Ad Widget .

ವರದಕ್ಷಿಣೆಗಾಗಿ ಮಡದಿಯೊಂದಿಗೆ ಸಿನಿಮಾ ಡೈರೆಕ್ಟರ್ ಕಿರಿಕ್

ಸಮಗ್ರ ನ್ಯೂಸ್: (ಜ.28), ಚಿತ್ರ ನಿರ್ದೇಶಕ ಮಂಜುನಾಥ್‌ ಎಂಬುವರು ತಮ್ಮ ಪತ್ನಿಗೆ ವರದಕ್ಷಿಣೆಗಾಗಿ ಕಿರುಕುಳ ನೀಡಿದ್ದಾರೆ ಎಂಬ ಆರೋಪವೊಂದು ಕೇಳಿ ಬಂದಿದೆ.

Ad Widget . Ad Widget .

ಸಿನಿಮಾ ಡೈರೆಕ್ಟರ್ ಮಂಜುನಾಥ್‌ ವಿರುದ್ಧ ಪತ್ನಿ ಅಖಿಲಾ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಮಂಜುನಾಥ್‌ ಮತ್ತು ಅಖಿಲಾ ದಂಪತಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. 2021ರಲ್ಲಿ ಎರಡೂ ಕುಟುಂಬದವರನ್ನು ಒಪ್ಪಿಸಿ ಮಂಜುನಾಥ್‌ ಮತ್ತು ಅಖಿಲಾ ಮದುವೆಯಾಗಿದ್ದರು. ಮದುವೆ ಸಂದರ್ಭ ಮಂಜುನಾಥ್‌ಗೆ ಸುಮಾರು 1.5kg ಬೆಳ್ಳಿ ಹಾಗು ಚಿನ್ನಾಭರಣ ನೀಡಲಾಗಿತ್ತು. ಮದುವೆಯಾದ ಹೊಸತರಲ್ಲಿ ಚೆನ್ನಾಗಿಯೇ ಇದ್ದ ದಂಪತಿಗಳ ದಾಂಪತ್ಯದಲ್ಲಿ ಇತ್ತೀಚೆಗೆ ಬಿರುಕು ಬಿಟ್ಟಿತ್ತು ಎಂದು ಹೇಳಲಾಗುತ್ತಿದೆ.

Ad Widget . Ad Widget .

ಮಂಜುನಾಥ್ ಸಹೋದರಿ ಹೇಮಲತಾ ಅವರು ಅಖಿಲಾಗೆ ತವರಿನಿಂದ ಹಣ ತರುವಂತೆ ಪೀಡಿಸಿ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದರು ಹಾಗೂ ಮತ್ತು ದೈಹಿಕವಾಗಿ ಹಲ್ಲೆ ಮಾಡಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಪತಿ ಮಂಜುನಾಥ್, ಸಹೋದರಿ ಹೇಮಲತಾ, ಮತ್ತು ಅತ್ತೆ ವೆಂಕಟಲಕ್ಷಮ್ಮರ‌ ವಿರುದ್ಧ ಅಖಿಲಾ ದೂರು ನೀಡಿದ್ದಾರೆ.

30ಲಕ್ಷ ಹಣ ಖರ್ಜು ಮಾಡಿ ಮದುವೆ ಮಾಡಿಕೊಟ್ಟಿದ್ದಾರೆಂದು ಅಖಿಲಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಮಂಜುನಾಥ್‌ಗೆ ನಿರ್ದೇಶನ ಮಾಡಲು ಸಹ 10ಲಕ್ಷ ಹಣ ಕೊಟ್ಟಿದ್ದೇನೆಂದು ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಪ್ರೀತಿಸುವ ಸಂದರ್ಭದಲ್ಲಿ 2.20 ಲಕ್ಷ ಬೆಲೆ ಬಾಳುವ ಜಾವಾ ಬೈಕ್, 1.10 ಲಕ್ಷ ಮೌಲ್ಯದ ಮೊಬೈಲ್, 76 ಸಾವಿರ ಮೌಲ್ಯದ ಐಫೋನ್ ಕೊಡಿಸಿದ್ದೆ, ಇದೀಗ 30 ಲಕ್ಷ ಬೆಲೆ ಬಾಳುವ ಕಾರನ್ನು ಕೊಡಿಸುವಂತೆ ಟಾರ್ಚರ್ ನೀಡುತ್ತಿದ್ದಾರೆಂದು ಅಖಿಲಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪತ್ನಿ ಅಖಿಲಾ ದೂರಿನಮ್ವಯ ಮಂಜುನಾಥ್ ಸೋಮಕೇಶವ ರೆಡ್ಡಿ(ಮನ್ಸೂರೇ) ವಿರುದ್ಧ ಎಫ್ಐಆರ್ ದಾಖಲಾಗಿದೆ.

ಮಂಜುನಾಥ್ ಸೋಮಕೇಶವ ರೆಡ್ಡಿ(ಮನ್ಸೂರೇ) ಹಲವು ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ನಾಥಿಚರಾಮಿ, ಹರಿವು ಚಿತ್ರ ಸೇರಿದಂತೆ ಹಲವು ಚಿತ್ರಗಳನ್ನ ನಿರ್ದೇಶನ ಮಾಡಿದ್ದಾರೆ.

Leave a Comment

Your email address will not be published. Required fields are marked *