Ad Widget .

ಸರಣಿ ರಜೆ ಹಿನ್ನಲೆ ಕುಮಾರಪರ್ವತ ಚಾರಣಕ್ಕೆ ಹರಿದುಬಂದ ಚಾರಣಿಗರ ದಂಡು !

Ad Widget . Ad Widget .

Ad Widget . Ad Widget .

ಸಮಗ್ರ ಸಮಾಚಾರ: ಸರಣಿ ರಜೆ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯ ಸಮೀಪವಿರುವ ಕುಮಾರಪರ್ವತ ಚಾರಣಕ್ಕೆ ಶುಕ್ರವಾರ ಚಾರಣಿಗರ ದಂಡೇ ಹರಿದು ಬಂದಿದೆ.

ಕುಮಾರ ಪರ್ವತ ಚಾರಣಕ್ಕೆ ವರ್ಷಂಪ್ರತಿ ಈ ಸಮಯದಲ್ಲಿ ಹೆಚ್ಚಿನ ಚಾರಣಿಗರು ಆಗಮಿಸುತ್ತಿರುತ್ತಾರೆ. ಶುಕ್ರವಾರದಿಂದ ರವಿವಾರದ ವರೆಗೆ ಸರಣಿ ರಜೆ ಇರುವುದರಿಂದ ಪ್ರಸ್ತುತ ಬಾರೀ ಸಂಖ್ಯೆಯ ಚಾರಣಿಗರು ಕುಮಾರ ಪರ್ವತ ಚಾರಣಕ್ಕೆ ಆಗಮಿಸಿದ್ದಾರೆ. ಸುಬ್ರಹ್ಮಣ್ಯದ ದೇವರಗದ್ದೆ ಬಳಿ ಪ್ರವೇಶ ಧ್ವಾರದ ಬಳಿ ಶುಕ್ರವಾರ ಬಾರೀ ದಟ್ಟನೆ ಕಂಡುಬಂತು. ಸಾಮನ್ಯ ರಜೆ ದಿನಗಳಿಂದಲೂ ಬಾರೀ ಹೆಚ್ಚಿನ ಚಾರಣಿಗರು ಆಗಮಿಸಿದ್ದರಿಂದ ದಟ್ಡಣೆ ಉಂಟಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿಗಳು ತಪಾಸಣೆ ನಡೆಸಿಯೇ ಚಾರಣಿಗರನ್ನು ಚಾರಣಕ್ಕೆ ತೆರಳಲು ಅವಕಾಶ ನೀಡಿದ್ದಾರೆ. ಮುಂದಿನ ಎರಡು ದಿನವೂ ಹೆಚ್ಚಿನ ಚಾರಣಿಗರ ಆಗಮನದ ನಿರೀಕ್ಷೆ ಅಂದಾಜಿಸಲಾಗಿದೆ. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲೂ ಭಕ್ತರ ದಟ್ಟನೆ ಕಂಡುಬಂದಿದೆ.

Leave a Comment

Your email address will not be published. Required fields are marked *