Ad Widget .

ಸಂಗೀತ ನಿರ್ದೇಶಕ ಇಳಯರಾಜ ಪುತ್ರಿ ಭವತಾರಿಣಿ ವಿಧಿವಶ

ಸಮಗ್ರ ನ್ಯೂಸ್: ಖ್ಯಾತ ಸಂಗೀತ ನಿರ್ದೇಶಕ ಇಳಯರಾಜಾ ಅವರ ಮಗಳು ಮತ್ತು ಹಿನ್ನೆಲೆ ಗಾಯಕಿ ಭವತಾರಿಣಿ ವಿಧಿವಶರಾಗಿದ್ದಾರೆ.

Ad Widget . Ad Widget .

ಭವತಾರಿಣಿ ಪಿತ್ತಜನಕಾಂಗದ ಕ್ಯಾನ್ಸರ್’ನಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಶ್ರೀಲಂಕಾಕ್ಕೆ ತೆರಳಿದ್ದರು.
ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಂಜೆ 5 ಗಂಟೆ ಸುಮಾರಿಗೆ ಶ್ರೀಲಂಕಾದಲ್ಲಿ ನಿಧನರಾದರು. ಅವರ ಪಾರ್ಥಿವ ಶರೀರವನ್ನು ಜನವರಿ 26ರಂದು ಚೆನ್ನೈಗೆ ತರಲಾಗುವುದು. ಭವತಾರಿಣಿ 47 ವರ್ಷ ವಯಸ್ಸಾಗಿದ್ದು, ಪತಿಯನ್ನು ಅಗಲಿದ್ದಾರೆ.

Ad Widget . Ad Widget .

ಇಳಯರಾಜಾ ಅವರ ಮಗಳು ಮತ್ತು ಕಾರ್ತಿಕ್ ರಾಜಾ ಮತ್ತು ಯುವನ್ ಶಂಕರ್ ರಾಜಾ ಅವರ ಸಹೋದರಿಯಾಗಿದ್ದ ಭವತಾರಿಣಿ, ‘ಭಾರತಿ’ ಚಿತ್ರದ ‘ಮಯಿಲ್ ಪೋಲಾ ಪೊನ್ನು ಒನ್ನು’ ಎಂಬ ತಮಿಳು ಹಾಡಿಗಾಗಿ ಅವರು ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನ ಪಡೆದಿದ್ದಾರೆ.

Leave a Comment

Your email address will not be published. Required fields are marked *