Ad Widget .

ಕಡಬ: ಆಶಕ್ತ ಕುಟುಂಬಕ್ಕೆ ಆಸರೆಯಾದ ಒಕ್ಕಲಿಗ ಗೌಡ ಮಹಾ ಸೇವಾ ಬಳಗ| ಶಾರದೆಗೆ ಒಲಿದ ಸೂರು!!

ಸಮಗ್ರ ನ್ಯೂಸ್: ಆರ್ಥಿಕವಾಗಿ ದುರ್ಬಲ ಹೊಂದಿದ ತಾಯಿ – ಮಗಳ ಕಷ್ಟಕ್ಕೆ ಮಿಡಿದ ಸಮಾನ ಮನಸ್ಕರ ತಂಡ ಆಸರೆಯಾಗಿದ್ದು, ಸೂರು ಕಲ್ಪಿಸಿ ಮಾನವೀಯತೆ ಮೆರೆದಿದೆ.

Ad Widget . Ad Widget .

ಒಕ್ಕಲಿಗ ಗೌಡ ಮಹಾ ಸೇವಾ ಬಳಗ ಕಡಬ ಇದರ ವತಿಯಿಂದ ತಾಯಿ ಮತ್ತು ಮಗಳಿಗೆ ಮನೆಯನ್ನು ದುರಸ್ತಿ ಮಾಡಿ ಹಸ್ತಾಂತರಿಸಿದ ಕಾರ್ಯಕ್ರಮವು ಜ.25 ರಂದು ಕಡಬ ತಾಲೂಕಿನ ಐತ್ತೂರು ಗ್ರಾಮದ ಆಜನದಲ್ಲಿ ನಡೆಯಿತು.

Ad Widget . Ad Widget .

ಕೆಲ ತಿಂಗಳ ಹಿಂದೆ ಅಷ್ಟೆ ಒಕ್ಕಲಿಗ ಗೌಡ ಮಹಾ ಸೇವಾ ಬಳಗ ಎಂಬ ಯುವಕರ ತಂಡ ಕಡಬದಲ್ಲಿ ಪ್ರಾರಂಭವಾಗಿತ್ತು. ಈ ಸೇವಾ ಬಳಗ ಒಂದು ಅಶಕ್ತ ತಾಯಿ ಮತ್ತು ಮಗಳಿಗೆ ಮನೆಯನ್ನು ದುರಸ್ತಿ ಮಾಡಿ ಅವರ ಜೀವನಕ್ಕೆ ಆಸರೆಯಾಗಿ ನಿಂತುಕೊಂಡಿತು. ಗ್ರಾಮದ ಶಾರದಾ ಹಾಗೂ ಆಕೆಯ ಮಗಳಿಗೆ ಸೂರು ಕಲ್ಪಿಸುವ ಕಾರ್ಯಕ್ರಮ ಹಮ್ಮಿಕೊಂಡು ಇದಕ್ಕಾಗಿ ಕಾರ್ಯತತ್ಪರವಾಯಿತು.

ಶಾರದಾ ಅವರ ಮನೆಯ ದುರಸ್ತಿ ಕಾರ್ಯವು ಸಂಘದ ಮುಂದಾಳತ್ವ ಹಾಗೂ ಸಮಾಜದ ಬಂಧುಗಳ ಸಹಾಯದಿಂದ ಯಶಸ್ವಿಯಾಗಿದೆ ಎಂದು ಒಕ್ಕಲಿಗ ಗೌಡ ಮಹಾ ಸೇವಾ ಬಳಗದ ಸದಸ್ಯರು ತಿಳಿಸಿದ್ದಾರೆ.

ಈ ಮನೆಯ ದುರಸ್ತಿ ವೆಚ್ಚ ಸುಮಾರು ಒಂದು ಕಾಲು ಲಕ್ಷ ಆಗಿದ್ದು, ಇದನ್ನು ಒಕ್ಕಲಿಗ ಗೌಡ ಮಹಾ ಸೇವಾ ಬಳಗ ಹಾಗೂ ಹೊರ ದಾನಿಗಳು ನೀಡಿದ್ದಾರೆ.

ಈ ಸಂಧರ್ಭದಲ್ಲಿ ಅರುಣ್ ಗೌಡ ಎಕ್ಸ್ ಆರ್ಮಿ, ಹೊನ್ನಪ್ಪ ಗೌಡ ಆಜನ, ನಾಗೇಶ ಗೌಡ ಕೋಕಳ, ಮನ ಮೋಹನ ಗೊಳಿಯಾಡಿ, ಒಕ್ಕಲಿಗ ಗೌಡ ಮಹಾ ಸೇವಾ ಬಳಗದ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *