ಸಮಗ್ರ ವಾರ್ತೆ: ವ್ಯಕ್ತಿಯೊಬ್ಬರು ವನ್ಯಜೀವಿಗಳಿಗೆ ಅಕ್ರಮ ಆಹಾರ ನೀಡಿದಲ್ಲದೇ ತಿಳಿಹೇಳಿದ ವ್ಯಕ್ತಿಗೆ ಅವಾಚ್ಯ ಶಬ್ದಗಳಿಂದ ಬೈದ ವ್ಯಕ್ತಿಯ ವಿರುದ್ಧ ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿಗಳಿಗೆ ದೂರು ನೀಡಲಾಗಿದೆ.
ಬಿಳಿನೆಲೆ ಗ್ರಾಮದ ಭುವನೇಶ್ ಎಂಬವರು ದೂರು ನೀಡಿದ್ದಾರೆ. ವನ್ಯಜೀವಿಗಳ ಅಧ್ಯಯನ ಹಾಗೂ ಸಂರಕ್ಷಣಾ ವಿಷಯದಲ್ಲಿ ಸುಬ್ರಹ್ಮಣ್ಯ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಭುವನೇಶ್ ಅವರು ಸುಬ್ರಹ್ಮಣ್ಯದತ್ತ ತೆರಳುವ ವೇಳೆ ಸುಬ್ರಹ್ಮಣ್ಯದ ವಲಯ ಅರಣ್ಯ ಇಲಾಖಾ ಕಛೇರಿ ಬಳಿ ವ್ಯಕ್ತಿಯೊಬ್ಬರು ಕಾರಿನಲ್ಲಿ ಬಂದು ರಸ್ತೆಯಲ್ಲಿ ನಿಲ್ಲಿಸಿ ಕೋತಿಗಳಿಗೆ ಬಿಸ್ಕತ್ತು ಹಾಕುತ್ತಿರುವುದನ್ನು ಗಮನಿಸಿದ್ದು, ಈ ಬಗ್ಗೆ ಆ ವ್ಯಕ್ತಿಯಲ್ಲಿ ವನ್ಯಜೀವಿಗಳಿಗೆ ಆಹಾರ ನೀಡುವುದು ಅಪರಾಧ ಹಾಗೂ ಅವೈಜ್ಞಾನಿಕ ಎಂದು ತಿಳಿಹೇಳಿದರೂ, ಆತ ಉದ್ದಟತನದಿಂದ ಆಹಾರ ನೀಡುವುದನ್ನು ನಿಲ್ಲಿಸದೇ, ತಿಳಿಹೇಳಿದ ಭುವನೇಶ್ ಅವರಿಗೆ ಅಬಾಚ್ಯ ಶಬ್ದಗಳಿಂದ ಬೈದು, ಬಲಪ್ರಯೋಗ ಮಾಡುಲು ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಇದೇ ರೀತಿ ಹಲವಾರು ಜನರು ಆಹಾರ ನೀಡುತ್ತಿದ್ದು, ಆಹಾರಕ್ಕಾಗಿ ರಸ್ತೆಗೆ ಬರುವ ವನ್ಯಜೀವಿಗಳು ವಾಹನದ ಅಡಿಗೆ ಸಿಲುಕಿ ಸಾವನ್ನಪ್ಪಿರುತ್ತದೆ. ಆದ್ದರಿಂದ ಕೋತಿಗಳ ಅನಾರೋಗ್ಯಕ್ಕೆ ಹಾಗೂ ಕಾನೂನು ಬಾಹಿರ ಕೆಲಸ ಮಾಡಿರುವ ವ್ಯಕ್ತಿಯ ಮೇಲೆ ವನ್ಯಜೀವಿ ಕಾಯ್ದೆ ಪ್ರಕಾರ ಕೇಸು ದಾಖಲಿಸಿ ಕ್ರಮ ಜರುಗಿಸುವಂತೆ ಅವರು ದೂರಿನಲ್ಲಿ ತಿಳಿಸಿದ್ದಾರೆ.