ಸಮಗ್ರ ನ್ಯೂಸ್: ಯುವಕ ಮಂಡಲ ಕೈಕಂಬ ವತಿಯಿಂದ ಕೈಕಂಬ ವೃತ್ತದಲ್ಲಿ ಅಯೋಧ್ಯೆ ಶ್ರೀ ರಾಮ ನ ಪ್ರತಿಷ್ಠಾಪನೆ ಅಂಗವಾಗಿ ಜ.22 ರಂದು ಸಂಜೆ 7 ಗಂಟೆಗೆ ದೀಪೋತ್ಸವ ಹಾಗೂ ರಾಮತಾರಕ ಜಪದೊಂದಿಗೆ ಮಹಾ ಮಂಗಳಾರತಿ ನಡೆಯಿತು.

ಈ ಸಂದರ್ಭದಲ್ಲಿ ಶಿವಪ್ರಸಾದ್ ನಡುತೋಟ ಹಾಗೂ ಪ್ರದೀಪ್ ಕಳಿಗೆ ಅವರು ನೆರೆದಿದ್ದ ಭಕ್ತರನ್ನು ಉದ್ದೇಶಿಸಿ ಮಾತನಾಡಿದರು. ನೆರೆದಿದ್ದ ಭಕ್ತರಿಗೆ ಸಿಹಿ ತಿಂಡಿ ಹಂಚಿ ನಂತರ ಸಿಡಿಮದ್ದು ಸಿಡಿಸಿ ಸಂಭ್ರಮಾಚರಿಸಲಾಯಿತು.