Ad Widget .

ಇಂದು ಬೆಂಗಳೂರಿಗೆ ಅರುಣ್ ಯೋಗಿರಾಜ್ ಆಗಮನ… ಭವ್ಯ ಸ್ವಾಗತಕ್ಕೆ ತಯಾರಿ

ಸಮಗ್ರ ನ್ಯೂಸ್: ಅಯೋಧ್ಯೆಯ ರಾಮಮಂದಿರ ಉದ್ಘಾಟನೆ ಆಗಿ ಎರಡು ದಿನದ ಈ ಸಂಭ್ರಮದಲ್ಲಿ ಜನರೂ ಅಯೋಧ್ಯೆಯತ್ತ ರಾಮಲಲ್ಲಾನ ನೋಡಲು ಮುಗಿಬಿದ್ದಿದ್ದಾರೆ.
ಅದೇ ಬಾಲರಾಮನ ಕೆತ್ತಿದ ಶಿಲ್ಪಿ ಅರುಣ್ ಯೋಗಿರಾಜ್ ಇಷ್ಟು ದಿನ ಅಯೋಧ್ಯೆಯಲ್ಲಿದ್ದು ಇಂದು ಕರುನಾಡಿಗೆ ವಾಪಸ್ಸಾಗುತ್ತಿದ್ದಾರೆ. ಇಂದು ಬೆಂಗಳೂರಿಗೆ ಅರುಣ್ ಯೋಗಿರಾಜ್ ಆಗಮನವಾಗಲಿದೆ. ಸಂಜೆ 5.30ಕ್ಕೆ ಕೆಂಪೇಗೌಡ ಏರ್‌ಪೋರ್ಟ್ಗೆ ಅರುಣ್ ಆಗಮಿಸಲಿದ್ದು ಭವ್ಯ ಸ್ವಾಗತ ಕೋರಲು ಹಿಂದೂ ಸಮಾಜದ ಮುಖಂಡರು ತಯಾರಾಗಿದ್ದಾರೆ.

Ad Widget . Ad Widget . Ad Widget . Ad Widget .

ಅಯೋಧ್ಯೆಯಲ್ಲಿ ಮಾತನಾಡಿದ ಶಿಲ್ಪಿ ಅರುಣ್ ಯೋಗಿರಾಜ್ ರಾಮಲಲ್ಲಾ ಮೂರ್ತಿ ಕೆತ್ತುವ ಕೆಲಸ ಕೊಟ್ಟಿದ್ದಕ್ಕೆ ಧನ್ಯವಾದ, ವಿಗ್ರಹ ದೇಶದ ಜನರಿಗೆ ಇಷ್ಟವಾಗಿದೆ. ಇದು ನನಗೆ ಖುಷಿ ಕೊಟ್ಟಿದೆ, ರಾಮ ಮೂರ್ತಿ ಕೆತ್ತುವ ಕೆಲಸದಲ್ಲಿ ನನ್ನದು ಏನೂ ಇಲ್ಲ, ನನಗಿಂತ ಬೇರೆಯವರು ತುಂಬಾ ಕೆಲಸ ಮಾಡಿದ್ದಾರೆ ಎಂದು ಹೇಳಿದ್ದಾರೆ.

Ad Widget . Ad Widget .

Leave a Comment

Your email address will not be published. Required fields are marked *