Ad Widget .

ಇಂದು ಧ್ರುವ ಸರ್ಜಾ ಮಕ್ಕಳ ನಾಮಕರಣ…!

ಸಮಗ್ರ ನ್ಯೂಸ್: ಇಂದು ದೇಶದೆಲ್ಲೆಡೆ ಸಂಭ್ರಮದ ವಾತಾವರಣ ಅಯೋಧ್ಯೆಯಲ್ಲಿ ಬಾಲರಾಮನ ಪ್ರತಿಷ್ಠಾಪನೆ ನಡೆದಾಯಿತ್ತು, ಈ ಶುಭದಿನದ ಈ ಸಂಭ್ರಮದಲ್ಲಿ ನಟ ಧ್ರುವ ಸರ್ಜಾ ತಮ್ಮ ಇಬ್ಬರು ಮಕ್ಕಳಿಗೆ ನಾಮಕರಣ ಮಾಡಿದ್ದಾರೆ. ಮಗಳಿಗೆ ರುದ್ರಾಕ್ಷಿ ಮತ್ತು ಮಗನಿಗೆ ಹಯಗ್ರೀವ ಎಂದು ನಾಮಕರಣ ಮಾಡಿದ್ದಾರೆ. ಧ್ರುವ ಸರ್ಜಾ ಫಾರ್ಮ್ ಹೌಸ್ ನಲ್ಲಿ ಈ ನಾಮಕರಣ ಶಾಸ್ತ್ರ ನಡೆದಿದೆ.

Ad Widget . Ad Widget .

ಇಲ್ಲಿ ಮುಖ್ಯವಾಗಿ ಮಕ್ಕಳಿಗೆ ವಿಶೇಷ ಮತ್ತು ಅರ್ಥಪೂರ್ಣವಾದ ಹೆಸರನ್ನೇ ಇಟ್ಟಿದ್ದಾರೆ ಧ್ರುವ ಸರ್ಜಾ. ಧ್ರುವ ಸರ್ಜಾ ಅಂಡ್ ಫ್ಯಾಮಿಲಿ ಆಂಜನೇಯನ ಭಕ್ತರು. ಹನುಮನ ಉಸಿರಾಗಿರುವ ರಾಮನ ಮಂದಿರ ಉದ್ಘಾಟನೆ ದಿನದಂದು ತಮ್ಮ ಪುತ್ರಿ ಹಾಗೂ ಪುತ್ರನಿಗೆ ನಾಮಕರಣ ಮಾಡಿದ್ದು ವಿಶೇಷ.

Ad Widget . Ad Widget .

ಮಕ್ಕಳ ನಾಮಕರಣ ಸಮಾರಂಭಕ್ಕೆ ಬಾಲಿವುಡ್ ನಟ ಸಂಜಯ್ ದತ್, ಅರ್ಜುನ್ ಸರ್ಜಾ, ಜೋಗಿ ಪ್ರೇಮ್, ರಕ್ಷಿತಾ ಆಗಮಿಸಿದರು. ಇನ್ನೂ ಮಗಳಿಗೆ ರುದ್ರಾಕ್ಷಿ ಡಿ ಸರ್ಜಾ, ಮಗನಿಗೆ ಹಯಗ್ರೀವ ಅನ್ನೋ ಹೆಸರಿಟ್ಟಿದ್ದೇವೆ. ಒತ್ತಕ್ಷರ ಹೆಸರಿಡಬೇಕು ಅಂತ ಈ ನಿರ್ಧಾರ ಮಾಡಿದ್ವಿ ಒತ್ತಕ್ಷರ ಅಂದ್ರೆ ತುಂಬಾ ಒಳ್ಳೆಯದು ಎನ್ನುವ ನಂಬಿಕೆ ಇದೆ. ಯಾವುದೇ ಫ್ಯಾನ್ಸಿ ಹೆಸರು ಇಡಬಾರದು ಅಂತ ನಿರ್ಧಾರ ಮಾಡಿದ್ವಿ ಎಂದು ಧ್ರುವ ಸರ್ಜಾ ಹೇಳಿದ್ರು

Leave a Comment

Your email address will not be published. Required fields are marked *