ಸಮಗ್ರ ನ್ಯೂಸ್: ಮುಜರಾಯಿ ಇಲಾಖೆಯಡಿ ಬರುವ ದೇವಾಲಯದ ಆದಾಯಕ್ಕಿಂತ ಹೆಚ್ಚು ಸಂಬಳ ನೀಡಲಾಗಿದೆ ಎಂಬ ಆರೋಪದಡಿ ಹಿರಿಯ ಅರ್ಚಕ, ಸಾಹಿತಿ ಹಿರೇಮಗಳೂರು ಕಣ್ಣಣ್ ಅವರಿಗೆ ರಾಜ್ಯ ಸರ್ಕಾರ ನೋಟಿಸ್ ನೀಡಿದೆ.
ಹಿರೇಮಗಳೂರು ಕಣ್ಣನ್ ಅವರು ಹಿರೇಮಗಳೂರು ಗ್ರಾಮದಲ್ಲಿರುವ ಕೊಂದಡ ರಾಮಚಂದ್ರಸ್ವಾಮಿ ದೇವಾಲಯದ ಅರ್ಚಕರಾಗಿದ್ದಾರೆ. ಕಣ್ಣನ್ ಅವರು ಅರ್ಚಕರಾಗಿರುವ ದೇವಾಲಯದ ಆದಾಯ ಕಡಿಮೆ ಇದ್ದು, ಸಂಬಳ ಹೆಚ್ಚುವರಿಯಾಗಿ ಪಾವತಿ ಆಗಿದೆ. ಹೀಗಾಗಿ 4,500 ರೂಪಾಯಿಯಂತೆ 10 ವರ್ಷದ 4,74,000 ರೂ. ಹಣವನ್ನು ವಾಪಸ್ ನೀಡುವಂತೆ ತಹಶೀಲ್ದಾರ್ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಈ ವಿಚಾರದಲ್ಲಿ ತುಂಬಾ ಆಕ್ರೋಶ ವ್ಯಕ್ತವಾಗಿದ್ದು ಹಿರೇಮಗಳೂರು ಕಣ್ಣನ್ ಅವರು ಆತಂಕಕೊಳಗಾಗಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಪ್ರತಿಕ್ರಿಯಿಸಿ ಕಣ್ಣನ್ ಅವರಿಗೆ 24 ಸಾವಿರ ಬದಲು 90 ಸಾವಿರ ನೀಡಲಾಗಿದೆ, ತಹಶಿಲ್ದಾರರಿಂದ ಈ ತಪ್ಪು ನಡೆದಿದೆ, ಹೆಚ್ಚುವರಿ ಪಾವತಿಯನ್ನು ತಹಶಿಲ್ದಾರರಿಂದ ಪಾವತಿಸುತ್ತೇವೆ. ಈ ನೋಟಿಸ್ ಹಿಂಪಡೆಯುವಂತೆ ಹೇಳುತ್ತೇವೆ, ಹಿರೇಮಗಳೂರು ಕಣ್ಣನ್ ಅವರು ಭಯ ಪಡುವ ಅಗತ್ಯ ಇಲ್ಲ ಎಂದಿದ್ದಾರೆ.