Ad Widget .

ಪೆರಾಜೆ ಕುಂಬಳಚೇರಿ ಶಾಲಾ ಅಮೃತಮಹೋತ್ಸವ|ಇಂದಿನ ಮಕ್ಕಳೇ ದೇಶದ ಭವಿಷ್ಯ: ಶಾಸಕ ಎ.ಎಸ್.ಪೊನ್ನಣ್ಣ

ಸಮಗ್ರ ನ್ಯೂಸ್: ಪೆರಾಜೆಯ ಕುಂಬಳಚೇರಿ ಸರಕಾರಿ ಹಿ.ಪ್ರಾ.ಶಾಲಾ ಅಮೃತಮಹೋತ್ಸವ ಸಮಿತಿ ವತಿಯಿಂದ ಜ.27 ರಂದು ನಡೆಯಿತು.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಕಾರ್ಯಕ್ರಮವನ್ನು ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣಅವರು ಉದ್ಘಾಟಿಸಿ ಸರಕಾರಿ ಶಾಲೆಗಳು ದೇಶಕ್ಕೆ ದೊಡ್ಡ ಕೊಡುಗೆ ನೀಡಿದೆ. ಸರಕಾರಿ ಶಾಲೆಗಳಲ್ಲಿ ಓದುವ ಮಕ್ಕಳು ಅತೀ ಬುದ್ಧಿವಂತರು. ಅವರನ್ನು ಸ್ವತಂತ್ರ ಆಲೋಚನಾ ಶಕ್ತಿ, ಸಾಮರ್ಥ್ಯಶಕ್ತಿಯನ್ನು ಹೆಚ್ಚಿಸಲು, ಯಶಸ್ವಿ ಕಂಡರೂ ಏಳು-ಬೀಳುಗಳನ್ನು ಕಾಣುವಂತೆ ಮಾಡಿ, ಸಮಾಜಕ್ಕೆ ಪೂರಕವಾಗಿ ಮಕ್ಕಳನ್ನು ಪೋಷಿಸುವ ಜವಾಬ್ದಾರಿ ಪೋಷಕರಿಗೆ ಇದೆ. ಜತೆಗೆ ಮಕ್ಕಳನ್ನು ತಿದ್ದಿ-ತೀಡಿ ಒಂದು ರೂಪವನ್ನು ಕೊಡುವ ಜವಾಬ್ದಾರಿ ಶಿಕ್ಷಕರಿಗೆ ಇದೆ. ಈ ರೀತಿ ರೂಪುಗೊಂಡ ಮಕ್ಕಳೇ ದೇಶದ ಭವಿಷ್ಯ ಎಂದು ಹೇಳಿದರು.

Ad Widget . Ad Widget . Ad Widget .

ಮುಖ್ಯಅತಿಥಿಗಳಾಗಿ ಪೆರಾಜೆ ಗ್ರಾ.ಪಂ.ಅಧ್ಯಕ್ಷೆ ಚಂದ್ರಕಲಾ ಬಳ್ಳಡ್ಕ, ಮುಖ್ಯ ಭಾಷಣಗಾರರಾಗಿ ವೆಂಕಟರಮಣ ರಾವ್ ಮಂಕುಡೆ ಭಾಗವಹಿಸಿದರು. ವೇದಿಕೆಯಲ್ಲಿ ಗ್ರಾ.ಪಂ.ಸದಸ್ಯರಾದ ಉದಯಚಂದ್ರ ಕುಂಬಳಚೇರಿ, ಪ್ರವೀಣ್ ಮಜಿಕೋಡಿ, ಪೂರ್ಣಿಮ ಕುಂಡಾಡು ಇದ್ದರು. ಭಾಗವಹಿಸಿದರು.
ಎಸ್.ಡಿ.ಎಂ.ಸಿ, ಅಮೃತಮಹೋತ್ಸವ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಮುಖ್ಯಶಿಕ್ಷಕರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಅಮೃತಮಹೋತ್ಸವ ಸಮಿತಿ ಅಧ್ಯಕ್ಷೆ ಪ್ರಮೀಳ ಭಾರಧ್ವಾಜ್ ಬಂಗಾರಕೋಡಿ, ಮಾಜಿ ಶಾಸಕ ಕೆ.ಜಿ.ಬೋಪಯ್ಯ, ಗ್ರಾ.ಪಂ.ಉಪಾಧ್ಯಕ್ಷ ನಂಜಪ್ಪ ನಿಡ್ಯಮಲೆ, ಕೊಡಗು ಆಡಳಿತ ಮತ್ತು ಅಭಿವೃದ್ಧಿ ಉಪನಿರ್ದೇಶಕ ಚಂದ್ರಕಾಂತ್, ಮಡಿಕೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಬಿ.ಸಿ.ದೊಡ್ಡೇಗೌಡ, ಪೆರಾಜೆ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹಾಗೂ ಅಮೃಮಹೋತ್ಸವ ಗೌರವಾಧ್ಯಕ್ಷ ನಾಗೇಶ್ ಕುಂದಲ್ಪಾಡಿ, ಪೆರಾಜೆ ಶ್ರೀಶಾಸ್ತಾವು ದೇವಳದ ಮೊಕ್ತೇಸರ ಜಿತೇಂದ್ರ ನಿಡ್ಯಮಲೆ, ಪೆರಾಜೆ ಗ್ರಾ.ಪಂ.ಸದಸ್ಯ ಹಾಗೂ ಅಮೃತ ಮಹೋತ್ಸವ ಸಮಿತಿ ಗೌರವ ಸಲಹೆಗಾರ ಸುರೇಶ್ ಪೆರುಮುಂಡ ಭಾಗವಹಿಸಿದರು.ಮನೋಜ್ ನಿಡ್ಯಮಲೆ, ಶಿಕ್ಷಕಿ ರೇಖಾ ಕಾರ್ಯಕ್ರಮ ನಿರೂಪಿಸಿದರು.

Leave a Comment

Your email address will not be published. Required fields are marked *