Ad Widget .

ಇಂದು ರಾಮಮಂದಿರಕ್ಕೆ ಹರಿದು ಬಂದ ಜನಸಾಗರ..! ನಿಯಂತ್ರಿಸಲು ಪೊಲೀಸರ ಹರಸಾಹಸ

ಸಮಗ್ರ ನ್ಯೂಸ್: ನಿನ್ನೆ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾಗಿ ಇಡೀ ದೇಶವೇ ಸಂಭ್ರಮಿಸಿದೆ. ನಿನ್ನೆ 3 ಲಕ್ಷ ಭಕ್ತರು ಅಯೋಧ್ಯೆಯಲ್ಲಿ ರಾಮಲಲ್ಲಾ ದರ್ಶನಕ್ಕೆ ಆಗಮಿಸಿದ್ದು, ಮುಂಬರುವ ದಿನಗಳಲ್ಲಿ ಇದು ಹೆಚ್ಚಾಗುವ ಸಾಧ್ಯತೆ ಇದೆ ಎಂದು ರಾಮಮಂದಿರ ಅರ್ಚಕರು ಹೇಳಿದ್ದಾರೆ. ಹೊಸ ರಾಮ ಲಲ್ಲಾ ವಿಗ್ರಹದ ಪ್ರತಿಷ್ಠಾಪನೆಯ ನಂತರ ಅಯೋಧ್ಯೆಯ ರಾಮಮಂದಿರದ ಬಾಗಿಲುಗಳು ಮಂಗಳವಾರ ಸಾರ್ವಜನಿಕರಿಗೆ ತೆರೆದುಕೊಳ್ಳುತ್ತಿದ್ದಂತೆ ಜನರ ಪ್ರವಾಹವೇ ಹರಿದು ಬಂದಿದೆ. ನೂಕು ನುಗ್ಗಲು ಜಾಸ್ತಿಯಾಗಿತು ಎಲ್ಲರಿಗೂ ದರ್ಶನ ಪಡೆಯಲು ಸಾಧ್ಯವಾಗುವುದಿಲ್ಲ. ನಾಳೆ ಮತ್ತು ಮುಂದಿನ ದಿನಗಳಲ್ಲಿ ಇದೇ ರೀತಿ ಇರಲಿದೆ ಎಂದು ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಹೇಳಿದ್ದಾರೆ

Ad Widget . Ad Widget .

ರಾಮ ಜನ್ಮಭೂಮಿಯಲ್ಲಿರುವ ರಾಮಮಂದಿರಕ್ಕೆ ಭಕ್ತರು ಬರುತ್ತಿರುವ ಬಗ್ಗೆ ಮಾತನಾಡಿದ ಆಚಾರ್ಯ ಸತ್ಯೇಂದ್ರ ದಾಸ್ ಇದು ‘ತ್ರೇತಾ ಯುಗ’ವನ್ನು ನೆನಪಿಸುತ್ತದೆ ಎಂದಿದ್ದಾರೆ. ಇದು ಭಗವಾನ್ ರಾಮನ ಯುಗವನ್ನು ನೆನಪಿಸುವ ದೈವಿಕ ವಾತಾವರಣವನ್ನು ಸೂಚಿಸುತ್ತದೆ. ಇಂದು ತ್ರೇತಾಯುಗದ ಒಂದು ಝಲಕ್ ಗೋಚರಿಸುತ್ತಿದೆ, ಈಗ ಅಯೋಧ್ಯೆಗೆ ಹಲವಾರು ಭಕ್ತರು ಬಂದಿದ್ದಾರೆ. ಜೈ ಶ್ರೀ ರಾಮ್ ಘೋಷಣೆಗಳು ಇಲ್ಲಿ ಪ್ರತಿಧ್ವನಿಸುತ್ತಿವೆ. ನಾವು ತ್ರೇತಾಯುಗದ ಸಮಯದಲ್ಲಿ ಅಯೋಧ್ಯೆಗೆ ಹಿಂತಿರುಗಿದ್ದೇವೆ ಎಂದು ತೋರುತ್ತದೆ. ಹಾಗೆ ಆರತಿ ಬೆಳಿಗ್ಗೆ 6:30 ಕ್ಕೆ ಪ್ರಾರಂಭವಾಗುತ್ತದೆ. ಅಂದಿನಿಂದ ದರ್ಶನ ಲಭ್ಯವಿದೆ. ಮುಂದಿನ ದಿನಗಳಲ್ಲಿ ಆರತಿ ಮತ್ತು ಭೋಗ್‌ಗೆ ಸಂಬಂಧಿಸಿದಂತೆ ಹೊಸ ವ್ಯವಸ್ಥೆ ಅಗತ್ಯ ಎಂದು ಅವರು ಹೇಳಿದ್ದಾರೆ. ಬೆಳಿಗ್ಗೆ 6:30 ರಿಂದ ದರ್ಶನ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಪ್ರಾಣ ಪ್ರತಿಷ್ಠೆ ಮಾಡಿದ ಹೊಸ ಮೂರ್ತಿ ಮತ್ತು ಚಿಕ್ಕ ಮೂರ್ತಿಗಳಿಗೆ ಪೂಜೆ ಸಲ್ಲಿಸಲಾಗುತ್ತಿದೆ. ಭಕ್ತರು ‘ದರ್ಶನ’ ಪಡೆಯುತ್ತಿದ್ದಾರೆ” ಎಂದು ಅವರು ಹೇಳಿದರು.

Ad Widget . Ad Widget .

ಇಂದು ಅಯೋಧ್ಯೆಯಲ್ಲಿ ಪೊಲೀಸರು ಜನರನ್ನು ನಿಯಂತ್ರಿಸುವಲ್ಲಿ ಹರಸಾಹಸ ಪಟ್ಟಿದ್ದಾರೆ. ಜನರ ಪ್ರವಾಹವೇ ಹರಿದು ಬಂದಿದು ನೂಕು ನುಗ್ಗಲು ಹೆಚ್ಚಾಗಿತ್ತು. ಪೊಲೀಸರು ಹಾಕಿದ ಬ್ಯಾರಿಕೇಡ್ ತಳ್ಳಿ ಜನರು ನುಗ್ಗುತ್ತಿದ್ದರು. ಮುಂಜಾನೆ 3 ಗಂಟೆಯಿಂದಲೇ ಜನರು ಸರತಿ ಸಾಲಿನಲ್ಲಿ ನಿಂತಿರುವುದು ಕಂಡು ಬಂದಿದೆ.
ಪರಿಸ್ಥಿತಿ ನಿಯಂತ್ರಿಸಲು ನಿಯಂತ್ರಣ ಕೊಠಡಿಯಿಂದ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಯಿತು.

Leave a Comment

Your email address will not be published. Required fields are marked *