ಪುತ್ತೂರು: ಉದ್ಯೋಗದ ಜಾಹೀರಾತು ನಂಬಿ ₹ 2.25ಲಕ್ಷ ಕಳೆದುಕೊಂಡ ಯುವತಿ

ಸಮಗ್ರ ನ್ಯೂಸ್: ಪತ್ರಿಕೆಯೊಂದರಲ್ಲಿ ಪ್ರಕಟಗೊಂಡಿದ್ದ ಉದ್ಯೋಗದ ಜಾಹೀರಾತನ್ನು ನಂಬಿ, ಉದ್ಯೋಗದ ಆಸೆಯಿಂದ ವಂಚಕರ ಖಾತೆಗೆ ₹ 2.25 ಲಕ್ಷ ಹಣ ಜಮೆ ಮಾಡಿ ಯುವತಿಯೊಬ್ಬರು ಮೋಸ ಹೋಗಿದ್ದಾರೆ. ಆರ್ಯಾಪು ಗ್ರಾಮದ ಒಳತ್ತಡ್ಕ ನಿವಾಸಿ ನಿಶ್ಮಿತಾ (24) ವಂಚನೆಗೊಳಗಾದ ಯುವತಿ.

Ad Widget ... ..

ಪತ್ರಿಕೆ ಜಾಹೀರಾತಿನಲ್ಲಿ ನೀಡಲಾಗಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ವಿಚಾರಿದ ಯುವತಿ, ಅವರು ಸೂಚಿಸಿದಂತೆ 2023ರಜೂನ್ 28ರಿಂದ 2024ರ ಜನವರಿ12ರ ಅವಧಿಯಲ್ಲಿ ಹಂತ ಹಂತವಾಗಿ ಅವರು ತಿಳಿಸಿದ ಬ್ಯಾಂಕ್ ಖಾತೆಗಳಿಗೆ ಒಟ್ಟು ₹2.25 ಲಕ್ಷ ಪಾವತಿ ಮಾಡಿದ್ದರು.

Ad Widget

ಆದರೆ, ಆರೋಪಿಗಳು ಉದ್ಯೋಗ ನೀಡದೆ, ಪಡೆದುಕೊಂಡ ಹಣವನ್ನೂ ಹಿಂತಿರುಗಿಸದೆ ವಂಚಿಸಿದ್ದಾರೆ. ಸಂಪ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Leave a Comment

Your email address will not be published. Required fields are marked *