣದಲ್ಲಿ ಕಾರ್ತಿಕ್ ಮಹೇಶ್ ಗಮ್ಯ ತಲುಪಿದ್ದಾರೆ. ಅವರಿಗೆ ಬರೋಬ್ಬರಿ 2,97,39,904 ಮತ ಗಳಿಸಿದ್ದಾರೆ. ಹಲವು ಏಳು-ಬೀಳು, ನೋವು, ಬೇಸರ, ಖುಷಿಗಳನ್ನು ಸಹ ಕಂಡಿದ್ದ ಡ್ರೋನ್ ಪ್ರತಾಪ್ ರನ್ನರ್ ಅಪ್ ಆಗಿದ್ದಾರೆ.

Ad Widget . Ad Widget .

ಸ್ವತಃ ಕಾರ್ತಿಕ್ ಮಹೇಶ್ ಹೇಳಿಕೊಂಡಿರುವಂತೆ ಬಿಗ್​ಬಾಸ್​ಗೆ ಬರುವ ನಿರ್ಧಾರವನ್ನು ಒಂದೇ ದಿನದಲ್ಲಿ ತೆಗೆದುಕೊಂಡು ಅವರು ಬಿಗ್​ಬಾಸ್​ಗೆ ಬಂದರಂತೆ. ಆ ಆತುರದ ನಿರ್ಧಾರ ಅವರಿಗೆ ಗೆಲುವು ತಂದುಕೊಟ್ಟಿದೆ. ಆರನೇ ಕಂಟೆಸ್ಟೆಂಟ್ ಆಗಿ ಕಷ್ಟದಲ್ಲೇ ಕಾರ್ತಿಕ್ ಮಹೇಶ್ ಫಿನಾಲೆ ವಾರಕ್ಕೆ ಬಂದಿದ್ದರು. ಫಿನಾಲೆ ವಾರದಲ್ಲಿ ಯಾರು ಮನೆಯಿಂದ ಹೊರಗೆ ಹೋಗುತ್ತಾರೆ ಎಂದಾಗ ಬಹುತೇಕರು ಕಾರ್ತಿಕ್ ಹೆಸರನ್ನು ಹೇಳಿದ್ದರು. ಆದರೆ ಅದೆಲ್ಲವೂ ಸುಳ್ಳಾಗಿದೆ.

Leave a Comment

Your email address will not be published. Required fields are marked *