ಪುತ್ತೂರು: ಭಜರಂಗದಳ‌ ಮುಖಂಡ ಮುರಳೀಕೃಷ್ಣ ಹಸಂತಡ್ಕರಿಗೆ ಪಿತೃವಿಯೋಗ

ಸಮಗ್ರ ನ್ಯೂಸ್: ಪುತ್ತೂರು ಬಜರಂಗದಳ ದಕ್ಷಿಣ ಪ್ರಾಂತ ಸಹ ಸಂಯೋಜಕ ಮುರಳಿಕೃಷ್ಣ ಹಸಂತಡ್ಕ ಅವರ ತಂದೆ ಪಿಎಲ್.ಡಿ ಬ್ಯಾಂಕ್ ಮಾಜಿ‌ ಅಧ್ಯಕ್ಷ ಹಸಂತಡ್ಕ ರಾಮ ಭಟ್ ಅವರು ಜ.21 ರಂದು ತಡ ರಾತ್ರಿ ನಿಧನರಾದರು.

Ad Widget ... ..

ರಾಮ ಭಟ್ ಅವರು ಪುತ್ತೂರು ಭೂ ಅಭಿವೃದ್ದಿ ಬ್ಯಾಂಕ್ ನ ಮಾಜಿ ಅಧ್ಯಕ್ಷರಾಗಿದ್ದು, ಸಂಘ ಪರಿವಾರದ ಹಿರಿಯ ಕಾರ್ಯಕರ್ತರಾಗಿದ್ದರು. ಮೃತರು ಪತ್ನಿ ಸುಮತಿ, ಪುತ್ರ ಮುರಳಿಕೃಷ್ಣ ಹಸಂತಡ್ಕ, ಪುತ್ರಿರಾದ ನಯನಾ ಶಂಕರಿ ಮತ್ತು ನೈಜೀರಿಯದಲ್ಲಿರುವ ಅಶ್ವಿನಿ ಶಂಕರಿ, ಸೊಸೆ, ಅಳಿಯ, ಮೊಮ್ಮಕ್ಕಳನ್ನು ಅಗಲಿದ್ದಾರೆ.

Ad Widget

ಜ.23 ಕ್ಕೆ ಅಂತ್ಯ ಸಂಸ್ಕಾರ
ರಾಮ ಭಟ್ ಅವರ ಪುತ್ರಿ ಅಶ್ವಿನಿ ಶಂಕರಿ ಅವರು ನೈಜೀರಿಯದಲ್ಲಿದ್ದು ಅವರು ಅಲ್ಲಿಂದ ಜ.23 ಕ್ಕೆ ಸ್ವದೇಶಕ್ಕೆ ತಲುಪುವ ಹಿನ್ನಲೆಯಲ್ಲಿ ಜ.23 ರ ಬೆಳಿಗ್ಗೆ ಗಂಟೆ 10.30 ಕ್ಕೆ ರಾಮ ಭಟ್ ಅವರ ಅಂತ್ಯ ಸಂಸ್ಕಾರ ನೆರವೇರಿಸಲಾಗುವುದು ಎಂದು ಮೃತರ ಪುತ್ರ ಮುರಳಿಕೃಷ್ಣ ಹಸಂತಡ್ಕ ಅವರು ತಿಳಿಸಿದ್ದಾರೆ.

Leave a Comment

Your email address will not be published. Required fields are marked *