Ad Widget .

ಜ್ಞಾನವಾಪಿ ದೇಗುಲದ ಮೇಲೆ ಕನ್ನಡದ ಅಕ್ಷರ|ಮಸೀದಿ ಅಲ್ಲ ಮಂದಿರ ಅನ್ನೋದಕ್ಕೆ ನೂರಾರು ಸಾಕ್ಷ್ಯ..!

ಸಮಗ್ರ ನ್ಯೂಸ್: ಉತ್ತರಪ್ರದೇಶದ ವಾರಣಾಸಿಯಲ್ಲಿ ಇರುವ ಜ್ಞಾನವಾಪಿ ಮಸೀದಿ ಇರುವ ಜಾಗದಲ್ಲಿ ಹಲವು ಪ್ರಾಚೀನ ಕಾಲದ ಶಾಸನಗಳು ಪತ್ತೆಯಾಗಿವೆ. ಅದರಲ್ಲಿ ಕನ್ನಡದ ಶಾಸನವೂ ಇದೆ ಎಂಬ ವಿಚಾರ ಎಎಸ್‌ಐ (ASI) ವರದಿಯಿಂದ ಬಹಿರಂಗವಾಗಿದೆ. ಕನ್ನಡ ಬರಹವಿರುವ ಪ್ರೂಫ್‌ ಕೂಡ ಎಎಸ್‌ಐ ವರದಿಯಲ್ಲಿದೆ.

Ad Widget . Ad Widget .

ಜ್ಞಾನವಾಪಿ ಮಸೀದಿ ಸಮೀಕ್ಷೆಗೆ ಸಂಬಂಧಿಸಿದಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ವರದಿ ಈಚೆಗೆ ಬಹಿರಂಗವಾಗಿದೆ. ಮಸೀದಿ ಇರುವ ಜಾಗದಲ್ಲಿ ಸಿಕ್ಕ ಪ್ರಾಚೀನ ಶಾಸನದಲ್ಲಿ ‘ದೊಡ್ಡರಸಯ್ಯನ ನರಸಂಣನಭಿಂನಹ’ (ದೊಡ್ಡರಸಯ್ಯನ ನರಸಿಂಹನ ಭಿನ್ನಹ) ಎಂದು ಕನ್ನಡದಲ್ಲಿ ಬರಹವಿರುವ ಸಾಕ್ಷಿ ಕೂಡ ವರದಿಯಲ್ಲಿದೆ.

Ad Widget . Ad Widget .

ಎಎಸ್ಐ ವರದಿಯ ಪ್ರತಿಯನ್ನು ವಾದಿ ಹಾಗೂ ಪ್ರತಿವಾದಿಗಳಿಗೆ ನೀಡಿದ ಬೆನ್ನಲ್ಲೇ ಈ ವಾಗ್ವಾದ ಆರಂಭವಾಗಿದೆ. 17ನೇ ಶತಮಾನದಲ್ಲಿ ಮಸೀದಿ ನಿರ್ಮಾಣ ಮಾಡುವ ಮೊದಲು ಜ್ಞಾನವಾಪಿ ಜಾಗದಲ್ಲಿ ಹಿಂದೂ ಮಂದಿರ ಇತ್ತು, ದೇಗುಲದ ಒಟ್ಟು 34 ಶಾಸನಗಳು ಜ್ಞಾನವಾಪಿ ಸಮೀಕ್ಷೆಯಲ್ಲಿ ಪತ್ತೆಯಾಗಿದೆ. ಹಾಗೇ ಮಂದಿರದಲ್ಲಿ ಕನ್ನಡ, ತೆಲುಗು, ದೇವನಾಗರಿ ಶಾಸನಗಳು ಪತ್ತೆಯಾಗಿದೆ. ದೇಗುಲದಲ್ಲಿ ನೂರಾರು ಹಿಂದೂ ದೇವರುಗಳ ವಿಗ್ರಹಗಳು ಸಿಕ್ಕಿದ್ದು, ಗದೆ‌ ಎತ್ತಿದ ಆಂಜನೇಯ, ಶ್ರೀಕಾರ, ಶಿವಲಿಂಗ, ವಿಷ್ಣು, ಭಗ್ನಗೊಂಡ ಕೃಷ್ಣ ವಿಗ್ರಹ, ಮುರಿದ ಕೈ, ಭೂವರಾಹ, ಗಣೇಶ, 8ಶಿವಲಿಂಗ‌, ನಂದಿ, ದ್ವಾರಪಾಲಕ, ರಾಮ, ಹೀಗೆ ಅನೇಕ ದೇವರುಗಳ ಹೆಸರುಗಳಿವೆ. ತಾಮ್ರದ ನಾಣ್ಯ, ಹನುಮಾನ್ ಎಲ್ಲವೂ ಇದೆ ಎಂದು ಸಾಕ್ಷ್ಯಗಳು ದೊರೆತಿವೆ.

Leave a Comment

Your email address will not be published. Required fields are marked *