Ad Widget .

ಫೆ.16ಕ್ಕೆ ಭಾರತ ಬಂದ್ ಗೆ ಕರೆ ಕೊಟ್ಟ ರೈತ ಸಂಘಟನೆಗಳು

ಸಮಗ್ರ ನ್ಯೂಸ್: ದೇಶದಾದ್ಯಂತ ರೈತರು ಬೆಳೆದ ಬೆಳೆಗಳಿಗೆ ಕನಿಷ್ಠ ಬೆಂಬಲ ನೀಡುವಂತೆ ಹಾಗೂ ದೇಶದಲ್ಲಿರುವ ಕೆಲವು ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ರೈತ ಸಂಘಟನೆಗಳು ಫೆಬ್ರವರಿ 16ರಂದು ಭಾರತ್​ ಬಂದ್​ಗೆ ಕರೆ ನೀಡಿವೆ.

Ad Widget . Ad Widget .

ಇದರಂತೆ ಫೆಬ್ರವರಿ 16ರಂದು ಭಾರತ್​​ ಬಂದ್​​ಗೆ ರೈತ ಸಂಘಟನೆಗಳು ಕರೆ ನೀಡಿದು ಈ ಬಂದ್​ಗೆ ವ್ಯಾಪಾರಿ ಸಂಘಟನೆಗಳೊಂದಿಗೆ ಸಾರಿಗೆ ಸಂಘಟನೆಗಳು, ಜನರು ಬೆಂಬಲ ನೀಡಬೇಕು ಎಂದು ಭಾರತೀಯ ಕಿಸಾನ್​​ ಯೂನಿಯನ್​​ ರಾಷ್ಟ್ರೀಯ ಮುಖಂಡ ರಾಕೇಶ್​ ಟಿಕಾಯತ್ ಮನವಿ ಮಾಡಿದ್ದಾರೆ.

Ad Widget . Ad Widget .

ದೇಶದಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲು ಫೆಬ್ರವರಿ 16ರಂದು ಭಾರತ್​​ ಬಂದ್​ ನಡೆಸಲು ತೀರ್ಮಾನ ಮಾಡಿದ್ದೇವೆ. ಇದರಲ್ಲಿ ದೇಶದ ಮೂಲೆ ಮೂಲೆಯಲ್ಲಿರುವ ರೈತ ಸಂಘಟನೆಗಳು ಭಾಗಿಯಾಗಲಿದೆ. ದೇಶದಾದ್ಯಂತ ರೈತ ಸಂಘಟನೆಗಳು ಕೆಲಸಕ್ಕೆ ಹೋಗದೆ ಮುಷ್ಕಾರ ನಡೆಸಲಿದ್ದಾರೆ. ರೈತರು ಬೆಳೆದ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುವ ಕಾನೂನು, ನಿರುದ್ಯೋಗ ಸಮಸ್ಯೆ, ಅಗ್ನಿವೀರ್ ಯೋಜನೆಯಂತಹ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಎಲ್ಲಾ ವರ್ಗದವರು ಒಗ್ಗಟ್ಟಿನಿಂದ ಮುಂದೇ ಸಾಗಬೇಕಿದೆ. ಈ ಮುಷ್ಕಾರದ ಮೂಲಕ ಸರ್ಕಾರಕ್ಕೆ ಗಟ್ಟಿ ಸಂದೇಶವನ್ನು ಕಳುಹಿಸಬೇಕಿದೆ ಎಂದು ಟಿಕಾಯತ್ ಕರೆ ನೀಡಿದ್ದಾರೆ.

ಜನರು ಸಹ ಆ ದಿನ ಯಾವುದೇ ವಸ್ತುಗಳನ್ನು ಖರೀದಿ ಮಾಡದೇ ಹೋರಾಟಕ್ಕೆ ಬೆಂಬಲ ನೀಡಬೇಕು. ರೈತರು ಮತ್ತು ಕಾರ್ಮಿಕರಿಗೆ ಬೆಂಬಲವಾಗಿ ಅಂಗಡಿಗಳನ್ನು ಮುಚ್ಚುವಂತೆ ನಾವು ವ್ಯಾಪಾರಸ್ಥರಲ್ಲಿ ಮನವಿ ಮಾಡುತ್ತೇವೆ ಎಂದು ಟಿಕಾಯತ್ ಹೇಳಿದ್ದಾರೆ

Leave a Comment

Your email address will not be published. Required fields are marked *