ಸಮಗ್ರ ನ್ಯೂಸ್: ಮಾನ್ಯ ರಾಜ್ಯಾಧ್ಯಕ್ಷರ ಮಾರ್ಗದರ್ಶನದಂತೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಸುಳ್ಯ ಶಾಖೆಯ ವತಿಯಿಂದ ಮಾನ್ಯ ಶಾಸಕರಿಗೆ ವಿವಿಧ ಬೇಡಿಕೆಗಳ ಮನವಿ ಜ. 21ರಂದು ಸಲ್ಲಿಸಲಾಯಿತು.
ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸುಳ್ಯ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸುಳ್ಯ ಇದರ ಆಶ್ರಯದಲ್ಲಿ ಗುರು ಸ್ಪಂದನಾ ಕಾರ್ಯಕ್ರಮ ಸುಳ್ಯದ ಸೈಂಟ್ ಬ್ರಿಜಿಡ್ಸ್ ಶಾಲೆಯಲ್ಲಿ ನಡೆಯಿತು.
ಮನವಿಯಲ್ಲಿ ಸಲ್ಲಿಸಿದ ವಿಷಯಗಳು:
1)ಏಳನೇ ವೇತನ ಆಯೋಗದಿಂದ ವರದಿ ಪಡೆದು ಪರಿಷ್ಕೃತ ವೇತನ ಭತ್ಯಗಳನ್ನು ಜಾರಿಗೊಳಿಸುವುದು.
2) ಹಳೆ ಪಿಂಚಣಿ ಯೋಜನೆ ಜಾರಿ
3) ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಅನುಷ್ಠಾನ.
ಈ ಪ್ರಮುಖ ಬೇಡಿಕೆಗಳನ್ನು ಸುಳ್ಯ ಶಾಖೆಯ ಸಮಸ್ತ ಸರ್ಕಾರಿ ನೌಕರರ ಪರವಾಗಿ ಮಾನ್ಯ ಮುಖ್ಯಮಂತ್ರಿಗಳಿಗೆ ಒತ್ತಡ ತರಲು ಮನವಿ ಮಾಡುವಂತೆ ಕೋರಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವೃಂದ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಪದಾಧಿಕಾರಿಗಳು, ಸಮಸ್ತ ನೌಕರ ಬಂಧುಗಳು, ಸಂಘದ ಎಲ್ಲಾ ಪದಾಧಿಕಾರಿಗಳು ನಿರ್ದೇಶಕರು, ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.