Ad Widget .

ಇಂದು ಬಿಗ್ ಬಾಸ್ ವಿನ್ನರ್ ಘೋಷಣೆ|ಟಾಪ್​ 5 ಸ್ಪರ್ಧಿಗಳು ಇವರೇ ನೋಡಿ…!

ಸಮಗ್ರ ನ್ಯೂಸ್: ಬಿಗ್ ಬಾಸ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಕ್ಷಣ ಇಂದು ಬಂದಿದೆ. ಹೌದು ನೂರಾರು ದಿನಗಳ ಕಾಲ ಕಿರುತೆರೆ ಪ್ರೇಕ್ಷಕರನ್ನು ರಂಜಿಸಿದ್ದ ‘ಬಿಗ್​ ಬಾಸ್​’ ರಿಯಾಲಿಟಿ ಶೋ ಈಗ ಪೂರ್ಣಗೊಳ್ಳುತ್ತಿದೆ. ಇಂದು ಝಗಮಗಿಸುವ ವೇದಿಕೆಯಲ್ಲಿ ಫಿನಾಲೆ ನಡೆಯಲಿದೆ.

Ad Widget . Ad Widget .

ಸದ್ಯಕ್ಕೆ ಈ ಕಾರ್ಯಕ್ರಮದಲ್ಲಿ ಟಾಪ್​ 5 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಆ ಐವರಲ್ಲಿ ಯಾರು ವಿನ್​ ಆಗುತ್ತಾರೆ ಎಂಬುದು ಇಂದು ರಾತ್ರಿ ಗೊತ್ತಾಗಲಿದೆ. ಕಿಚ್ಚ ಸುದೀಪ್​ ಅವರು ವಿನ್ನರ್​ ಹೆಸರು ಘೋಷಿಸಲಿದ್ದಾರೆ. ಅದರಲ್ಲೂ ಕನ್ನಡ, ಹಿಂದಿ ಬಿಗ್​ ಬಾಸ್​ನಲ್ಲಿ ಇಂದು ಯಾರು ವಿನ್ನರ್ ಎಂದು ಗೊತ್ತಾಗಲಿದೆ.

Ad Widget . Ad Widget .

ಕನ್ನಡ ಬಿಗ್​ ಬಾಸ್​ ಕಾರ್ಯಕ್ರಮದ 10ನೇ ಸೀಸನ್​ ಹಾಗೂ ಹಿಂದಿ ಬಿಗ್​ ಬಾಸ್​ನ 17ನೇ ಸೀಸನ್​ ಏಕಕಾಲಕ್ಕೆ ಮುಕ್ತಾಯ ಆಗುತ್ತಿದೆ. ಕನ್ನಡದಲ್ಲಿ ಸಂಗೀತಾ ಶೃಂಗೇರಿ, ಡ್ರೋನ್​ ಪ್ರತಾಪ್​, ವರ್ತೂರು ಸಂತೋಷ್​, ವಿನಯ್​ ಗೌಡ ಹಾಗೂ ಕಾರ್ತಿಕ್​ ಮಹೇಶ್​ ಅವರು ಫಿನಾಲೆಯ ಟಾಪ್​ 5 ಸ್ಪರ್ಧಿಗಳಾಗಿದ್ದಾರೆ. ಈ ಐವರಲ್ಲಿ ಒಬ್ಬರಿಗೆ ವಿಜಯಲಕ್ಷ್ಮೀ ಒಲಿಯಲಿದ್ದಾಳೆ. ಆ ಕ್ಷಣವನ್ನು ಕಣ್ತುಂಬಿಕೊಳ್ಳಲು ಕಿರುತೆರೆ ಪ್ರೇಕ್ಷಕರು ಕಾಯುತ್ತಿದ್ದಾರೆ.

Leave a Comment

Your email address will not be published. Required fields are marked *