Ad Widget .

ಸುಳ್ಯ: ಕೊಡಗು ದಕ್ಷಿಣ ಕನ್ನಡ ಗೌಡ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 3ನೇ ಶಾಖೆ ಶುಭಾರಂಭ

ಸಮಗ್ರ ನ್ಯೂಸ್: ಕೊಡಗು ದಕ್ಷಿಣ ಕನ್ನಡ ಗೌಡ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 3ನೇ ಶಾಖೆ ಸುಳ್ಯದ ಶ್ರೀರಾಮ್ ಪೇಟೆಯಲ್ಲಿರುವ ಶ್ರೀಹರಿ ಕಾಂಪ್ಲೆಕ್ಸ್ ನಲ್ಲಿ ಜ. 21ರಂದು ಶುಭಾರಂಭಗೊಂಡಿತು.

Ad Widget . Ad Widget .

ಸುಳ್ಯದ ಮಾಜಿ ಶಾಸಕ ಮತ್ತು ಮಾಜಿ ಸಚಿವರಾದ ಎಸ್. ಅಂಗಾರ ರವರು ನೂತನ ಸಂಸ್ಥೆಯನ್ನು ಉದ್ಘಾಟಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಪಾಣತ್ತಲೆ ಪಳಂಗಪ್ಪ ವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಶ್ರೀಹರಿ ಕಾಂಪ್ಲೆಕ್ಸ್ ನ ಮಾಲಕ ಕೃಷ್ಣ ಕಾಮತ್ ಅರಂಬೂರು, ಸುಳ್ಯ ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್‌ ಬಂಟ್ವಾಳ್, ಕೊಡಗು ಗೌಡ ವಿದ್ಯಾಸಂಘದ ಅಧ್ಯಕ್ಷ ನವೀನ್‌ ಅಂಬೆಕಲ್ಲು ಉಪಸ್ಥಿತರಿದ್ದರು.

Ad Widget . Ad Widget .

ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ನಂಗಾರು ನಿಂಗರಾಜು, ನಿರ್ದೇಶಕರುಗಳಾದ ರವೀಂದ್ರನಾಥ ಕೇವಳ, ಅಮರನಾಥ್ ಸುಳ್ಯಕೋಡಿ, ಹುದೇರಿ ದೇವಕಿ, ಗಂಗಾಧರ ಗೌಡ ಕನ್ನಡ್ಕ, ರಾಧಾಕೃಷ್ಣ ಗುತ್ತಿಗಾರುಮೂಲೆ, ತಿಲೋತ್ತಮೆ ಕಲ್ಲುಮುಟ್ಟು, ಸಮಾಜದ ಗಣ್ಯರಾದ ಪೂಂಬಾಡಿ ತಿಮ್ಮಪ್ಪ ಗೌಡ, ಕೆ.ವಿ.ಹೇಮನಾಥ, ಪದ್ಮಕೋಲ್ಟಾರ್, ಸಂತೋಷ್ ಜಾಕೆ, ಎನ್.ಎ. ಜ್ಞಾನೇಶ್, ಶ್ರೀನಿಧಿ ಕಾಯರ್ತೋಡಿ, ದೇವಿ ಪ್ರಸಾದ್‌ ಇಂಜಿನಿಯರ್, ಚಂದ್ರಹಾಸ ಕಾನತ್ತಿಲ, ಜತ್ತಪ್ಪ ರೈ ಮೊದಲಾದವರು ಉಪಸ್ಥಿತರಿದ್ದರು. ಉಪಾಧ್ಯಕ್ಷ ನಿಂಗರಾಜು ನಂಗಾರು ವಂದಿಸಿದರು.

*ಸಂಘದಲ್ಲಿ ಅಡಮಾನ ಸಾಲ, ವಾಹನ ಸಾಲ, ಜಾಮೀನು ಸಾಲ, ಪಿಲ್ಮ ಠೇವಣಿ ಮೇಲೆ ಸಾಲಸೌಲಭ್ಯ ನೀಡಲಾಗುವುದು.
*ಶಾಖೆಯ ಶುಭಾರಂಭದ ಪ್ರಯುಕ್ತ ಸಾಮಾನ್ಯರಿಗೆ ಶೇ.9.5 ಹಾಗೂ ಹಿರಿಯ ನಾಗರಿಕರಿಗೆ ಶೇ.10.00 ಒಂದು ವರ್ಷದವರೆಗಿನ ಠೇವಣಿ ಮೇಲೆ 2024ರ ಮಾರ್ಚ್ ಅಂತ್ಯದವರೆಗೆ ಆಕರ್ಷಕ ಬಡ್ಡಿ ನೀಡಲಾಗುವುದು.
*ರೂ 100ರಿಂದ ಯಾವುದೇ ಮೊತ್ತದ ಪಿಗ್ಮಿ
*ಸತತ 6 ವರ್ಷಗಳಿಂದ 11% ಡಿವಿಡೆಂಡ್ ನೀಡಲಾಗುತ್ತಿದೆ.
*ಬೆಂಗಳೂರಿನಲ್ಲಿ ಮುಖ್ಯ ಕಚೇರಿ, ಕುಶಾಲನಗರ, ಮಡಿಕೇರಿ, ಸುಳ್ಯ ಸೇರಿ ಮೂರು ಶಾಖೆಗಳು
*12 ವರ್ಷಗಳು ಸಂದಿದ್ದು, ಪ್ರತಿವರ್ಷ ಲಾಭದಲ್ಲಿ ನಡೆಯುತ್ತಿದೆ.
*ಸುಮಾರು 2 ಸಾವಿರ ಸದಸ್ಯರಿದ್ದು, ವಾರ್ಷಿಕ ಸುಮಾರು 60 ಕೋಟಿ ವ್ಯವಹಾರ ನಡೆಯುತ್ತಿದೆ.

Leave a Comment

Your email address will not be published. Required fields are marked *