ಸಮಗ್ರ ನ್ಯೂಸ್ : ಮಕ್ಕಳಲ್ಲಿ ಈಗಲೇ ದೇಶಾಭಿಮಾನ ಬೆಳೆದರೆ ಮುಂದೆ ಈ ಮಕ್ಕಳೇ ದೇಶದ ಆಸ್ತಿಯಾಗಿ ಬೆಳೆಯಲು ಸಾಧ್ಯ.ಅದಕ್ಕಾಗಿ ಮಕ್ಕಳಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿಯ ಜ್ಞಾನದ ಜೊತೆಯಲ್ಲಿ ದೇಶಾಭಿಮಾನದ ಬೆಳಕನ್ನು ಈಗಿಂದಲೇ ಮೂಡಿಸಬೇಕೆಂದು ನಿವೃತ ಶಿಕ್ಷಕ ತೀರ್ಥರಾಮ ಅಡ್ಕಬಳೆ ಹೇಳಿದರು.

ಅವರು ಸರಕಾರಿ ಉನ್ನತಿಕರೀಸಿದ ಹಿರಿಯ ಪ್ರಾಥಮಿಕ ಶಾಲೆ ಜಯನಗರದಲ್ಲಿ 75ನೇ ವರ್ಷದ ಗಣರಾಜ್ಯೋತ್ಸವ ಆಚರಣೆಯಲ್ಲಿ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿ ಮಾತನಾಡಿದರು.ಇದೇ ಸಂದರ್ಭದಲ್ಲಿ ಅವರು ದತ್ತಿ ನಿಧಿಯನ್ನು ಘೋಷಣೆ ಮಾಡಿ ಶುಭ ಹಾರೈಸಿದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮುದ್ದಪ್ಪ ಅವರು ಧ್ವಜರೋಹಣ ಮಾಡಿ ಶುಭ ಹಾರೈಸಿದರು. ಬಳಿಕ ಮಕ್ಕಳಿಂದ ಆಕರ್ಷಣಿಯ ಪಥಸಂಚಲನ ಮತ್ತು ಗೌರವ ವಂದನೆ ಬಳಿಕ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

ವೇದಿಕೆಯಲ್ಲಿ ನಪಂ. ಸದಸ್ಯ ಬಾಲಕೃಷ್ಣ ಭಟ್ ಕೊಡಂಕಿರಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮುದ್ದಪ್ಪ, ಮುಖ್ಯ ಶಿಕ್ಷಕಿ ವೀಣಾ, ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ನಳಿನಿ ಭಟ್, ಶ್ರೀ ನಾಗಬ್ರಹ್ಮ ಆದಿ ಮೊಗೇರ್ಕಳ ದೈವಸ್ಥಾನದ ಆಡಳಿತ ಮಂಡಳಿಯ ಕಾರ್ಯದರ್ಶಿ ಸುಂದರ ಕುದ್ಪಾಜೆ, ಫ್ರೆಂಡ್ಸ್ ಕ್ಲಬ್ (ರಿ) ಜಯನಗರ ಇದರ ಕಾರ್ಯದರ್ಶಿ ಜನಾರ್ಧನ.ಜಿ ಜಯನಗರ, ಶಾಲಾಭಿವೃದ್ಧಿ ಸಮಿತಿಯ ಮಾಜಿ ಅಧ್ಯಕ್ಷ ಹಸೈನಾರ್ ಜಯನಗರ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಾಲಾ ಶಿಕ್ಷಕರಾದ ಭಾರತಿ, ಅಶ್ವಿನಿ ಹಾಗೂ ಶಾಲಾಭಿವೃದ್ಧಿ ಸಮಿತಿಯ ಸದಸ್ಯರುಗಳು, ಮಕ್ಕಳ ಪೋಷಕರು, ಶಾಲಾ ಹಳೆ ವಿದ್ಯಾರ್ಥಿಗಳು, ಶಾಲಾಭಿಮಾನಿಗಳು ಭಾಗವಹಿಸಿದ್ದರು. ಶಾಲಾ ಶಿಕ್ಷಕಿ ಮಮತಾ ಕಾರ್ಯಕ್ರಮವನ್ನು ನಿರೂಪಿಸಿ, ಸ್ವಾಗತಿಸಿ, ಶಿಕ್ಷಕಿ ನಳಿನಾಕ್ಷಿ ಅವರು ವಂದಿಸಿದರು. ಬಳಿಕ ಸಿಹಿ ತಿಂಡಿ ವಿತರಿಸಿದರು.