ಸಮಗ್ರ ನ್ಯೂಸ್: ತನ್ನ ತಂಗಿ ಅನ್ಯಧರ್ಮೀಯ ಯುವಕನನ್ನು ಲವ್ ಮಾಡುತ್ತಿದ್ದಳೆಂಬ ಒಂದೇ ಕಾರಣಕ್ಕೆ ಅಣ್ಣನೊಬ್ಬ ಆಕೆಯೊಂದಿಗೆ ತನ್ನ ತಾಯಿಯನ್ನೂ ಕೆರೆಗೆ ತಳ್ಳಿ ಕೊಂದ ದಾರುಣ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಮರೂರು ಗ್ರಾಮದಲ್ಲಿ ನಡೆದಿದೆ.
19-ವರ್ಷ-ವಯಸ್ಸಿನ ಯುವತಿ ಧನುಶ್ರೀ ಮತ್ತು 43-ವರ್ಷ ವಯಸ್ಸಿನ ಅನಿತಾ ಮೃತ ಪಟ್ಟವರು ಎಂದು ಗುರುತಿಸಲಾಗಿದೆ. ಅವರನ್ನು ಕೆರೆಗೆ ತಳ್ಳಿದ ಆರೋಪ ಹೊತ್ತಿರುವ ಯುವಕನ ಹೆಸರು ನಿತಿನ್. ಅಗ್ನಿ ಶಾಮಕದಳ ಸಿಬ್ಬಂದಿ ಮೃತ ದೇಹಗಳನ್ನು ಹೊರತೆಗೆಯುವ ಪ್ರಯತ್ನ ಮಾಡುತ್ತಿದ್ದಾರೆ. ಇನ್ನೂ ಧನುಶ್ರೀ ಮತ್ತು ಅನಿತಾರನ್ನು ನೆಂಟರ ಮನೆಗೆ ಕರೆದೊಯ್ಯುವುದಾಗಿ ಹೇಳಿ ಕೆರೆದಡಕ್ಕೆ ಕರೆದುಕೊಂಡ ಬಂದ ನಿತಿನ್ ತಂಗಿಯನ್ನು ಕೆರೆಗೆ ತಳ್ಳಿದ್ದಾರೆ, ಮಗಳು ಬಿದ್ದಿರುವುದು ನೋಡಿ ತಾಯಿ ರಕ್ಷಿಸಲು ಮುಂದಾಗಿದ್ದಾರೆ ಆಗ ಅವರನ್ನು ಕೆರೆಗೆ ನೂಕಿದ ಎಂದು ಹೇಳಲಾಗಿದೆ. ಇನ್ನೂ ನಿತಿನ್ ತನ್ನ ತಂದೆಗೆ ತಾಯಿ ಮತ್ತು ತಂಗಿಯನ್ನು ಕೆರೆಗೆ ನೂಕಿ ಕೊಂದಿದ್ದನ್ನು ಹೇಳಿ ಮನೆಯಲ್ಲಿ ಆರಾಮಾಗಿ ನಿದ್ರಿಸಿದನಂತೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






