Ad Widget .

ಕೊಟ್ಟಿಗೆಹಾರ: ಎಣ್ಣೆ ಕುಡಿಯೋ ಆತುರದಲ್ಲಿ ಎಟಿಎಂನಲ್ಲಿ ಕಾರ್ಡ್ ಬಿಟ್ಟು ಹೋಗುತ್ತಿರುವ ಜನ…!

ಸಮಗ್ರ ನ್ಯೂಸ್: ಕೊಟ್ಟಿಗೆಹಾರ, ಮದ್ಯದ ಮತ್ತಲ್ಲಿ ಎಟಿಎಂನಲ್ಲಿ ಹಣ ತೆಗೆಯುವ ಜನರು ಕುಡಿಯೋ ಆತುರದಲ್ಲಿ ಎಟಿಎಂ ನಲ್ಲಿ ಕಾರ್ಡ್ ಬಿಟ್ಟು ಹೋಗುವ ಖಯಾಲಿ ಶುರು ಮಾಡಿಕೊಂಡಿದ್ದಾರೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಕೈಗೆ ಹಣ ಬಂದ ತಕ್ಷಣ ಎಣ್ಣೆ ಕುಡಿಯೋ ಆತುರದಲ್ಲಿ ಎಟಿಎಂ ಮೆಷಿನ್ ನಲ್ಲೇ ಕಾರ್ಡ್ ಬಿಟ್ಟು ಹೋಗುತ್ತಿದ್ದಾರೆ‌. ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಬಣಕಲ್ ಹೋಬಳಿ ಕೇಂದ್ರದಲ್ಲಿ ಜ. 26ರಂದು ಒಂದೇ ದಿನ ಸುಮಾರು 14 ಕಾರ್ಡ್ ಬಿಟ್ಟು ಹೋಗಿದ್ದು, ಅದರಲ್ಲೂ ಸಂಜೆ ವೇಳೆಯೇ ಹೆಚ್ಚು ಕಾರ್ಡು ಬಿಟ್ಟು ಹೋಗಿದ್ದಾರೆ.

Ad Widget . Ad Widget . Ad Widget .

ಬಣಕಲ್ ಗ್ರಾಮದ ಕರ್ನಾಟಕ ಬ್ಯಾಂಕ್ ಎಟಿಎಂ ಮುಂಭಾಗವೇ ಬಾರ್ ಅಂಡ್ ರೆಸ್ಟೋರೆಂಟ್ ಇದೆ. ಬಾರ್ ಗೆ ಬರುವ ಮದ್ಯಪ್ರಿಯರು ಕುಡಿದು ಟೈಟಾದ ಬಳಿಕ ಮತ್ತಷ್ಟು ಎಣ್ಣೆ ಬೇಕು ಅಂತ ಎಟಿಎಂ ಹೋಗಿ ಹಣ ತೆಗೆದುಕೊಂಡು ಕಾರ್ಡ್ ಅಲ್ಲೇ ಬಿಟ್ಟು ಮತ್ತೆ ಬಾರ್ ನತ್ತ ಮುಖ ಮಾಡುತ್ತಿದ್ದಾರೆ. ಎಟಿಎಂ ಗೆ ಹೋಗುವ ಇತರೇ ಜನ ಎಟಿಎಂ ತೆಗೆದು ಅಲ್ಲೇ ಇಟ್ಟು ಅವರು ಹಣ ತೆಗೆದುಕೊಂಡು ಹೋಗುತ್ತಿದ್ದಾರೆ. ಹೀಗೆ ಎಟಿಎಂ ಕೇಂದ್ರದ ರ್ಯಾಲ್ ಮೇಲೆ ಜೋಡಿಸಿದ ಎಟಿಎಂಗಳ ಸಂಖ್ಯೆ 10ಕ್ಕೂ ಹೆಚ್ಚು. ಸ್ಥಳಿಯರು ಬ್ಯಾಂಕಿಗೆ ಹೋದಾಗ ಎಲ್ಲವನ್ನೂ ಕೈನಲ್ಲಿ ಹಿಡಿದು ಫೋಟೋ ತೆಗೆಸಿಕೊಂಡು ಮದ್ಯಪ್ರಿಯರ ಎಣ್ಣೆ ಪ್ರೀತಿಯನ್ನ ವ್ಯಂಗ್ಯವಾಡಿದ್ದಾರೆ. ಹೀಗೆ ಬಿಟ್ಟು ಹೋಗುವವರು ಮರು ದಿನ ಬಂದು ಎಟಿಎಂ ನಲ್ಲಿ ಕಾರ್ಡ್ ಹುಡುಕಾಡಿದ ಪ್ರಸಂಗವೂ ನಡೆದಿದೆ. ಸಿಕ್ಕರೆ ಓಕೆ, ಸಿಗದಿದ್ದರೆ ಮತ್ತೆ ಬ್ಯಾಂಕಿಗೆ ಹೋಗಿ ಎಟಿಎಂ ಲಾಕ್ ಮಾಡಿಸಿ ಬೇರೆ ಎಟಿಎಂ ಬರೋವರೆಗೂ ಕಾಯುತ್ತಾರೆ. ಈ ರೀತಿಯ ಸನ್ನಿವೇಶಗಳು ನಡೆದಿವೆ.

ಆದರೆ, ಹೊತ್ತಲ್ಲದ ಹೊತ್ತಲ್ಲಿ ಎಮರ್ಜೆನ್ಸ್ ಹಣ ಬೇಕಾದಾಗ ಖಾತೆಯಲ್ಲಿ ಹಣ ಇದ್ದರೂ ತೆಗೆಲು ಆಗದೆ ಪರದಾಡಿದವರು ಇದ್ದಾರೆ. ಇವತ್ತು ತಂತ್ರಜ್ಞಾನ ಸಾಕಷ್ಟು ಮುಂದುವರೆದಿದೆ. ಎಣ್ಣೆ ಕುಡಿಯೋ ಆಸೆಗೆ ಕಾರ್ಡ್ ಬಿಟ್ಟು ಹೋಗೋರ ಕಾರ್ಡ್ ಗಳನ್ನ ಬೇರೆಯವರು ತೆಗೆದುಕೊಂಡು ಖಾತೆಯಲ್ಲಿರುವ ಹಣವನ್ನ ತೆಗೆದುಕೊಳ್ಳುವ ಸಾಧ್ಯತೆಯೂ ಹೆಚ್ಚಿರುತ್ತೆ. ಹಾಗಾಗಿ, ಮದ್ಯ ಪ್ರಿಯರು ಮದ್ಯ ಕುಡಿಯಲಿ. ಆದರೆ, ತಮ್ಮ ವಸ್ತುಗಳ ಬಗ್ಗೆ ಎಚ್ಚರವಿರಲಿ ಎಂದು ಸ್ಥಳೀಯರು ಕೂಡ ಎಚ್ಚರಿಸಿದ್ದಾರೆ.

Leave a Comment

Your email address will not be published. Required fields are marked *