Ad Widget .

ಮುಸ್ಲಿಂ ಯುವಕರು ಅಲ್ಲಾಹ್ ಅಕ್ಬರ್ ಎನ್ನುತ್ತಾ ಬಾಂಬ್ ಹಾಕುತ್ತಾರೆ| ಸುಳ್ಳಾರೋಪಗೈದ ಕಾಂಗ್ರೆಸ್ ನಾಯಕ ಟಿ.ಎಂ ಶಹೀದ್ ಹೇಳಿಕೆಗೆ ಎಸ್‌ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಅಬ್ದುಲ್ ರಝಾಕ್ ಕೆನರಾ ಆಕ್ರೋಶ

ಸಮಗ್ರ ನ್ಯೂಸ್:ಜ 22; ಕಾಂಗ್ರೆಸ್ ನಾಯಕ ಟಿ.ಎಂ ಶಹೀದ್ ಪತ್ರಿಕಾಗೋಷ್ಠಿಯಲ್ಲಿ ರಾಮ ಮಂದಿರ ಉದ್ಘಾಟನೆ ವಿಚಾರವಾಗಿ ಮಾತನಾಡುತ್ತಾ ಸಂಘಪರಿವಾರ ಕ್ರೌರ್ಯತೆಯನ್ನು ಹೇಳಿ ಬ್ಯಾಲೆನ್ಸ್ ಮಾಡಲು, ಅಥವಾ ಬಿಜೆಪಿ ಸಂಘ ಪರಿವಾರದ ಪ್ರೀತಿ ಗಳಿಸಲು, ಮುಸ್ಲಿಂ ಯುವಕರು ಅಲ್ಲಾಹ್ ಅಕ್ಬರ್ ಎಂದು ಹೇಳುತ್ತಾ ಬಾಂಬ್ ಹಾಕುತ್ತಾರೆ ಎಂದು ಸುಳ್ಳಾರೋಪಗೈದ ಅವರ ಹೇಳಿಕೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸುಳ್ಯ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಅಬ್ದುಲ್ ರಝಾಕ್ ಕೆನರಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Ad Widget . Ad Widget .

ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಟಿ.ಎಂ ಶಹೀದ್ ರವರು ಯಾರನ್ನು ತೃಪ್ತಿ ಪಡಿಸಲು ಈ ರೀತಿಯ ಹೇಳಿಕೆಯನ್ನು ನೀಡಿದ್ದಾರೆ ಎಂಬುದು ಸ್ಪಷ್ಟ. ಭಾರತದಲ್ಲಿ ರಾಮನಿಗೆ ಜೈಕಾರ ಹಾಕಿಕೊಂಡು ಹಲವಾರು ಅಮಾಯಕ ಮುಸ್ಲಿಂ ಯುವಕರನ್ನು ಗುಂಪು ಹಲ್ಲೆ ನಡೆಸಿ ಹತ್ಯೆಗೈದ ಇತಿಹಾಸ ಸಂಘ ಪರಿವಾರಕ್ಕೆ ಇದೆ. ಅದೇ ರೀತಿ ಬಾಬ್ರಿ ಮಸೀದಿ ಹೆಸರಿನಲ್ಲಿ ಫ್ಯಾಸಿಸ್ಟರು ನಡೆಸಿದ ವ್ಯವಸ್ಥಿತ ಗಲಭೆಯ ಸಂದರ್ಭದಲ್ಲಿ ಕೂಡ ನೂರಾರು ಮುಸ್ಲಿಮರ ಜೀವ,ಆಸ್ತಿ-ಪಾಸ್ತಿ ಹಾನಿಯಾಗಿದೆ.

Ad Widget . Ad Widget .

ಆದರೆ ಯಾವ ಮುಸ್ಲಿಮನು ಕೂಡ ಅಲ್ಲಾಹ್ ಅಕ್ಬರ್ ಹೇಳಿಕೊಂಡು ಯಾರನ್ನು ಕೊಂದ ಉದಾಹರಣೆ ಇಲ್ಲದೆ ಇರುವಾಗ ಸಂಘ-ಪರಿವಾರವನ್ನು ಮೆಚ್ಚಿಸಲು ಅಥವಾ ಇನ್ನೊಂದು ಹೇಳಿಕೆಗೆ ಬ್ಯಾಲೆನ್ಸ್ ಮಾಡಲು ಮುಸ್ಲಿಂ ಯುವಕರ ಬಗ್ಗೆ ಸುಳ್ಳಾರೊಪ ಮಾಡುವುದು ಟಿ.ಎಂ.ಶಹೀದ್ ರವರ ಪಕ್ಷ ಕಲಿಸಿಕೊಟ್ಟ ಸಂಸ್ಕೃತಿಯೇ ಎಂದು ರಝಕ್ ಕೆನರಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗೂ ಈ ಬಗ್ಗೆ ಕೂಡಲೇ ಟಿ.ಎಂ ಶಹೀದ್ ಮುಸ್ಲಿಂ ಸಮುದಾಯದ ಕ್ಷಮೆ ಯಾಚಿಸಬೇಕೆಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment

Your email address will not be published. Required fields are marked *