ಸಮಗ್ರ ನ್ಯೂಸ್: ನಾಳೆ 75ನೇ ಗಣರಾಜ್ಯೋತ್ಸವನ್ನು ದೇಶದೆಲ್ಲೆಡೆ ಆಚರಿಸಲಾಗುತ್ತದೆ. ಈ ಪ್ರಯುಕ್ತ ರಾಷ್ಟ್ರಪತಿ ಪದಕ ಘೋಷಣೆ ಮಾಡಲಾಗಿದ್ದು, ಕರ್ನಾಟಕದ 21 ಪೊಲೀಸ್ ಅಧಿಕಾರಿಗಳು ರಾಷ್ಟ್ರಪತಿ ಪದಕಕ್ಕೆ ಭಾಜನರಾಗಿದ್ದಾರೆ. ವಿಶಿಷ್ಟ ಸೇವೆಗಾಗಿ ಎಡಿಜಿಪಿ ಸೌಮೇಂದ್ರ ಮುಖರ್ಜಿ ಹಾಗೂ ಡಿವೈಎಸ್ಪಿ ಸುಧೀರ್ ಮಹದೇವ್ ಹೆಗ್ಡೆಗೆ ರಾಷ್ಟ್ರಪತಿ ಪದಕ ಘೋಷಣೆಯಾಗಿದೆ.
ಇನ್ನೂ ಗಮನಾರ್ಹ ಸೇವೆಯನ್ನು ಗುರುತಿಸಿ ಪೊಲೀಸರಿಗೆ ರಾಷ್ಟ್ರಪತಿ ಪದಕ ಘೋಷಣೆ ಮಾಡಲಾಗಿದೆ. ಐಜಿಪಿ ಪ್ರವೀಣ್ ಮಧುಕರ್ ಪವಾರ್, ಐಜಿಪಿ ರಮಣ್ ಗುಪ್ತಾ, ಎಎಸ್ಪಿ ಅನಿಲ್ಕುಮಾರ್.ಎಸ್, ಎಸಿಪಿ ಶಿವಗಂಗೆ ಪುಟ್ಟರಂಗಪ್ಪ, ಡಿವೈಎಸ್ಪಿ ರಘು ಕುಮಾರ್, ಎಸಿಪಿ ನಾರಾಯಣಸ್ವಾಮಿ, ಡಿವೈಎಸ್ಪಿ ಶ್ರೀನಿವಾಸ್ ರಾಜ್ ಬೆಟೋಲಿ, ಪೊಲೀಸ್ ಇನ್ಸ್ಪೆಕ್ಟರ್ ಮಾಸ್ತೇನಹಳ್ಳಿ ರಾಮಪ್ಪ ಹರೀಶ್, ಇನ್ಸ್ಪೆಕ್ಟರ್ ಸಣ್ಣ ರಂಗಪ್ಪ ವಿರೇಂದ್ರ ಪ್ರಸಾದ್, ಸಬ್ ಇನ್ಸ್ಪೆಕ್ಟರ್ ದಾದಾಪೀರ್ ಕಣ್ಣೂರ್ ಸಾಬ್, ವೈರಲೆಸ್ ಎಎಸ್ಐ ಸುರೇಶ್ ರಾಮಪ್ಪ ಪುಂಡಲಿಕಟ್ಟಿ, ಎಎಸ್ಐ ರಾಮ, ಎಸ್ಪಿ ಕಮಾಂಡೆಂಟ್ ಸಿಬ್ಬಂದಿ ನಾಗರಾಜ್ ಅಂಜಪ್ಪ, ಹೆಡ್ ಕಾನ್ಸ್ಟೇಬಲ್ ಸಿ.ವಿ.ಗೋವಿಂದರಾಜು, ಹೆಡ್ ಕಾನ್ಸ್ಟೇಬಲ್ ಮಣಿಕಂಠ ಮಂದರ್ ಬೈಲ್, ಎಎಸ್ಐ ಸಮಂತ್.ಎಸ್, ಹೆಡ್ ಕಾನ್ಸ್ಟೇಬಲ್ ನರಸಿಂಹರಾಜು ಎಸ್.ಎನ್, ಎಸ್ಐ ಪುಂಡಲಿಕ್ ಜೆ.ವಿ.ರಾಮರಾವ್ ನಾಯಕ್ಗೆ ರಾಷ್ಟ್ರಪತಿ ಪದಕ ಘೋಷಣೆಯಾಗಿದೆ.
ಅದೇ ಸಂದರ್ಭದಲ್ಲಿ ಪೊಲೀಸ್, ಅಗ್ನಿಶಾಮಕ ಸೇವೆ, ಗೃಹ ರಕ್ಷಕ ಮತ್ತು ಸಿವಿಲ್ ಡಿಫೆನ್ಸ್ & ಕರೆಕ್ಷನಲ್ ಸೇವೆಯ ಒಟ್ಟು 1132 ಸಿಬ್ಬಂದಿಗೆ ಶೌರ್ಯ / ಸೇವಾ ಪದಕಗಳನ್ನು ಘೋಷಣೆ ಮಾಡಲಾಗಿದೆ